
ಕಾಳಗಿ :ಏ.16: ದಕ್ಷಿಣಕಾಶಿ ಶ್ರೀ ನೀಲಕಂಠ ಕಾಳೇಶ್ವರ ಜಾತ್ರೋತ್ಸವ ನಿಮಿತ್ತ ಬುಧವಾರ ಸಂಜೆ ಅಪಾರ ಭಕ್ತರ ಜೈಘೋಷದ ಮಧ್ಯೆ ಸಂಭ್ರಮದಿಂದ ಶ್ರೀ ಕಾಳೇಶ್ವರ ದೇವರ ಮಹಾರಥೋತ್ಸವ ನಡೆಯಿತು.
ಬೆಳಗ್ಗೆ ಶ್ರೀ ನೀಲಕಂಠ ಕಾಳೇಶ್ವರ ದೇವರಿಗೆ ವಿಶೇಷ ಪೂಜೆ, ಅಭಿಷೇಕ, ಅಲಂಕಾರ, ಮಹಾಮಂಗಳಾರತಿ ನಡೆಯಿತು. ಬಳಿಕ ನೈವೇದ್ಯ ಸಮರ್ಪಿಸಲಾಯಿತು. ಪಟ್ಟಣದ ಪ್ರಮುಖ ಮನೆತನಗಳಾದ ಜೈಶಂಕರ ಮಾಲಿಪಾಟೀಲ್, ಶರಣಗೌಡ ಪೆÇಲೀಸ್ ಪಾಟೀಲ್, ಶಿವಕುಮಾರ ಪಂಚಾಳ, ಪ್ರಭಾಕರ ಮಾಕಪನೋರ, ಗುರುಲಿಂಗಯ್ಯ ಮಠಪತಿ ಮನೆಗಳಿಂದ ಕುಂಭ, ಕಳಸ, ತನಾರತಿ, ನಂದಿಕೋಲುಗಳನ್ನು ಮೆರವಣಿಗೆಯ ಮೂಲಕ ದೇವಸ್ಥಾನಕ್ಕೆ ತರಲಾಯಿತು.
ಹಿರೇಮಠದ ಶ್ರೀ ನೀಲಕಂಠ ಮರಿದೇವರು, ಭರತನೂರಿನ ಶ್ರೀ ಚಿಕ್ಕಗುರುನಂಜೇಶ್ವರ ಸ್ವಾಮೀಜಿ,ವೀರಭದ್ರಪ್ಪ ಮುತ್ಯಾ ಡೊಣ್ಣುರ ಅವರು ರಥೋತ್ಸವಕ್ಕೆ ಚಾಲನೆ ನೀಡಿದರು. ಶ್ರೀ ನೀಲಕಂಠ ಕಾಳೇಶ್ವರ ಮಹಾರಾಜ್‍ಕಿ ಜೈ… ಹರಹರ ಮಹಾದೇವ.. ಜೈಜೈ ಕಾಳೇಶ್ವರ ಸೇರಿ ವಿವಿಧ ಜೈಘೋಷಗಳು ಮೊಳಗಿದವು. ರಥಕ್ಕೆ ಉತ್ತತ್ತಿ, ಬದಾಮಿ ಎಸೇದು ಭಕ್ತಿ ಸಮರ್ಪಿಸಿದರು.
ಕಾಳಗಿಯಲ್ಲಿ ಅಸಂಖ್ಯಾತ ಭಕ್ತರ ಜೈಘೋಷದ ಮಧ್ಯೆ ಸಂಭ್ರಮದಿಂದ ಶ್ರೀ ನೀಲಕಂಠ ಕಾಳೇಶ್ವರ ದೇವರ ಮಹಾರಥೋತ್ಸವ ನಡೆಯಿತು.
ಶ್ರೀ ನೀಲಕಂಠ ಕಾಳೇಶ್ವರ ಜಾತ್ರೆ ನಿಮಿತ್ತ ಭಕ್ತರು ಅಗ್ಗಿ ತುಳಿದು ಹರಕೆ ತೀರಿಸಿದರು.
ಬಾಳೆಹಣ್ಣು, ಎಲೆ, ಅಡಿಕೆ ಹೂ, ತೆಂಗಿನಕಾಯಿ, ನಾಣ್ಯಗಳು ಅರ್ಪಿಸಿ ನಮಸ್ಕರಿಸಿದರು.
ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ, ದೇವಸ್ಥಾನ ಸಮಿತಿ ಅಧ್ಯಕ್ಷ ಶಿವಶರಣಪ್ಪ ಕಮಲಾಪುರ, ಜಿಪಂ ಮಾಜಿ ಸದಸ್ಯ ರಾಜೇಶ ಗುತ್ತೇದಾರ, ಪ್ರಮುಖರಾದ ಶರಣಗೌಡ ಪೆÇಲೀಸ್ ಪಾಟೀಲ ,ಭೀಮರಾಯ ಟಿ ಟಿ, ಮಲ್ಲಿಕಾರ್ಜುನ ಗಾಜರೆ, ರಾಘವೇಂದ್ರ ಗುತ್ತೇದಾರ, ವಿಶ್ವನಾಥ ವನಮಾಲಿ, ಜೈಶಂಕರ ಮಾಲಿಪಾಟೀಲ್, ನೀಲಕಂಠ ಗುತ್ತೇದಾರ್, ಪ್ರಶಾಂತ ಕದಂ, ಗೌರಿಶಂಕರ ಗುತ್ತೇದಾರ, ಶೇಖರ ಪಾಟೀಲ ,ಕೃಷ್ಣ ಸಿಂಗಶೆಟ್ಟಿ, ಸಂತೋಷ ಕುಡ್ಡಳ್ಳಿ, ಶಿವಶರಣಪ್ಪ ಮಾಕಪನೋರ, ಜಗನ್ನಾಥ ಚಂದನಕೇರಿ, ಹನುಮಂತಪ್ಪ ಕಾಂತಿ, ಶಿವರಾಯ ಪಡಶೆಟ್ಟಿ, ನಾಗರಾಜ ಚಿಕ್ಕಮಠ, ಶಿವಕುಮಾರ ಶಾಸ್ತ್ರಿ,ರಾಜು ಒಡೆಯರಾಜ, ರೇವಣಸಿದ್ದ ಕುಡ್ಡಳ್ಳಿ, ಶಿವಕಿರಣ ಪ್ಯಾಟಿಮಠ, ಸಂತೋಷ ಪತಂಗೆ, ಶಿವಶರಣಪ್ಪ ಗುತ್ತೇದಾರ, ಸುರೇಶ ಕೋರೆ, ಅಭಿಕ್ಷೇಕ ಮಳಗಿ, ಬಾಬು ನಾಟಿಕಾರ ಇತರರಿದ್ದರು.
ಸಿಪಿಐ ಜಗದೇವಪ್ಪ ಪಾಳಾರವರ ಮಾರ್ಗದರ್ಶನದಲ್ಲಿ, ಪಿಎಸ್‍ಐ ತಿಮ್ಮಯ್ಯ ಬಿ.ಕೆ. ಹಾಗೂ ಸಿಬ್ಬಂದಿ ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದರು.






















