Home ಜಿಲ್ಲೆ ಪೌರಕಾರ್ಮಿಕರಿಗೆ ಸನ್ಮಾನ

ಪೌರಕಾರ್ಮಿಕರಿಗೆ ಸನ್ಮಾನ


ಗದಗ, ಏ. ೧೬:
ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಹಸಿರು ಕ್ರಾಂತಿ ಹರಿಕಾರ, ಮಾಜಿ ಉಪ ಪ್ರಧಾನಮಂತ್ರಿ ಡಾ. ಬಾಬು ಜಗಜೀವನ್ ರಾಮ್ ಅವರ ಜಯಂತಿ ಉತ್ಸವದ ಅಂಗವಾಗಿ ನಗರದ ಅಂಬೇಡ್ಕರ್ ಭವನದಲ್ಲಿ ಭಾವಪೂರ್ಣ ವೇದಿಕೆ ಕಾರ್ಯಕ್ರಮ ಜರುಗಿತು.


ಈ ಸಂದರ್ಭದಲ್ಲಿ ವಿವಿಧ ನಗರಸಭೆ ಹಾಗೂ ಪುರಸಭೆಗಳಲ್ಲಿನ ಶ್ರಮಜೀವಿ ಪೌರಕಾರ್ಮಿಕರ ಸೇವೆಯನ್ನು ಗುರುತಿಸಿ “ಉತ್ತಮ ಪೌರಕಾರ್ಮಿಕ” ಪ್ರಶಸ್ತಿಯನ್ನು ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ಪ್ರಧಾನ ಮಾಡಿ ಗೌರವಿಸಿದರು.


ಸಮಾಜದ ಸ್ವಚ್ಛತೆ ಮತ್ತು ಆರೋಗ್ಯ ಕಾಪಾಡುವಲ್ಲಿ ಪೌರಕಾರ್ಮಿಕರ ಪಾತ್ರ ಅತ್ಯಂತ ಮಹತ್ತರವಾಗಿದ್ದು, ಅವರ ಸೇವೆ ಅಮೂಲ್ಯ ಎಂದು ಗಣ್ಯರು ತಮ್ಮ ಮಾತುಗಳಲ್ಲಿ ಅಭಿಪ್ರಾಯಪಟ್ಟರು.
ಮುದಕಪ್ಪ ಬಚ್ಚೇನಹಳ್ಳಿ ಪುರಸಭೆ ಮುಂಡರಗಿ, ಮರಿಯಪ್ಪ ಬಾನಪ್ಪ ಗುಡಿಮನಿ ಪಟ್ಟಣ ಪಂಚಾಯತ್ ಶಿರಹಟ್ಟಿ, ದುರುಗಪ್ಪ ಪಾದಗಟ್ಟಿ ? ಪಟ್ಟಣ ಪಂಚಾಯತ್ ನರೇಗಲ್ಲ, ಬಸವರಾಜ ಎಸ್. ಜೋಗಣ್ಣವರ್ ಪುರಸಭೆ ರೋಣ, ಮಹೇಶ್ ಎಮ್. ಚಲವಾದಿ ಪುರಸಭೆ ನರಗುಂದ, ದಾವಲಪ್ಪ ತಾಯಿ ದ್ಯಾಮವ್ವ ನಡೆಗೇರಿ ಪಂಚಾಯತ್ ಮುಳಗುಂದ, ರೇಣಪ್ಪ ಕಮತದ ಪುರಸಭೆ ಲಕ್ಷೆ÷್ಮÃಶ್ವರ, ಶಿವಪ್ಪ ಮಾದರ ಪುರಸಭೆ ಗಜೇಂದ್ರಗಡ
ಅಶೋಕ್ ಚಲವಾದಿ ಗದಗ-ಬೆಟಗೇರಿ ನಗರಸಭೆ ಪ್ರಶಸ್ತಿ ಪಡೆದರು.