
ಕಲಬುರಗಿ :ಏ.16: ಎಲೆ ಮರೆ ಕಾಯಿಗಳಂತೆ ಇರುವ ಚಿತ್ರಕಲಾ ಪ್ರತಿಭೆಗಳಿಗೆ ಪ್ರೋತ್ಸಾಹ ಅವಶ್ಯವಾಗಿದೆ. ಚಿತ್ರಕಲಾ ಪರಂಪರೆ ಉಳಿಸಿ ಬೆಳೆಸಬೇಕಾದರೆ, ಮಕ್ಕಳಲ್ಲಿ ಕಲಾಭಿರುಚಿ ಬೆಳೆಸಬೇಕು. ಕಲಾ ಶ್ರೀಮಂತಿಕೆ ಮತ್ತು ಅದರ ವೈಶಿಷ್ಟ್ಯತೆ ಬಗ್ಗೆ ಇಂಥ ಶಿಬಿರಗಳಿಂದ ಅನಾವರಣಗೊಳಿಸಬೇಕು. ಚಿತ್ರಕಲೆ ನಮ್ಮ ಸಾಂಸ್ಕøತಿಕ ಬದುಕನ್ನು ಅನಾವರಣ ಮಾಡುವ ಶಕ್ತಿಯಿದ್ದು, ಇದರ ಇಚ್ಚಾಶಕ್ತಿ ಮಕ್ಕಳಲ್ಲಿ ಬೆಳೆಸಬೇಕಾಗಿದೆ. ಈ ದಿಸೆಯಲ್ಲಿ ಪರಿಷತ್ತು ಮತ್ತು ಅಕಾಡೆಮಿ ಜೊತೆಯತಾಗಿ ನಿರಂತರ ಕಾರ್ಯ ಚಟುವಟಿಕೆಗಳು ನಡೆಸುತ್ತಿವೆ ಎಂದು ಹಿರಿಯ ಛಾಯಾಗ್ರಾಹಕ ಭವಾನಿಸಿಂಗ್ ಠಾಕೂರ್ ಹೇಳಿದರು
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಇಂಡಿಯನ್ ರಾಯಲ್ ಅಕಾಡೆಮಿ ಆಫ್ ಆರ್ಟ್ ಆಂಡ್ ಕಲ್ಚರ್ ರವರ ಜಂಟಿ ಆಶ್ರಯದಲ್ಲಿ ನಗರದ ಕನ್ನಡ ಭವನದ ಕಲಾ ಸೌಧದಲ್ಲಿ ಬುಧವಾರ ಹಮ್ಮಿಕೊಂಡ ವಿಶ್ವ ಕಲಾ ದಿನಾಚರಣೆ-2026 ಪ್ರಯುಕ್ತ ಒಂದು ದಿನದ ಚಿತ್ರಕಲೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಕಲಬುರಗಿ ಜಿಲ್ಲೆ ಕಲೆ, ಸಾಹಿತ್ಯ,ಸ ಂಗೀತದಲ್ಲಿ ಬಹಳ ಶ್ರೀಮಂತವಾಗಿದೆ. ಅದನ್ನು ಉಳಿಸಿ, ಬೆಳೆಸಿಕೊಂಡು ಹೋಗುವ ಜವಾಬ್ಧಾರಿ ನಮ್ಮೆಲ್ಲರ ಮೇಲಿದೆ. ಕಲೆ ಮತ್ತು ಕಲಾವಿದರ ರಕ್ಷಣೆಗಾಗಿ ಪರಿಷತ್ತು ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.
ಹಿರಿಯ ಕಲಾವಿದ ಕೆ.ಎಸ್. ನಾಗೂರೆ, ಕಲಾವಿದ ಇಮ್ರಾನ್ ಖಾಲಿಕ್, ಜಿಲ್ಲಾ ಕಸಾಪ ದ ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಪ್ರಮುಖರಾದ ಮಹ್ಮದ್ ಅಯಾಜೊದ್ದಿನ್ ಪಟೇಲ್, ಡಾ. ಎಸ್.ಎಂ. ನೀಲಾ, ರಾಜಶೇಖರ ಶಾಮಣ್ಣ, ಧರ್ಮರಾಜ ಜವಳಿ, ರಾಜಶೇಖರ ಚಿಂಚೋಳಿ ವೇದಿಕೆ ಮೇಲಿದ್ದರು.
ಅಕಾಡೆಮಿ ಅಧ್ಯಕ್ಷ ಡಾ. ರೆಹಮಾನ್ ಪಟೇಲ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.






















