Home ಜಿಲ್ಲೆ ಮಂಗಳೂರು ಸ್ಕೂಟಿಯಿಂದ ಬಿದ್ದು ಗಾಯಗೊಂಡಿದ್ದ ಮಹಿಳೆ ಮೃತ್ಯು

ಸ್ಕೂಟಿಯಿಂದ ಬಿದ್ದು ಗಾಯಗೊಂಡಿದ್ದ ಮಹಿಳೆ ಮೃತ್ಯು

ಸುಳ್ಯ:ಪತಿಯ ಜತೆ ಸ್ಕೂಟಿಯಲ್ಲಿ ಹೋಗುತ್ತಿರುವ ಸಂದರ್ಭ ಜಾರಿ ರಸ್ತೆಗೆ ಬಿದ್ದು ತೀವ್ರ ಜಖಂಗೊಂಡಿದ್ದ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ನಡೆದಿದೆ.
ಸುಳ್ಯ ಕೇರ್ಪಳದ ಸುರೇಶ್ ಸರಳಾಯರು ಮತ್ತು ಅವರ ಪತ್ನಿ ಸೌಮಿನಿ (೫೫) ಮೃತಪಟ್ಟ ಮಹಿಳೆ. ಸೋಮವಾರ ಬೆಳಿಗ್ಗೆ ತಮ್ಮ ಸ್ಕೂಟಿಯಲ್ಲಿ ದಂಪತಿ ಸುಳ್ಯ ಪೇಟೆಗೆ ಬಂದು ಮರುದಿನದ ವಿಷುಕಣಿ ಹಬ್ಬಕ್ಕೆ ವಸ್ತ್ರ ಖರೀದಿಸಿ ಮನೆ ಕಡೆಗೆ ತೆರಳುವಾಗ ಸೌಮಿನಿಯವರು ಕೇರ್ಪಳ ರಸ್ತೆಯ ಭಗವತಿ ದ್ವಾರದ ಬಳಿ ಸ್ಕೂಟಿಯಿಂದ ಜಾರಿ ಬಿದ್ದರು. ಪರಿಣಾಮವಾಗಿ ಅವರ ತಲೆಗೆ ಕಾಂಕ್ರೀಟ್ ರಸ್ತೆ ಬಡಿದು ಗಂಭೀರ ಗಾಯಗೊಂಡರು. ಕೂಡಲೇ ಅವರನ್ನು ಸುಳ್ಯದ ಆಸ್ಪತ್ರೆಗೆ ಕರೆದೊಯ್ದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ಯಲಾಯಿತು. ಮಂಗಳೂರಿನಲ್ಲಿ ವೈದ್ಯರು ಬದುಕುವುದು ಅಸಾಧ್ಯವೆಂದು ಹೇಳಿದ ಕಾರಣ ಸಂಜೆ ಅವರನ್ನು ವಾಪಸ್ ಕರೆತಂದು ಸುಳ್ಯದ ಖಾಸಾಗಿ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ರಾತ್ರಿ ನಿಧನರಾದರು. ಅವರಿಗೆ ಪತಿ, ಇಬ್ಬರು ಪುತ್ರರು ಇದ್ದಾರೆ.