
ಬೆಂಗಳೂರು, ಏ. ೨೯- ಬೆಂಗಳೂರಿನ ತೀವ್ರವಾಗಿ ಬದಲಾಗುತ್ತಿರುವ ಆಹಾರದ ಅಭ್ಯಾಸಗಳು ಪುರುಷರಲ್ಲಿ ಪ್ರೊಸ್ಟೇಟ್ ಕ್ಯಾನ್ಸರ್ ತೊಂದರೆ ಹೆಚ್ಚಾಗುವಲ್ಲಿ ಪ್ರಮುಖ ಕಾರಣವಾಗಿದ್ದು ವೈದ್ಯರು ಸಾಂಪ್ರದಾಯಿಕ ಆಹಾರಗಳಿಂದ ಸಂಸ್ಕರಿಸಿದ ಮತ್ತು ಹೆಚ್ಚಿನ ಕೊಬ್ಬಿನ ಅಂಶದ ಆಹಾರಗಳು ಮೌನವಾಗಿ ಗಮನಾರ್ಹ ಆರೋಗ್ಯದ ಕಾಳಜಿಯನ್ನು ಸೃಷ್ಟಿಸುತ್ತಿವೆ. ಬೇಳೆಕಾಳು, ತರಕಾರಿಗಳು ಮತ್ತು ಅರಿಶಿನ ಹೆಚ್ಚಾಗಿ ಬಳಸುತ್ತಿದ್ದ ಸಮತೋಲನದ ಭೋಜನವು ಈಗ ಹೆಚ್ಚಾಗಿ ಕೆಂಪು ಮಾಂಸ, ಪರಿಷ್ಕರಿಸಿದ ಕಾರ್ಬೊಹೈಡ್ರೇಟ್ ಗಳು ಮತ್ತು ಪ್ಯಾಕೇಜ್ಡ್ ಫುಡ್ ಗಳಿಗೆ ಹೊರಳಿದ್ದು ಇದಕ್ಕೆ ಪೂರಕವಾಗಿ ನಿಷ್ಕ್ರಿಯ, ಮೇಜಿಗೆ ಸೀಮಿತವಾದ ಜೀವನಶೈಲಿ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಪ್ರಾರಂಭಿಕ ರೋಗಲಕ್ಷಣಗಳ ಕೊರತೆಯಿಂದ ದೊಡ್ಡ ಪ್ರಮಾಣದ ರೋಗಿಗಳು ಮುಂದುವರಿದ ಹಂತಗಳಲ್ಲಿ ಮಾತ್ರ ರೋಗಪರೀಕ್ಷೆಗೆ ಒಳಗಾಗುವುದು, ಚಿಕಿತ್ಸೆಯ ಫಲಿತಾಂಶಗಳನ್ನು ನಿಯಂತ್ರಿಸುತ್ತದೆ ಮತ್ತು ರೋಗದ ಹೊರೆಯನ್ನು ಹೆಚ್ಚಿಸುತ್ತದೆ.
“ನಾವು ಗಮನಿಸುತ್ತಿರುವುದೇನೆಂದರೆ, ಜೀವನಶೈಲಿ ವಿಧಾನಗಳು ಮತ್ತು ಕ್ಯಾನ್ಸರ್ ರಿಸ್ಕ್ ನಡುವೆ ಇರುವ ನೇರ ಸಂಬಂಧ” ಎಂದು ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯ ಡಾ.ನಿತಿ ಸಂಸ್ಕರಿಸಿದ ಆಹಾರದ ಮೇಲೆ ಹೆಚ್ಚಿನ ಆಧಾರಪಡುವಿಕೆ, ಕೆಂಪು ಮಾಂಸದ ಹೆಚ್ಚಿನ ಸೇವನೆ ಮತ್ತು ದೈಹಿಕ ಚಟುವಟಿಕೆಯಲ್ಲಿ ಕುಂಠಿತದಿಂದ ಪುರುಷರು ಕಾಲ ಕಳೆದಂತೆ ಹೆಚ್ಚಿನ ರಿಸ್ಕ್ ಗೆ ಒಳಗಾಗುತ್ತಾರೆ. ನಿಜವಾದ ಪ್ರಗತಿ ಎಂದರೆ ಅದು ಮೌನವಾಗಿರುತ್ತದೆ ಮತ್ತು ತಡವಾಗಿ ಪತ್ತೆಯಾಗುತ್ತದೆ” ಎಂದರು.
