
ಜೇವರಗಿ,ಏ 11: ಪಟ್ಟಣದ ಶ್ರೀಮತಿ ದಾನಮ್ಮ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯುಸಿಯಲ್ಲಿ
ಐತಿಹಾಸಿಕ ಫಲಿತಾಂಶವನ್ನು ಪಡೆದು ಗೆದ್ದು ಬಿಗಿದೆ ಎಂದು ಪ್ರಾಚಾರ್ಯ ಜಗದೀಶ್ ಎಸ್ ಉಕನಾಳಕರ ತಿಳಿಸಿದ್ದಾರೆ.
ಕಲಾ ವಿಭಾಗದಲ್ಲಿ , ಯಾಸೀನ್ ಯೂಸುಫ್ ನದಾಫ್ ಶೇ.98 ಅಂಕ ಪಡೆದು ತಾಲೂಕಿಗೆ ಟಾಪರ್ ಆಗಿದ್ದಾರೆ.
ರೇಣುಕಾ ಹುಣಚಪ್ಪಾ 570,ಶೀಫಾ ಅಂಜುಮ ಮಹ್ಮದ ಹನಿಫ್ 560,ಶಶಿಕಾಂತ ಹಣಮಂತ 552,ಅಶ್ವಿನಿ ಜಗನ್ನಾಥ551,ನಿತಿನ್ ಗೋಪಾಲ್ ಪವಾರ್ 551,ಸಮ್ರೀನ್ ಮೈನೋದ್ದಿನ್ 545,ಬಾಬುರಾಯ ಮುತ್ತಣ್ಣ 543,ಲಕ್ಮೀ ಶಾಂತಯ್ಯ 540 ಹಾಗೂ ವಾಣಿಜ್ಯ ವಿಭಾಗದಲ್ಲಿ ಅಂಬಿಕಾ ಬಾಬುರಾಯ 545 ಪ್ರತಿಶತ ಅಂಕಗಳನ್ನು ಪಡೆದಿದ್ದಾರೆ.
117 ವಿಧ್ಯಾರ್ಥಿಗಳಲ್ಲಿ 115 ವಿಧ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.ಅದರಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ಐವರು ವಿಧ್ಯಾರ್ಥಿಗಳು ಹಾಗೂ ಶೇಕಡಾ 94 ನಾಲ್ಕು ವಿಧ್ಯಾರ್ಥಿಗಳು, ಶೇ90 ಹತ್ತು ವಿದ್ಯಾರ್ಥಿಗಳು, ಶೇ85 ಐದು ವಿದ್ಯಾರ್ಥಿಗಳು, ಪ್ರಥಮ ಶ್ರೇಣಿಯಲ್ಲಿ 37ವಿದ್ಯಾರ್ಥಿಗಳು,ದ್ವೀತಿಯ ಶ್ರೇಣಿಯಲ್ಲಿ 28 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.ಮಕ್ಕಳ ಸಾಧನೆಗೆ ಆಡಳಿತ ಮಂಡಳಿ ಹಾಗೂ ಉಪನ್ಯಾಸಕ ವೃಂದ ಹರ್ಷ ವ್ಯಕ್ತಪಡಿಸಿದ್ದಾರೆ ಎಂದು ಪ್ರಾಚಾರ್ಯ ಜಗದೀಶ್ ಉಕನಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅತ್ಯುತ್ತಮ ಸಂಸ್ಕಾರಕ್ಕೆ ದಾನಮ್ಮ ಕಾಲೇಜು
ಮಕ್ಕಳಿಗೆ, ಕೇವಲ ಅಂಕಗಳು ಅತಿಮುಖ್ಯವಲ್ಲ.ಸಂಸ್ಕಾರ ಮುಖ್ಯ.ಆ ಸಂಸ್ಕಾರ ಶ್ರೀಮತಿ ದಾನಮ್ಮ ಕಾಲೇಜಿನಲ್ಲಿ ಮಾತ್ರ ಲಭ್ಯ.ಮಕ್ಕಳು ದ್ವೀತಿಯ ಪಿಯು ಪರೀಕ್ಷೆಯಲ್ಲಿ ದಿಗ್ವಿಜಯ ಸಾಧಿಸಿದಕ್ಕೆ ಅಭಿನಂದನೆಗಳು.
-ಮಹಾಂತಯ್ಯ ಸಿ ಹಿರೇಮಠ
ಕಾರ್ಯದರ್ಶಿ, ಗುರುಕುಲ ಮತ್ತು ದಾನಮ್ಮ ಕಾಲೇಜು
ಫಲಿತಾಂಶದಲ್ಲಿ ಮಾತ್ರವಲ್ಲ ಆಟದಲ್ಲೂ ಫಸ್ಟ್.
ಶ್ರೀಮತಿ ದಾನಮ್ಮ ಕಾಲೇಜಿನ ವಿಧ್ಯಾರ್ಥಿಗಳು ಕೇವಲ ಫಲಿತಾಂಶದಲ್ಲಿ ಮಾತ್ರ ಮೊದಲಿಗರಲ್ಲ.ವಿವಿಧ ಆಟದ ಸ್ಪರ್ಧೆಗಳಲ್ಲಿ ರಾಜ್ಯಮಟ್ಟದಲ್ಲಿ ಭಾಗವಹಿಸಿ ಜೇವರ್ಗಿ ಕೀರ್ತಿ ಪತಾಕೆ ಹಾರಿಸಿದ್ದಾರೆ.ಮಕ್ಕಳ ಸಾಧನೆ ಅತ್ಯದ್ಭುತ.
-ಧನರಾಜ ರಾಠೋಡ ಮುತ್ತಕೋಡ
ಉಪನ್ಯಾಸಕರು,ಕ್ರೀಡಾ ವ್ಯವಸ್ಥಾಪಕರು






















