
ಯಾದಗಿರಿ :ಏ.೨೯:ನಗರದ ಗಂಜ್ ಪ್ರದೇಶದ ಮೌಲಾಲಿ ಲೇಔಟ್ನಲ್ಲಿ ಶೀಘ್ರದಲ್ಲೇ ನಡೆಯಲಿರುವ ಭವ್ಯ ಸಾಫ್ಟ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಕುರಿತು ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಪ್ರಮುಖ ಆಯೋಜಕರಾದ ಮೌಲಾಲಿ ಅನಪೂರ ಅವರು ಮಾತನಾಡಿ, ಈ ಕ್ರೀಡಾ ಮಹೋತ್ಸವವು ಯುವ ಸಮುದಾಯದಲ್ಲಿ ಕ್ರೀಡಾ ಮನೋಭಾವವನ್ನು ಬೆಳೆಸುವ ಜೊತೆಗೆ ಅಡಗಿರುವ ಪ್ರತಿಭೆಗಳಿಗೆ ಪರಿಣಾಮಕಾರಿ ವೇದಿಕೆಯನ್ನು ಕಲ್ಪಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಮಹತ್ವಾಕಾಂಕ್ಷಿ ಉದ್ದೇಶದೊಂದಿಗೆ ಈ ಟೂರ್ನಮೆಂಟ್ ಅನ್ನು ರೂಪಿಸಲಾಗಿದ್ದು, ಶ್ರೀ ದೇವಿ ಟ್ರಸ್ಟ್ ಹಾಗೂ ಎಂ.ಎಸ್.ಎ. ಆಂಗ್ಲ ಮಾಧ್ಯಮ ಪಬ್ಲಿಕ್ ಶಾಲೆಯ ಸಹಯೋಗದಲ್ಲಿ ಅದ್ದೂರಿಯಾಗಿ ಆಯೋಜಿಸಲಾಗುತ್ತಿದೆ ಎಂದು ಅವರು ವಿವರಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ತಂಡಗಳು ಭಾಗವಹಿಸುವ ನಿರೀಕ್ಷೆಯಿದ್ದು, ಈ ಪಂದ್ಯಾವಳಿ ಕ್ರೀಡಾ ಸೌಹಾರ್ದತೆ, ಸ್ಪರ್ಧಾತ್ಮಕ ಮನೋಭಾವ ಹಾಗೂ ಸಾಮೂಹಿಕ ಚೈತನ್ಯವನ್ನು ವೃದ್ಧಿಸಲಿದೆ ಎಂದರು.
ಟೂರ್ನಮೆAಟ್ನ ಬಹುಮಾನಗಳ ಬಗ್ಗೆ ವಿವರಿಸಿದ ಅವರು, ವಿಜೇತ ತಂಡಗಳಿಗೆ ಆಕರ್ಷಕ ನಗದು ಬಹುಮಾನಗಳೊಂದಿಗೆ ಭವ್ಯ ಟ್ರೋಫಿಗಳನ್ನು ಪ್ರದಾನಿಸಲಾಗುತ್ತದೆ. ಜೊತೆಗೆ ವೈಯಕ್ತಿಕ ಸಾಧನೆಗೂ ಪ್ರೋತ್ಸಾಹ ನೀಡುವ ಉದ್ದೇಶದಿಂದ ಪಂದ್ಯ ಶ್ರೇಷ್ಠ ಆಟಗಾರ, ಉತ್ತಮ ಬೌಲರ್ ಹಾಗೂ ಶ್ರೇಷ್ಠ ಬ್ಯಾಟ್ಸ್ಮನ್ಗೆ ವಿಶೇಷ ಬಹುಮಾನಗಳನ್ನು ಘೋಷಿಸಲಾಗಿದೆ ಎಂದು ತಿಳಿಸಿದರು.
ಆರಂಭದಲ್ಲಿ ಏಪ್ರಿಲ್ ತಿಂಗಳಲ್ಲಿ ಟೂರ್ನಮೆಂಟ್ ಆಯೋಜಿಸಲು ನಿರ್ಧರಿಸಲಾಗಿದ್ದರೂ, ಮೈದಾನದ ಸಿದ್ಧತೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ದಿನಾಂಕವನ್ನು ಮುಂದೂಡಲಾಗಿತ್ತು. ಇದೀಗ ಎಲ್ಲಾ ಅಗತ್ಯ ಸೌಲಭ್ಯಗಳನ್ನು ಒದಗಿಸಿ ಮೈದಾನವನ್ನು ಸುಸಜ್ಜಿತಗೊಳಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಮೇ ೩ರಿಂದ ಪಂದ್ಯಗಳು ಆರಂಭವಾಗಲಿದ್ದು, ತಂಡಗಳ ನೋಂದಣಿ ಪ್ರಕ್ರಿಯೆ ಈಗಾಗಲೇ ಆರಂಭಗೊAಡಿದೆ. ಹೆಚ್ಚಿನ ಸಂಖ್ಯೆಯಲ್ಲಿ ತಂಡಗಳು ನೋಂದಾಯಿಸಿಕೊAಡು ಈ ಕ್ರೀಡಾ ಹಬ್ಬವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು. ಜೊತೆಗೆ, ನಗರದ ಕ್ರಿಕೆಟ್ ಅಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಆಟಗಾರರನ್ನು ಹುರಿದುಂಬಿಸುವAತೆ ಕೋರಿದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀ ಮೌಲಾಲಿ ಅನಪೂರ
ಶ್ರೀ ಅಶೋಕ ವಾಟ್ಕರ್ ಇದ್ದರು






















