Home ಜಿಲ್ಲೆ ಕಲಬುರಗಿ ಶೈಕ್ಷಣಿಕ ಸುಧಾರಣೆಗೆ ವಿಬಿಎಸ್‍ಎ ಮಸೂದೆ ಮಹತ್ವದ್ದು : ಪ್ರೊ. ಬಟ್ಟು ಸತ್ಯನಾರಾಯಣ

ಶೈಕ್ಷಣಿಕ ಸುಧಾರಣೆಗೆ ವಿಬಿಎಸ್‍ಎ ಮಸೂದೆ ಮಹತ್ವದ್ದು : ಪ್ರೊ. ಬಟ್ಟು ಸತ್ಯನಾರಾಯಣ

ಕಲಬುರಗಿ,ಏ 29:ವಿಕಸಿತ ಭಾರತ ಶಿಕ್ಷಾ ಅಧಿಷ್ಠಾನ ಮಸೂದೆ-2025 (ವಿಬಿಎಸ್‍ಎ ಬಿಲ್) ಕುರಿತು ಶಿಕ್ಷಣ ತಜ್ಞರು ಹಾಗೂ ಅಧ್ಯಾಪಕರ ದುಂಡುಮೇಜಿನ ಸಭೆ ಕಲಬುರಗಿಯ ಪಿಡಿಎ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆಯಿತು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಶೈಕ್ಷಣಿಕ ಮತ್ತು ಸಾಮಾಜಿಕ ಅಧ್ಯಯನ ಕೇಂದ್ರ
ಬೆಂಗಳೂರು ಹಾಗೂ ಪಿಡಿಎ ತಾಂತ್ರಿಕ ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ, ಸಿಯುಕೆ ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ,
ಯುಜಿಸಿ,ಎಐಸಿಟಿಇ ,ಎನ್‍ಸಿಟಿಇ ಸೇರಿದಂತೆ ವಿವಿಧ ಶೈಕ್ಷಣಿಕ ಸಂಸ್ಥೆಗಳು ಪಾರದರ್ಶಕವಾಗಿ, ಸರಳವಾಗಿ ಮತ್ತು ಪರಿಣಾಮಕಾರಿಯಾಗಿ ಒಂದೇ ಸೂರಿನಡಿ ಕಾರ್ಯನಿರ್ವಹಿಸಲು ವಿಬಿಎಸ್‍ಎ-2025 ಮಸೂದೆ ಅತ್ಯವಶ್ಯಕ ಎಂದು ಹೇಳಿದರು.ದೇಶದ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ತರಲು ಈ ಮಸೂದೆ ದಾರಿದೀಪವಾಗಲಿದೆ. ಈ ಮಸೂದೆಕುರಿತು ಕೇಂದ್ರ ಸರ್ಕಾರ ಜಂಟಿ ಸಂಸದೀಯ ಸಮಿತಿ ರಚಿಸಿದ್ದು, ಶಿಕ್ಷಕರು ಮತ್ತು ಅಧ್ಯಾಪಕರು ತಮ್ಮ ಸಲಹೆಸೂಚನೆಗಳನ್ನು ನೀಡಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು. ಓಇP-2020 ಜಾರಿಯ ಹಿನ್ನೆಲೆಯಲ್ಲಿಗುಣಮಟ್ಟದ ಶಿಕ್ಷಣ, ಕೌಶಲ್ಯಾಭಿವೃದ್ಧಿ ಹಾಗೂ ಸಮಗ್ರ ಶೈಕ್ಷಣಿಕ ಪರಿವರ್ತನೆಗೆ ವಿಬಿಎಸ್‍ಎ ಬಿಲ್ ಪೂರಕವಾಗಲಿದೆ ಎಂದು
ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಎಂಎಲ್‍ಸಿ ಹಾಗೂ ಊಏಇ ಸೊಸೈಟಿ ಅಧ್ಯಕ್ಷ ಶಶಿಲ್ ಜಿ ನಮೋಶಿ ಮಾತನಾಡಿ,ಪ್ರಧಾನಿ ನರೇಂದ್ರ ಮೋದಿಯವರ ವಿಕಸಿತ ಭಾರತ-2047 ಕನಸು ಸಾಕಾರಗೊಳಿಸಲು ಶಿಕ್ಷಣ ಕ್ಷೇತ್ರದ ಸಮಗ್ರ ಸುಧಾರಣೆಗೆ ವಿಬಿಎಸ್‍ಎ -2025 ಮಸೂದೆ ಸಹಕಾರಿಯಾಗಲಿದೆ ಎಂದರು.
ಗದಗ ಕೆಎಸ್‍ಆರ್‍ಆರ್‍ಪಿಆರ್‍ಯು ವಿಶ್ರಾಂತ ಕುಲಪತಿ ಹಾಗೂ ಅಇSS ಕಾರ್ಯಕಾರಿ ಸದಸ್ಯ ಪೆÇ್ರ. ವಿಷ್ಣುಕಾಂತ್ ಎಸ್. ಚಟಪಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಅಲಯನ್ಸ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹಾಗೂ ಸೆಸ್ ಕಾರ್ಯಕಾರಿ ಸದಸ್ಯ ಪೆÇ್ರ.ವಿ.ಜೆ. ಬೈರಾರೆಡ್ಡಿ ವಿಬಿಎಸ್ ಎ ಬಿಲ್ ಕುರಿತು ವಿವರವಾದ ಉಪನ್ಯಾಸ ನೀಡಿದರು.ಈ ಸಂದರ್ಭದಲ್ಲಿ ಈ ಮಸೂದೆ ಬಗ್ಗೆ ಚರ್ಚೆ, ಸಂವಾದ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದನಿರ್ವಹಣೆಯನ್ನು ಸಿಯುಕೆ ಜೀವ ವಿಜ್ಞಾನ ವಿಭಾಗದ ಡೀನ್ ಪೆÇ್ರ. ಎನ್. ಸತ್ಯನಾರಾಯಣ ನಿರ್ವಹಿಸಿದರು.ಪಿಡಿಎ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಸಿದ್ದರಾಮ ಪಾಟೀಲ್ ಸ್ವಾಗತಿಸಿದರು. ಸಿಯುಕೆಯಕಾನೂನು ವಿಭಾಗದ ಡೀನ್ ಪೆÇ್ರ. ಬಸವರಾಜ್ ಕುಬಕಡ್ಡಿ ವಂದಿಸಿದರು. ಕಾರ್ಯಕ್ರಮದಲ್ಲಿ ಸೆಸ್ ನ ಸಂಚಾಲಕರಾದ ಧರಣಿ,ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಊಏಇ ಸೊಸೈಟಿ ಶಿಕ್ಷಣ ಸಂಸ್ಥೆಗಳು ಸೇರಿದಂತೆ ವಿವಿಧ ಕಾಲೇಜುಗಳ ಅಧ್ಯಾಪಕರುಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.