ವೈಜ್ಞಾನಿಕ ಸಾಹಿತ್ಯವು ಈ ಪ್ರವೃತ್ತಿಯನ್ನು ಬೆಂಬಲಿಸುತ್ತದೆ. ಕರ್ಕ್ಯುಮಿನ್ ನೈಸರ್ಗಿಕ ಮೂಲಗಳಿಂದ ಬರುತ್ತದೆ, ಅರಿಶಿನದಲ್ಲಿ ಈ ಬಯೋಆಕ್ಟಿವ್ ಸಂಯುಕ್ತವಿದ್ದು ಇದು ಪ್ರೊಸ್ಟೇಟ್ ಕ್ಯಾನ್ಸರ್ ಜೀವಕಣ ಬೆಳೆಯುವುದನ್ನು ತಡೆಯುವುದಲ್ಲದೆ ಬ್ರೊಕೊಲಿ ಮತ್ತು ಕ್ಯಾಬೇಜ್ ಗಳಂತಹ ತರಕಾರಿಗಳು ಹೆಚ್ಚಿನ ರಕ್ಷಣಾತ್ಮಕ ಪರಿಣಾಮಗಳನ್ನು ನೀಡುತ್ತದೆ. ಇದಕ್ಕೆ ಭಿನ್ನವಾಗಿ ಸ್ಯಾಚುರೇಟೆಡ್ ಕೊಬ್ಬುಗಳು ಮತ್ತು ಪ್ರಾಣಿಯ ಪ್ರೊಟೀನ್ ಹೊಂದಿರುವ ಆಹಾರವು ಸತತವಾಗಿ ಪ್ರೊಸ್ಟೆಟ್ ಕ್ಯಾನ್ಸರ್ ಉಂಟು ಮಾಡುವ ಸಾಧ್ಯತೆ ಇರುತ್ತದೆ.
ಮೊದಲೇ ರೋಗಪರೀಕ್ಷೆ ಮಾಡುವ ಪ್ರಾಮುಖ್ಯತೆ ಕುರಿತು ಡಾ.ರೈಝಾದಾ, “ಸೆರಂ ಪಿ.ಎಸ್.ಎ. ಟೆಸ್ಟಿಂಗ್ ಮತ್ತು ಡಿಜಿಟಲ್ ರೆಕ್ಟಲ್ ಎಕ್ಸಾಮಿನೇಷನ್ (ಡಿ.ಆರ್.ಇ.)ಗಳ ಸಂಯೋಜನೆಯಿಂದ ರೋಗಲಕ್ಷಣಗಳು ಉಂಟಾಗುವ ಎಷ್ಟೋ ಮೊದಲು ಪ್ರೊಸ್ಟೇಟ್ ಸಮಸ್ಯೆಗಳನ್ನು ಕಂಡುಕೊಳ್ಳಬಹುದು.
೪೫ ವರ್ಷ ವಯಸ್ಸು ದಾಟಿದ ಪುರುಷರು ಅಥವಾ ಕುಟುಂಬದ ಇತಿಹಾಸ ಹೊಂದಿದವರು ನಿಯಮಿತ ಪರೀಕ್ಷೆಗೆ ಒಳಪಡಬೇಕು. ಸಕಾಲಿಕ ರೋಗಪರೀಕ್ಷೆಯು ಫಲಿತಾಂಶಗಳನ್ನು ಸುಧಾರಿಸುತ್ತದೆ ಮತ್ತು ರೋಗ ವಿಸ್ತರಿಸುವ ಹೊರೆಯನ್ನು ಕಡಿಮೆ ಮಾಡುತ್ತದೆ” ಎಂದರು.

























