Home ಜಿಲ್ಲೆ ಕಲಬುರಗಿ ಡಾ.ಶಿವಕುಮಾರ ಮಹಾಶಿವಯೋಗಿಗಳವರ ಜಯಂತಿ, ಗುರುವಂದನಾ ಮಹೋತ್ಸವ

ಡಾ.ಶಿವಕುಮಾರ ಮಹಾಶಿವಯೋಗಿಗಳವರ ಜಯಂತಿ, ಗುರುವಂದನಾ ಮಹೋತ್ಸವ

ಕಲಬುರಗಿ,ಏ.16-ಜಿಲ್ಲಾ ವೀರಶೈವ ಸಮಾಜ ಹಾಗೂ ಸಿದ್ಧಗಂಗಾ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘದ ವತಿಯಿಂದ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಡಾ.ಶಿವಕುಮಾರ ಮಹಾಶಿವಯೋಗಿಗಳವರ 119ನೇ ಜಯಂತಿ ಹಾಗೂ ಗುರುವಂದನಾ ಮಹೋತ್ಸವ ಆಚರಿಸಲಾಯಿತು.
ತುಮಕೂರ ಸಿದ್ಧಗಂಗಾಮಠದ ಉತ್ತರಾಧಿಕಾರಿ ಶಿವಸಿದ್ದೇಶ್ವರ ಮಹಾಸ್ವಾಮಿಗಳು ಸಮಾರಂಭದ ಸಾನಿಧ್ಯವಹಿಸಿದ್ದರು. ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿ ಚಿ.ದೊಡ್ಡಪ್ಪ ಅಪ್ಪ ಸಮಾರಂಭ ಉದ್ಘಾಟಿಸಿದರು. ಜಗದ್ಗುರು ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು ನೇತೃತ್ವದಲ್ಲಿ ಸಮಾರಂಭ ಜರುಗಿತು.
ಕರುಣೇಶ್ವರ ಶಿವಾಚಾರ್ಯರು, ಅಭಿನವ ಪರ್ವತೇಶ್ವರ ಶಿವಾಚಾರ್ಯರು, ಶಿವಲಿಂಗೇಶ್ವರ ಮಹಾಸ್ವಾಮಿಗಳು, ಅಪ್ಪಾರಾವ ದೇವಿ ಮುತ್ಯಾ, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ, ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಬಾಬುರಾವ ಯಡ್ರಾಮಿ, ಶರಣಬಸವೇಶ್ವರ ಸಂಸ್ಥಾನದ ಬಸವರಾಜ ದೇಶಮುಖ, ರಾಜು ಭೀಮಳ್ಳಿ, ಅಲ್ಲಮಪ್ರಭು ದೇಶಮುಖ, ಜಯಶ್ರೀ ಮತ್ತಿಮೂಡ, ನೀಲಕಂಠರಾವ ಮೂಲಗೆ, ಅರುಣಕುಮಾರ ಪಾಟೀಲ, ದೇವಿಂದ್ರಪ್ಪ ಅವಂಟಿ, ಚನ್ನಬಸಯ್ಯ ಗುರುವಿನ, ಕಲ್ಯಾಣಪ್ಪ ಪಾಟೀಲ, ಸಂಗಮೇಶ ನಾಗನಳ್ಳಿ, ಶರಣು ಭೂಸನೂರ, ಮಂಜು ರೆಡ್ಡಿ, ರಾಜಕುಮಾರ ಕೋಟೆ, ವಿಶ್ವನಾಥ ಪಾಟೀಲ, ಪ್ರಶಾಂತ ಗುಡ್ಡಾ, ಈಶ್ವರ ಪನಶೆಟ್ಟಿ, ಶ್ರೀಶೈಲ ಘೂಳಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.