
ಚನ್ನಮ್ಮನ ಕಿತ್ತೂರು,ಏ.೧೫: ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವವಾದ ಭಾರತದ ಸಂವಿಧಾನ ರಚಿಸಿದ ಮಹಾನ್ ಮಾನವತಾವಾದಿ ಡಾ. ಬಿ.ಆರ್. ಅಂಬೇಡ್ಕರರು ಎಂದು ಪ್ರೋ. ಮಹೇಶ ಚನ್ನಂಗಿ ಹೇಳಿದರು.
ಸ್ಥಳೀಯ ಕಲ್ಮಠ ಆವರಣ ಚಂದರಗಿ ಸಭಾಭವನದಲ್ಲಿ ತಾಪಂ, ಪಪಂ ಮತ್ತು ಎಂ.ಕೆಹುಬ್ಬಳ್ಳಿ ಪಪಂ, ಸಮಾಜ ಕಲ್ಯಾಣ ಇಲಾಖೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ ೧೩೫ನೇ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಅವರು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ತಾಪಂ ಇಓ ನಿಂಗಪ್ಪ ಮಸಳಿ ಕಾರ್ಯಕ್ರಮ ಉದ್ಘಾಟಿಸಿ ಪ್ರಾಸ್ತಾವಿಕ ನುಡಿಯನ್ನಾಡಿದರು. ತಹಶೀಲ್ದಾರ ಕಲ್ಲನಗೌಡ ಪಾಟೀಲ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಶಿಕ್ಷಕಿ ವಿ.ಎಮ್. ಅಳಗುಂದಿಯವರಿAದ ಪ್ರಾರ್ಥನಾ ಗೀತೆ ಹಾಗೂ ಸಿಪಿಐ ಶಿವಾನಂದ ಗುಡಗನಟ್ಟಿ ಇವರಿಂದ ಅಂಬೇಡ್ಕರ ಕುರಿತು ಭಕ್ತಿಗೀತೆ ನೇರವೇರಿದವು.
ಇದಕ್ಕೂ ಪೂರ್ವ ಚನ್ನಮ್ಮನ ವರ್ತುಳದಲ್ಲಿ ಅಂಬೇಡ್ಕರ ಹಾಗೂ ಬಾಬು ಜಗಜೀವನ ರಾಮ ಅವರ ಭಾವಚಿತ್ರದ ಮೆರವಣಿಗೆ ಶಾಸಕ ಬಾಬಾಸಾಹೇಬ ಪಾಟೀಲ ಚಾಲನೆ ನೀಡಿದರು. ನಂತರ ಗುರುವಾರ ಪೇಟೆ ಅರಳೀಕಟ್ಟಿ ಮಾರ್ಗವಾಗಿ ಕಲ್ಮಠ ಅಂಗಳದ ವರೆಗೆ ಕಲಾ ವಾದ್ಯಮೇಳದೊಂದಿಗೆ ಮೆರವಣಿಗೆ ಅದ್ದೂರಿಯಿಂದ ಜರುಗಿತು. ಎಸ್‌ಎಸ್‌ಎಲ್‌ಸಿ-ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ಹಾಗೂ ಅತಿಥಿಗಳನ್ನು ಸತ್ಕರಿಸಲಾಯಿತು.
ಸಭೆಯಲ್ಲಿ ಪಪಂ ಅಧ್ಯಕ್ಷರುಗಳಾದ ಜೈಸಿದ್ರಾಮ ಮಾರಿಹಾಳ, ಸುರೇಶ ಮುತ್ನಾಳ, ಮುಖ್ಯಾಧಿಕಾರಿಗಳಾದ ಮಲ್ಲಯ್ಯಾ ಹಿರೇಮಠ, ರವಿಶಂಕರ ಮಾಸ್ತಿಹೊಳಿಮಠ, ಬಿಇಓ ಚನ್ನಬಸಪ್ಪ ತುಬಾಕಿ, ಪಿಡಬ್ಲೂಡಿ ಎಇಇ ಸಂಜೀವ ಮಿರಜಕರ, ಎಸಿಡಿಪಿಓ ಶ್ರೀದೇವಿ ಕುಂತೋಜಿ, ಕ್ಯೂರೇಟರ್ ರಾಘವೇಂದ್ರ, ಪಿಎಸ್‌ಐ ಪ್ರವೀಣ ಗಂಗೋಳ, ಕಸಾಪ ಅಧ್ಯಕ್ಷ ಶ್ರೀಕಾಂತ ದಳವಾಯಿ, ಉಪನೊಂದಣಿ ಅಧಿಕಾರಿ ರಜನೀಶ ಪರಡ್ಡಿ, ಮುಖಂಡರುಗಳಾದ ಭೀಮಸಿ ದುರಗನ್ನವರ, ಶಿವಾನಂದ ಚಿನ್ನನವರ, ರಾಜು ಜಾಗಂಟಿ, ಮಡಿವಾಳಪ್ಪ ವಕ್ಕುಂದ, ಸುರೇಶ ಜಾಗಂಟಿ, ಬಸವರಾಜ ಕೆಳಗಡೆ, ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿ, ರಮೇಶ ತುರಮಂದಿ, ಲಕ್ಷಿö್ಮÃ ಲಮಾಣಿ, ಪರಶುರಾಮ ಕನಬರ, ಸುವರ್ಣಾ ಯರಗಟ್ಟಿ, ಶ್ರೀಕಾಂತ ಶೀಗಿಹಳ್ಳಿ, ವಿದ್ಯಾ ದೊಡಮನಿ, ಎಂ.ಎಸ್.ಪಾಟೀಲ, ರೂಪಾ ಜ್ಯೋತಿ, ಅಂಗನವಾಡಿ ಆಶಾ, ದಲಿತ ಮುಖಂಡರು, ತಾಲೂಕ ಮಟ್ಟದ ಎಲ್ಲ ಅಧಿಕಾರಿಗಳು, ಪಪಂ, ಸಮಾಜ ಕಲ್ಯಾಣ ಇಲಾಖೆ, ಸಾರ್ವಜನಿಕರಿದ್ದರು. ಮಂಜುನಾಥ ತೊಟಗಿ ನಿರೂಪಿಸಿ ಸ್ವಾಗತಿಸಿದರು,





















