Home ಜಿಲ್ಲೆ ತಾಳಿಕೋಟೆಯಲ್ಲಿ ೧೦ ರೂ.ಯಲ್ಲಿ ದೇಹ ತಣಿಸುವ ತಂಪು ಪಾನೀಯಬಿಸಿಲಿನ ಧಗೆ ತಣಿಸುತ್ತಿರುವ ಮೋದಿ ದೇಶಿ ಕೋಲ್ಡಿçಂಕ್ಸ್!

ತಾಳಿಕೋಟೆಯಲ್ಲಿ ೧೦ ರೂ.ಯಲ್ಲಿ ದೇಹ ತಣಿಸುವ ತಂಪು ಪಾನೀಯಬಿಸಿಲಿನ ಧಗೆ ತಣಿಸುತ್ತಿರುವ ಮೋದಿ ದೇಶಿ ಕೋಲ್ಡಿçಂಕ್ಸ್!

ತಾಳಿಕೋಟೆ:ಏ.೨೯: ದಿನದಿಂದ ದಿನಕ್ಕೆ ಬೇಗೆ ಹೆಚ್ಚುತ್ತಿದೆ ಸೂರ್ಯನ ತಾಪಕ್ಕೆ ಬೆವರಿಳಿಸುತ್ತಿರುವ ಜನತೆ ಬಿಸಿಲಿನ ಧಗೆ ತಣಿಸಲು ಕೆಮಿಕಲ್ ಮಿಶ್ರೀತ ತಂಪುಪಾನಿಯಾ ಬದಲು ದೇಶಿ ತಂಪುಪಾನಿಯಾಗಳ ಮೊರೆ ಹೋಗುತ್ತಿರುವದು ಹೆಚ್ಚುತ್ತಿದೆ.
ತಾಳಿಕೋಟೆ ನಗರದಲ್ಲಿ ಸಾಕಷ್ಟು ಕೋಲ್ಡಿçಂಕ್ಸ್ ಅಂಗಡಿಗಳಿದ್ದರೂ ಕೂಡಾ ದೇಶಿ ತಂಪುಪಾನಿಯಾಗಳ ಕಡೆಗೆ ಜನರು ಹೆಚ್ಚಿಗೆ ವಾಲುತ್ತಿದ್ದು ಕೆಲವರು ಇನ್ನೂ ಕೆಲವರು ಎಳನೀರು, ಮಜ್ಜಿಗೆ, ಐಸ್‌ಕ್ರೀಮ್ ಹಾಗೂ ಕಲ್ಲಂಗಡಿ ಹಣ್ಣಿಗೆ ಮೊರೆ ಹೋಗಿ ದೇಹದ ದಣಿವು ನಿವಾರಿಸಿಕೊಳ್ಳುತ್ತಿದ್ದಾರೆ.
ಪಟ್ಟಣದಲ್ಲಿ ಸುಮಾರು ೧೫ ವರ್ಷಗಳಿಂದ ಮೋದಿ ಟಿ ಕಾರ್ನರ್ ನಡೆಸಿಕೊಂಡು ಬರುತ್ತಿದ್ದ ನದಿಮಸಾಬ್ ಕಡು ಸದ್ಯ ಎರಡ್ಮೂರು ವರ್ಷಗಳಿಂದ ರೈತರಿಂದ ಉತ್ಪನ್ನವಾಗುವ ದೇಶಿ ತಂಪುಪಾನಿಯಾಗಳನ್ನು ಬೇಸಿಗೆಯ ಸಮಯದಲ್ಲಿ ಕೈಗಟುಕುವ ದರದಲ್ಲಿ ನೀಡುತ್ತಾ ಬಂದಿದ್ದರಿAದ ಜನರು ತಳ್ಳುವ ಗಾಡಿಯ ಮುಂದೆಯೇ ಸಾಲುಗಟ್ಟಿ ನಿಂತು ತಂಪುಪಾನಿಗಳನ್ನು ಸೇವಿಸಿ ದಣಿವಾರಿಸಿಕೊಳ್ಳುತ್ತಿದ್ದಾರೆ. ನದೀಂಸಾಬ್ ಕಡು ಮುಸ್ಲಿಂ ಕುಟುಂಭದಲ್ಲಿ ಜನಿಸಿದ್ದರೂ ಜಾತಿ ರಹಿತವಾದ ಸಮಾಜದಲ್ಲಿ ಬೆಳೆದುಬಂದ ಇವರು ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ಹಾಗೂ ತಾಳಿಕೋಟೆಯ ನಡೆದಾಡುವ ದೇವರು ಶ್ರೀ ಖಾಸ್ಗತಮಠದ ಪರಮ ಭಕ್ತರೂ ಕೂಡಾ ಆಗಿದ್ದಾರೆ.
