
ಬೆಂಗಳೂರಿನ ನುಡಿತೋರಣ ಸಾಹಿತ್ಯ ಮತ್ತು ಸಾಂಸ್ಕೃತಿಕ ಬಳಗ ಆಶ್ರಯದಲ್ಲಿ ಉಡುಪಿಯ ಪೇಜಾವರ ಅಧೋಕ್ಷಜ ಮಠದಲ್ಲಿ ನುಡಿಸಂಭ್ರಮ-೨೦೨೬ ನ್ನು ಆಚರಿಸಲಾಯಿತು. ಹಿರಿಯ ಸಾಹಿತಿ ಪ್ರೇಮಾಶಂಕರ್, ನೀಲಕಂಠ ಅಡಿಗ, ಎ ಎಸ್ ಎನ್ ಹೆಬ್ಬಾರ್, ಶ್ರೀಕಾಂತ ಪತ್ರೆಮರ, ವೆಂಕಟೇಶ ಶೇಷಾದ್ರಿ, ರಾಸು ವೆಂಕಟೇಶ ಭಾಗವಹಿಸಿದ್ದರು. ಸಂದರ್ಭದಲ್ಲಿ ಮೂವರು ಹಿರಿಯ ಲೇಖಕಿಯರಾದ ರಾಧಾ ಟೇಕಲ್, ಶೈಲ ಜುಕುಮಾರ್ ಹಾಗೂ ಶೋಭಾ ಹರಿಪ್ರಸಾದ್ ಅವರಿಗೆ “ನುಡಿತೋರಣ” ಪುರಸ್ಕಾರ ನೀಡಿ ಗೌರವಿಸಲಾಯಿತು.























