
ಕಲಬುರಗಿ,ಏ.11-ಮಹಾನಗರ ಪಾಲಿಕೆಯ ಪೌರಕಾರ್ಮಿಕರಿಗೆ ರವಿವಾರ ರಜೆ ದಿನವನ್ನಾಗಿ ನೀಡಿದ್ದು ಅವೈಜ್ಞಾನಿಕ ಎಂದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು, ಎಲ್ಲರಿಗೂ ಒಂದೇ ದಿನ ರಜೆ ನೀಡಿದರೆ ನಗರದಲ್ಲಿ ಕಸ ಸಂಗ್ರಹವಾಗಿ ಮರುದಿನ ಅಂದರೆ ಸೋಮವಾರ ಅವರಿಗೆ ಹೆಚ್ಚಿನ ಒತ್ತಡವಾಗಲಿದೆ. ಹಾಗಾಗಿ, ಎಲ್ಲರಿಗೂ ಒಂದೇ ದಿನ ರಜೆ ನೀಡುವ ಬದಲು ಬೇರೆ ಬೇರೆ ದಿನ ರಜೆ ನೀಡಿ ಎಂದು ಸಲಹೆ ನೀಡಿದರು.
ಮಹಾನಗರ ಪಾಲಿಕೆಯ ಪೌರಕಾರ್ಮಿಕರು ರಜೆ ಬೇಡಿಕೆಯೊಂದಿಗೆ ಕೋಟ್ರ್ಗೆ ಹೋಗಿದ್ದರಿಂದ ಅವರಿಗೆ ರವಿವಾರ ರಜೆ ನೀಡಲಾಗಿದೆ ಎಂದು ಅಧಿಕಾರಿಗಳು ವಿವರಿಸಿದಾಗ, ರಜೆ ನೀಡಿ ಆದರೆ ಎಲ್ಲರಿಗೂ ರವಿವಾರ ರಜೆ ನೀಡುವ ಬದಲು ಬೇರೆ ಬೇರೆ ದಿನ ರಜೆ ನೀಡಿ ಇದರಿಂದ ಕಸ ವಿಲೇವಾರಿಗೆ ಅನುಕೂಲವಾಗಲಿದೆ ಎಂದು ಸಚಿವರು ಹೇಳಿದರು.
ಪ್ರಸ್ತುತ ಮಹಾನಗರ ಪಾಲಿಕೆಯಡಿಯಲ್ಲಿ 935 ಪೌರಕಾರ್ಮಿಕರಿದ್ದು ರವಿವಾರ ದಿನ ಎಲ್ಲರೂ ರಜೆ ತೆಗೆದುಕೊಳ್ಳುವ ವಿಚಾರ ಚರ್ಚೆಗೆ ಬಂದಾಗ ಸಚಿವರು ಸಲಹೆ ನೀಡಿದರು.
ಕಲಬುರಗಿ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ನಡೆದ ಪ್ರಗತಿ ಪರಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಕುಡಾ ಸೇರಿದಂತೆ ಸಂಬಂಧಪಟ್ಟ ಇಲಾಖೆಯ ಅಧ್ಯಕ್ಷರು ಹಾಗೂ ಅಧಿಕಾರಿಗಳು ಸಭೆ ನಡೆಸಿ ಐತಿಹಾಸಿಕ ಕೋಟೆಯೊಳಗಿನ ಮನೆಗಳನ್ನು ಖಾಲಿ ಮಾಡಿಸಬೇಕು ಎಂದು ಸಚಿವರು ಸೂಚಿಸಿದರು.
ಜಲಮೂಲಗಳ ಪುನಶ್ಚೇತನಕ್ಕೆ ಕ್ರಮವಹಿಸುವಂತೆ ಅಧಿಕಾರಿಗಳು ಮುಂದಾಗಬೇಕು ಇದಕ್ಕೆ ಕಾಪೆರ್Çೀರೆಟರ್ ಗಳು ಸಹಕಾರ ನೀಡಬೇಕು. ಪ್ರತಿ ಬೇಸಿಗೆಯಲ್ಲಿ ಬರೀ ಬೋರ್ ವೆಲ್ ಕೊರೆಸುವುದರ ಬದಲು ಹಳೆ ಕಲ್ಯಾಣಿಗಳು ಅಥವಾ ಜಲಮೂಲಗಳ ಪುನರುಜ್ಜೀವನ ಕ್ಕೆ ಕ್ರಮ ಕೈಗೊಳ್ಳಬೇಕು ಎಂದರು.
ಅಧಿಕಾರಿಗಳು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಸಾರ್ವಜನಿಕರ ಫೆÇೀನ್ ಕರೆ ಸ್ವೀಕರಿಸಿ ನಿಮ್ಮ ಅಸಮರ್ಪಕ ಸ್ಪಂದನೆಗಳಿಂದಲೇ ಮಹಾನಗರ ಪಾಲಿಕೆಗೆ ಕೆಟ್ಟ ಹೆಸರು ಬರುತ್ತದೆ. ನಿಮ್ಮ ವ್ಯಾಪ್ತಿಗೆ ಬರದಿದ್ದರೂ ಕೂಡಾ ಸೌಜನ್ಯಯುತವಾಗಿ ಸ್ಪಂದಿಸಿ ಎಂದು ಸಚಿವರು ಕಿವಿ ಮಾತು ಹೇಳಿದರು.
ಮಹಾನಗರ ಪಾಲಿಕೆ ವ್ಯಾಪ್ತಿಗಳ ಆಸ್ತಿಗಳ ಗುರುತಿಸುವಿಕೆಗೆ ಅಭಿಯಾನ ಮಾಡಿ ಎಂದು ಸೂಚಿಸಿದ ಸಚಿವರು ಕಲಬುರಗಿ ಉತ್ತರ ಹಾಗೂ ದಕ್ಷಿಣ ಶಾಸಕರು ಹಾಗೂ ಕಾಪೆರ್Çೀರೇಟರ್ ಗಳು ಸಹಕಾರ ನೀಡಬೇಕು ಎಂದರು.
ವಾರ್ಡ್ ಗಳ ಅಭಿವೃದ್ದಿ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕರಿಗೆ ಮಾಹಿತಿ ಇರುವುದಿಲ್ಲ, ಪೂಜೆ ಮಾಡುವುದಕ್ಕೂ ಕರೆಯುವುದಿಲ್ಲ ಎಂದು ಶಾಸಕ ಅಲ್ಲಮಪ್ರಭು ಪಾಟೀಲ್ ಸಚಿವರ ಗಮನಕ್ಕೆ ತಂದಾಗ ಶಾಸಕರಾಗಿ ನಿಮಗೆ ಅಧಿಕಾರವಿದೆ ಪೆÇ್ರಟೋಕಾಲ್ ಪ್ರಕಾರ ನಿಮ್ಮ ಗಮನಕ್ಕೆ ತರದೆ ಹೋದರೆ ಕ್ರಮ ಕೈಗೊಳ್ಳಿ ಎಂದರು.

