ಮೋದಿ ಟಿ ಕಾರ್ನರ್ ಮೂಲಕ ಬೆಳಕಿಗೆ ಬಂದ ನದೀಂಸಾಬ್ ಕಡು ಸಂಚಾರಿ ಚಹಾವಾಲಾ ಎಂದೇ ಗುರುತಿಸಿಕೊಂಡವರು ಸದಸ್ಯ ತಂಪುಪಾನಿಯಾಗಳನ್ನೂ ಸಹ ಸಂಚಾರಿಯ ಮೂಲಕವೇ ಪಟ್ಟಣದ ಎಡಭಲದ ಅಂಗಡಿ ಮುಗ್ಗಟ್ಟುಗಳಿಗೆ ನೀಡುತ್ತಾ ಗ್ರಾಹಕರ ದಣಿವಾರಿಸಲು ಕೇವಲ ೧೦ ರೂ.ಗೆ ಒಂದು ಗ್ಲಾಸ್ ನಿಂಬು ಜ್ಯೂಸ್, ಮಜ್ಜಿಗೆ, ಲಸ್ಸಿ, ಶರಬತ್, ಕಲ್ಲಂಗಡಿ ಜ್ಯೂಸ್, ಚಿಕ್ಕು ಜ್ಯೂಸ್, ಒಳಗೊಂಡAತೆ ನಾನಾಬಗೆಯ ತಂಪುಪಾನಿಯಾಗಳನ್ನು ತಯಾರಿಸಿ ಕೈಗೆಟಕುವದರದಲ್ಲಿ ಜನರ ದಣಿವನ್ನು ತಣಿಸಲು ಮುಂದಾಗಿರುವದು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಇಂತಹ ದೇಶಿ ತಂಪುಪಾನಿಯಾಗಳನ್ನು ಮನೆಯಲ್ಲಿ ಸಾಕಷ್ಟು ಜನರು ತಯಾರಿಕೆಯಲ್ಲಿ ತೊಡಗಿಕೊಳ್ಳುವದರೊಂದಿಗೆ ಬಿಸಿಲಿನ ಧಗೆಯನ್ನು ತಣಿಸಿಕೊಳ್ಳುತ್ತಿದ್ದಾರೆ.
ದಿನ ನಿತ್ಯ ಮಧ್ಯಾಹ್ನ ವೇಳೆಗೆ ೪೦ ಡಿಗ್ರಿ ಉಷ್ಣಾಂಶವಿದ್ದು ಫ್ಯಾನ್‌ಗಳಿಗೆ ಮೊರೆ ಹೋಗುತ್ತಿದ್ದವರು ಇದೀಗ ಏರ್ ಕೂಲರ್‌ಗಳನ್ನು ಕೊಳ್ಳುವತ್ತ ಮನಸ್ಸು ಮಾಡುತ್ತಿದ್ದಾರೆ. ಏಕೆಂದರೆ ಫ್ಯಾನ್‌ಗಳಿಂದ ಬೀಸುವ ಗಾಳಿಯೂ ಬಿಸಿಯಿಂದ ಕೂಡಿರುವುದರಿಂದ ಅದನ್ನು ಕೂಡ ಸಹಿಸಲು ಆಗುತ್ತಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಇನ್ನು ಕೆರೆ ಕಟ್ಟೆಗಳು ತಮ್ಮ ಒಡಲನ್ನು ಖಾಲಿ ಮಾಡಿಕೊಳ್ಳುವತ್ತ ಸಾಗಿದ್ದು ಇದೇ ರೀತಿ ಮುಂದುವರೆದರೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳಲಿದೆಯೇನೋ ಎಂಬ ಆತಂಕ ಜನರಲ್ಲಿ ಕಾಡುತ್ತಿದೆ.

