
ಸತ್ತೂರು,ಏ17: ಸತ್ತೂರಿನ ನಾರಾಯಣ ಪಾರಾಯಣ ಬಳಗದ ಆಶ್ರಯದಲ್ಲಿ ರಾಜಾಜೀ ನಗರದಲ್ಲಿರುವ ಶ್ರೀ ರಘೋತ್ತಮ ಅವಧಾನಿಯವರ ನಿವಾಸದಲ್ಲಿ ಬರುವ ಭಾನುವಾರ ಅಂದರೆ 19-04-2026 ರಂದು ಬೆಳಿಗ್ಗೆ 8-15 ರಿಂದ 9-15 ರ ವರೆಗೆ ವೈಶಾಖ ಮಾಸದ ಮಹತ್ವ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಪ್ರಮೋದಾಚಾರ್ಯ ಚಂದಿಯವರು ಆಗಮಿಸಲಿದ್ದಾರೆ. ಉಪನ್ಯಾಸದ ಮೊದಲು ಬೆಳಿಗ್ಗೆ 7-15 ರಿಂದ 8-15 ರ ವರೆಗೆ ಬಳಗದ ಸದಸ್ಯರಿಂದ ಶ್ರೀಹರಿಯುವಾಯು ಗುರುಗಳ ಸ್ತೋತ್ರಗಳ ಪಾರಾಯಣ ಜರುಗಲಿವೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಸಂಚಾಲಕರು ತಿಳಿಸಿದ್ದಾರೆ.




















