
ಕಲಬುರಗಿ,ಏ. 29: ಕೋಟನೂರ ( ಡಿ) ಬಿಎಸ್‍ಎನ್‍ಎಲ್ ಲೇಔಟ್ ಕ್ಷೇಮಾಭಿವೃದ್ಧಿ ಟ್ರಸ್ಟ್ ವತಿಯಿಂದ ಕೋಟನೂರ ( ಡಿ) ಬಿಎಸ್.ಎನ್.ಎಲ್ ಲೇಔಟ್ ಬುದ್ಧ, ಬಸವ, ಅಂಬೇಡ್ಕರ್ ಉದ್ಯಾನವನದಲ್ಲಿ ಬುದ್ಧ ಪೂರ್ಣಿಮೆ ದಿನವಾದ ಮೇ.1 ರಂದು ಸಂಜೆ 5.30 ಕ್ಕೆ ಬುದ್ಧ, ಬಸವ, ಅಂಬೇಡ್ಕರ್ ಜಯಂತ್ಯುತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕೋಟನೂರ ( ಡಿ) ಬಿಎಸ್‍ಎನ್‍ಎಲ್ ಲೇಔಟ್ ಕ್ಷೇಮಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಕಿಶೋರ್ ಆರ್ ಗಾಯಕವಾಡ ಅವರು ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಳೆದ 22 ವರ್ಷಗಳಿಂದ ಇಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಜಯಂತಿ ಉತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಈಸಲ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಹಾಗೂ ಮುಖ್ಯ ಅತಿಥಿಗಳಾಗಿ ನಿವೃತ್ತ ಡಿಜಿಪಿ ಡಾ.ಹೆಚ್.ಟಿ ಸಾಂಗ್ಲಿಯಾನ ಅವರು ಆಗಮಿಸುವರು.ಅನೇಕ ಪೂಜ್ಯರು ಮತ್ತು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು ಎಂದರು
ಕಾರ್ಯಕ್ರಮದಲ್ಲಿ ಪೆÇಲೀಸ್ ಸೇವೆಯಲ್ಲಿ ಸಾಧನೆಗೈದವರಿಗೆ ಭೀಮರತ್ನ ಪ್ರಶಸ್ತಿ, ಡಾ.ಬಿ.ಆರ್.ಅಂಬೇಡ್ಕರ್ ಜಯಂತ್ಯೋತ್ಸವದ 23 ಜನ ಸಮಿತಿ ಅಧ್ಯಕ್ಷರುಗಳಿಗೆ ಗೌರವ ಸನ್ಮಾನ, 25 ಜನ ನಿವೃತ್ತ ಭಾರತೀಯ ಸೈನಿಕರಿಗೆ ಗೌರವ ಸನ್ಮಾನ ನಡೆಸಲಾಗುತ್ತಿದೆ. ಹಲವು ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿವೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಡಾ.ಪಂಡಿತ ಕಾಂಬಳೆ, ರಾಘವೇಂದ್ರ ವಾಯ್.ಟಿ ಅವರು ಸೇರಿದಂತೆ ಹಲವರಿದ್ದರು.






