ಅಶ್ವಿನಿ ಮಳೆಯೂ ಈಗಾಗಲೆ ಏ.೧೪ ರಂದು ಪ್ರವೇಶ ಮಾಡಿತನ್ನ ಅವಧಿಮುಕಾಯಗೊಳಿಸಿಕೊಂಡಿತು ಆದರೆ ಮಳೆಯ ಒಂದು ಹನಿಯೂ ಕೂಡಾ ಉದರಲಿಲ್ಲಾ. ಸದ್ಯ ಭರಣಿ ಮಳೆ ಏ.೨೭ ರಂದು ಪ್ರವೇಶ ಮಾಡಿದ್ದು ರಾತ್ರಿ ಸಮಯದಲ್ಲಿ ಮೋಡಮುಸಕಿನವಾತಾವರಣ ಕಂಡಿದ್ದು ಬಿಟ್ಟರೆ ಮಳೆಯಾಗಿಲ್ಲಾ ರಾತ್ರಿಹೊತ್ತು ಮನೆಯಲ್ಲಿ ಬಿಸಿಲಿನ ಧಗೆಗೆ ಪ್ಯಾನ್, ಏರಕ್ಯೂಲರ್‌ಗಳು ಸಹ ಸಂಪಾದ ಗಾಳಿ ಬೀಸಲು ಹಿಂದೆಟುಹಾಕುವAತಾಗಿದೆ ಈ ಭಾರಿಯ ಬಿಸಿಲಿನ ಪ್ರಕರತೆ ತಣಿಸಲು ವರಣದೇವನ ಕೃಪೆಯಾದರೆ ಮಾತ್ರ ಸಾದ್ಯವೆಂಬ ಮಾತು ಕೇಳಿಬರುತ್ತಿದೆ. ಒಟ್ಟಿನಲ್ಲಿ ಬಿಸಲಿನ ಪ್ರಖರತೆಗೆ ಜನರು ಹೆರಾಣಾಗುತ್ತಿರುವುದಂತೂ ಸತ್ಯ.

ಬಿಸಿಲಿನ ತಾಪ ಹೆಚ್ಚಾಗುತ್ತಾ ಸಾಗಿದೆ ಅದರಲ್ಲಿ ಕೆಮಿಕಲ್ ಮಿಶ್ರೀತ್ ಕೋಲ್ಡಿçÃಂಕ್ಸ್ಗಳ ಬದಲು ದೇಶಿ ತಂಪುಪಾನಿಯಾಗಳು ಮನುಷ್ಯ ದೇಹಕ್ಕೆ ತಂಪಾಗಿಸುವದರ ಜೊತೆಗೆ ಏನರ್ಜಿಕೂಡಾ ಕೊಡುತ್ತದೆ ಹೀಗಾಗಿ ನಾನು ನನ್ನ ಅಲ್ಪದುಡಿಮೆಯ ಜೊತೆಗೆ ಜನರ ಬಿಸಿಲಿನ ದಣಿವು ತಣಿಸಲು ದೇಶಿ ತಂಪುಪಾನಿಯಾಗಳನ್ನು ಮಾರುತ್ತಿದ್ದೇನೆ.
                                        ನದೀಂಸಾಬ್ ಕಡು 
                                                        ಸಂಚಾರಿ ತಂಪುಪಾನಿಯಾ ಮಾರಾಟಗಾರ