Home ಜಿಲ್ಲೆ ಕಲಬುರಗಿ ಭಾವನೆ ವ್ಯಕ್ತಪಡಿಸುವ, ಸಮಾಜ ಒಗ್ಗೂಡಿಸುವ ಶಕ್ತಿ ದೃಶ್ಯಕಲೆಗಿದೆ

ಭಾವನೆ ವ್ಯಕ್ತಪಡಿಸುವ, ಸಮಾಜ ಒಗ್ಗೂಡಿಸುವ ಶಕ್ತಿ ದೃಶ್ಯಕಲೆಗಿದೆ

ಕಲಬುರಗಿ :ಏ.16: ದೃಶ್ಯ ಕಲೆ ಎನ್ನುವುದು ಕೇವಲ ಮನೋರಂಜನೆಯಲ್ಲ, ಅದು ಮನುಷ್ಯನ ಭಾವನೆಗಳನ್ನು ಅಭಿವ್ಯಕ್ತಿಸುವ ಮತ್ತು ಸಮಾಜವನ್ನು ಒಗ್ಗೂಡಿಸುವ ಶಕ್ತಿ ಹೊಂದಿದೆ ಎಂದು ಅಂತಾರಾಷ್ಟ್ರೀಯ ಖ್ಯಾತ ಚಿತ್ರ ಕಲಾವಿದ ಡಾ.ಎಸ್.ಎಂ.ನೀಲಾ ಹೇಳಿದರು.
ನಗರದ ಮಹಾಲಕ್ಷ್ಮಿ ನಗರದಲ್ಲಿನ ‘ನೀಲಾ ಆರ್ಟ್ ಸ್ಟುಡಿಯೋ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ “ವಿಶ್ವ ದೃಶ್ಯಕಲಾ ದಿನಾಚರಣೆ” ಯಲ್ಲಿ ಅವರು ಮಾತನಾಡುತ್ತಿದ್ದರು. ವಿಶ್ವದ ಪ್ರಸಿದ್ಧ ಚಿತ್ರ ಕಲಾವಿದ ಲಿಯೋನಾರ್ಡ್ ಡಾವನ್ಸಿ ಅವರ ಜನ್ಮದಿನವನ್ನು ಈ ದಿನವನ್ನು ಆಚರಿಸಲಾಗುತ್ತದೆ. ಅವರನ್ನು ಶಾಂತಿ, ಸೃಜನಶೀಲತೆ ಮತ್ತು ಬಹುಮುಖಿ ಪ್ರತಿಭೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಕಲಾವಿದರನ್ನು ಗುರುತಿಸಿ, ಪೆÇ್ರೀತ್ಸಾಹಿಸುವ ಕಾರ್ಯವಾಗಬೇಕಾಗಿದೆ ಎಂದರು. ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ,ಉಪನ್ಯಾಸಕ ಎಚ್.ಬಿ.ಪಾಟೀಲ, ಗೌರವ ಸಲಹೆಗಾರ ಶಿವಯೋಗೆಪ್ಪಾ ಎಸ್. ಬಿರಾದಾರ, ಸದಸ್ಯರಾದ ಅಮರನಾಥ ಶಿವಮೂರ್ತಿ, ಸಿದ್ದಾರೂಢ ಬಿರಾದಾರ ಸೇರಿದಂತೆ ಇನ್ನಿತರರಿದ್ದರು.