
ಕಲಬುರಗಿ, ಏ. 16: ಜಾಗತಿಕ ಮಟ್ಟದ ಐಟಿ ಸೇವೆಗಳ (ಟಿಸಿಎಸ್) ಮತ್ತು ಕರ್ನಾಟಕ ಸರ್ಕಾರದ ಸ್ವಾಯತ್ತ ಸಂಸ್ಥೆಯಾದ ಬೋರ್ಡ್ ಫಾರ್ ಐಟಿ ಎಜುಕೇಶನ್ ಸ್ಟ್ಯಾಂಡಡ್ರ್ಸ್ (ಬೈಟ್ಸ್) ಜಂಟಿಯಾಗಿ ಆಯೋಜಿಸಿದ್ದ 17ನೇ ಆವೃತ್ತಿಯ ಕಲಬುರಗಿ ವಲಯದ ಟಿಸಿಎಸ್ ಟೆಕ್ ಬೈಟ್ಸ್ ಐಟಿ ರಸಪ್ರಶ್ನೆ ಸ್ಪರ್ಧೆಯಲ್ಲಿ ರಾಯಚೂರಿನ ಎಸ್ಎಂವಿಸಿಇ ಕಾಲೇಜು ತಂಡವು ಜಯ ಗಳಿಸಿದೆ.
ಶರಣಬಸವ ವಿಶ್ವವಿದ್ಯಾಲಯದಲ್ಲಿ ನಡೆದ ರೋಚಕ ಹಣಾಹಣಿಯಲ್ಲಿ ರಾಯಚೂರಿನ ಸರ್ ಎಂ. ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜಿನ (ಎಸ್ಎಂವಿಸಿಇ) ಆಕಾಶ್ ಕುರ್ಬಾರ್ ಮತ್ತು ವಿನೋದ್ ಕುಮಾರ್ ಪ್ರಥಮ ಸ್ಥಾನ ಪಡೆದು ಪ್ರಾದೇಶಿಕ ಮಟ್ಟದ ಚಾಂಪಿಯನ್ ಗಳಾಗಿ ಹೊರಹೊಮ್ಮಿದ್ದಾರೆ. ತೀವ್ರ ಪೈಪೆÇೀಟಿಯಿಂದ ಕೂಡಿದ್ದ ಅಂತಿಮ ಸುತ್ತಿನಲ್ಲಿ ಬೀದರ್ ನ ಭೀಮಣ್ಣ ಖಂಡ್ರೆ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಓಂಕುಡ್ತೆ ಮತ್ತು ನಂದನಾ ದ್ವಿತೀಯ ಸ್ಥಾನ ಪಡೆದರು. ಈ ರಸಪ್ರಶ್ನೆ ಸ್ಪರ್ಧೆಯಲ್ಲಿ ಕಲಬುರಗಿ ವಲಯದ ವಿವಿಧ ಇಂಜಿನಿಯರಿಂಗ್ ಕಾಲೇಜುಗಳ ತಂಡಗಳು ಭಾಗವಹಿಸಿದ್ದವು
ರಸಪ್ರಶ್ನೆ ಕಾರ್ಯಕ್ರಮಕ್ಕೆ ಕಲಬುರಗಿಯ ಶರಣಬಸವ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ. ಲಕ್ಷ್ಮಿ ಪಾಟೀಲ್ ಮಾಕಾ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಕಲಬುರಗಿ ವಲಯದ ಸ್ಪರ್ಧೆಯಲ್ಲಿ ಗೆದ್ದ ವಿಜೇತರು ಮೇ 5 ರಂದು ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಫೈನಲ್ಸ್ ನಲ್ಲಿ ಕಲಬುರಗಿ ವಲಯವನ್ನು ಪ್ರತಿನಿಧಿಸಲಿದ್ದಾರೆ.ಈ ಕುರಿತು ಟಿಸಿಎಸ್ ಬೆಂಗಳೂರು ವಲಯದ ಮುಖ್ಯಸ್ಥ ಸುನಿಲ್ ದೇಶಪಾಂಡೆ,ಬೈಟ್ಸ್ ಅಧ್ಯಕ್ಷ ಪೆÇ್ರ. ಎಸ್. ಸಡಗೋಪನ್ ಅವರು ಮಾತನಾಡಿದರು.






















