
ಯಾದಗಿರಿ: ಏ.೨೭:ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ಜಿಲ್ಲಾ ಘಟಕಕ್ಕೆ ನೂತನ ಅಧ್ಯಕ್ಷರಾಗಿ ವಿನೋದ್ ಭೀಮಾನಾಯಕ್ ರಾಠೋಡ್ (ಮುದ್ನಾಳ್) ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ನಗರದ ಹಳೆಯ ಪ್ರವಾಸಿ ಮಂದಿರದಲ್ಲಿ ಭಾನುವಾರ ನಡೆದ ಸಭೆಯಲ್ಲಿ ರಾಜ್ಯಾಧ್ಯಕ್ಷ ದೇವರಾಜ್ ನಾಯಕ್ ಉಳ್ಳೆಸೂಗೂರು ಹಾಗೂ ರಾಜ್ಯ ಯುವ ಘಟಕದ ಅಧ್ಯಕ್ಷ ಮನೋಹರ್ ಕೆ. ಪವಾರ್ (ವಿಶ್ವಾಸಪುರ) ಅವರ ನೇತೃತ್ವದಲ್ಲಿ ಈ ಆಯ್ಕೆ ಪ್ರಕ್ರಿಯೆ ನೆರವೇರಿತು.
ಈ ವೇಳೆ ಮಾತನಾಡಿದ ರಾಜ್ಯಾಧ್ಯಕ್ಷ ದೇವರಾಜ್ ನಾಯಕ್ ಉಳ್ಳೆಸೂಗೂರು, ನೂತನ ಪದಾಧಿಕಾರಿಗಳು ಸಮಾಜದ ಅಭಿವೃದ್ಧಿ ಮತ್ತು ಏಳ್ಗೆಗಾಗಿ ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು. ಬಂಜಾರ ಸಮುದಾಯದ ಸಮಸ್ಯೆಗಳಿಗೆ ಸ್ಪಂದಿಸಿ, ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಜವಾಬ್ದಾರಿ ಹೊತ್ತುಕೊಳ್ಳಬೇಕು ಎಂದು ಹೇಳಿದರು.
ಸಭೆಯಲ್ಲಿ ಮುಖಂಡರಾದ ಜನಾರ್ಧನ್ ರಾಥೋಡ್, ಯಂಕಪ್ಪ ನಾಯಕ್ (ವಡಿಗೇರಾ) ಮಾಜಿ ತಾಲೂಕು ಪಂಚಾಯತ್ ಸದಸ್ಯ ತೇಜರಾಜ್ ರಾಥೋಡ್, ಜಿಲ್ಲಾ ಗೌರವಾಧ್ಯಕ್ಷ ಆನಂದ್ ಚೌಹಾಣ್, ಯಾದಗಿರಿ ತಾಲೂಕು ಅಧ್ಯಕ್ಷ ಮೇಘನಾಥ್ ಚವ್ಹಾಣ್, ರಾಜ್ಯ ಕಾರ್ಯಕಾರಿ ಸದಸ್ಯ ವಾಚು ನಾಯಕ್, ರಾಜು ರಾಥೋಡ್ (ಮುಂಡರಗಿ), ಬಾಬು ರಾಠೋಡ್ (ಅಲ್ಲಿಪುರ್), ಮಿಥುನ್ ರಾಠೋಡ್ ಹಾಗೂ ನಗರ ಅಧ್ಯಕ್ಷರು ಸೇರಿದಂತೆ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.























