
ಚಿತ್ತಾಪುರ:ಸಂವಿಧಾನ ಶಿಲ್ಪಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಗೈರಾಗಿದ್ದು ಅಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು.
ತಾಲೂಕ ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಸಮಾನತೆಯ ಹರಿಕಾರ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 135 ನೇ ಜನ್ಮ ದಿನೋತ್ಸವದ ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳಾದ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಅಧಿಕಾರಿ ರಾಜಕುಮಾರ್ ಹಕ್ಕಿ, ತಾಲೂಕ ವೈದ್ಯಾಧಿಕಾರಿ ವೀರನಾಥ ಕನಕ, ಕೃಷಿ ಸಹಾಯಕ ನಿರ್ದೇಶಕ ಸಂಜು ಕುಮಾರ್ ಮಾನಕರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೆ ಅಂಬೇಡ್ಕರ್ ಅವರನ್ನು ಅಪಮಾನಗೊಳಿಸಿದಂತಾಗಿದೆ, ಅಲ್ಲದೆ ತಾಲೂಕ ದಲಿತ ಅನುಯಾಯಿಗಳು ಅಂಬೇಡ್ಕರ್ ಅನುಯಾಯಿಗಳಿಗೆ ಈ ಘಟನೆಯಿಂದ ಮನಸ್ಸಿಗೆ ನೋವು ಉಂಟಾಗಿದೆ.
ತಾಲೂಕ ಆಡಳಿತದಿಂದ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಹಾಜರಾತಿ ಇರಬೇಕು ಆದರೆ ಕೆಲ ಅಧಿಕಾರಿಗಳು ಬಾಬಾ ಸಾಹೇಬರ ಬಗ್ಗೆ ನಿರ್ಲಕ್ಷ್ಯ ಹಾಗೂ ಕರ್ತವ್ಯದಲ್ಲಿ ಬೇಜವಾಬ್ದಾರಿ ತೋರಿದ್ದು ಕಾರ್ಯಕ್ರಮದಲ್ಲಿ ಗೈರಾಗಿದ್ದ ತಾಲೂಕ ಮಟ್ಟದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಅನುಯಾಯಿಗಳು ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಯಂತೋತ್ಸವ ಸಮೀತಿ ಅಧ್ಯಕ್ಷ ಮಲ್ಲಿಕಾರ್ಜುನ್ ಬೆನ್ನೂರಕರ್, ಶ್ರೀಕಾಂತ್ ಶಿಂಧೆ, ಜಗನ್ನಾಥ ಮುಡಬೂಳಕರ್,ಮಲ್ಲಿಕಾರ್ಜುನ ಮುಡಬೂಳಕರ್, ಮಲ್ಲಿಕಾರ್ಜುನ ಕಾಳಗಿ,ಶಿವರಾಜ್ ಕಲ್ಲಕ್, ಶಿವಕುಮಾರ್ ಆರ್ಬೋಳ್, ಬಸವರಾಜ್ ಮುಡಬೂಳಕರ್, ಸಾಬಣ್ಣ ಹಲಗಿ, ಶಿವಕುಮಾರ್ ಯಾದಗಿರ್, ಲೋಹಿತ್ ಮುದ್ದಡಗಿ ಸೇರಿದಂತೆ ಅನೇಕರು ಇದ್ದರು.






















