
ನವಲಗುಂದ,ಏ9: ಪಟ್ಟಣದ ಕುಂಬಾರ ಓಣಿಯಲ್ಲಿರುವ ಬೀರಲಿಂಗೇಶ್ವರ ದೇವಸ್ಥಾನದ ನೂತನ ಶೀಲಾ ಮೂರ್ತಿಯ ಪ್ರಾಣ ಪ್ರತಿಷ್ಟಾಪನೆ ಕಾರ್ಯಕ್ರಮದ ಅಂಗವಾಗಿ ಬೃಹತ್ ಮೆರವಣಿಗೆಯೊಂದಿಗೆ ಲಾಲಗುಡಿ ಮಾರುತಿ ದೇವಸ್ಥಾನದಿಂದ ಡೊಳ್ಳುಮೇಳದೊಂದಿದೆ 101 ಕಳಸಗಳ ಪೂರ್ಣ ಕುಂಭಗಳ ಮೆರವಣಿಗೆ ನಡೆಯಿತು.
ಪಟ್ಟಣದ ಶ್ರೀ ಅಜಾತ ನಾಗಲಿಂಗ ಮಠದ ವೀರೇಂದ್ರ ಮಹಾಸ್ವಾಮಿಗಳು ಕುಂಭಮೇಳ ಮೆರವಣಿಗೆ ಚಾಲನೆ ನೀಡಿದರು.
ಲಾಲಗುಡಿಯಿಂದ ಪ್ರಾರಂಭವಾದ ಮೆರವಣಿಗೆಯು ಸಕಲ ವಾಧ್ಯಮೇಳಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಾದ ಲಿಂಗರಾಜ ವೃತ್ತ, ಸಿದ್ದಾಪುರ ಓಣಿ, ಗಾಂಧಿ ಮಾರುಕಟ್ಟೆ, ವಿನಾಯಕ ಪೇಠ, ಮಂಜುನಾಥ ನಗರ, ಕುಂಬಾರ ಓಣಿ ಮಾರ್ಗವಾಗಿ ಕುರುಬರ ಓಣಿಯ ಬೀರಲಿಂಗೇಶ್ವರ ದೇವಸ್ಥಾನ ತಲುಪಿತು.
ಮೆರವಣಿಗೆಯುದ್ದಕ್ಕೂ ಭಕ್ತರು ಬೀರಲಿಂಗೇಶ್ವರನ ಘೋಷಣೆಗಳು ಮುಗಿಲುಮುಟ್ಟಿದ್ದವು. ಪುರುಷರು ಕೂಡ ಹೊಸ ಬಟ್ಟೆಗಳನ್ನು ಧರಿಸಿಕೊಂಡು ತಲೆಯ ಮೇಲೆ ಹಳದಿ ಪೇಟಾ ಹಾಕಿ ಬಂಡಾರದಲ್ಲಿ ಮಿಂದೆದ್ದು ಉತ್ಸುಕತೆಯಿಂದ ಭಾಗವಹಿಸಿದ್ದು, ಮೆರವಣಿಗೆಗೆ ವಿಶೇಷ ಮೆರಗು ನೀಡಿದ್ದರು. ಡೊಳ್ಳು ಕುಣಿತ ವಿಶೇಷ ಮೆರಗು ನೀಡಿತು.
ಈ ವೇಳೆ ಬೀರಲಿಂಗೇಶ್ವರ ಸೇವಾ ಸಮಿತಿ ಅಧ್ಯಕ್ಷ ದ್ಯಾಮಪ್ಪ ಫಕೀರಪ್ಪ ಮಾಬನೂರ , ಶಿವಾನಂದ ಕೊಳಲಿನ , ಹಣತಂಪ್ಪ ಬಂಡಿವಾಡ, ಯಲ್ಲಪ್ಪ ದಾಡಿಬಾವಿ, ಬಸಪ್ಪ ಕೊಳಲಿನ , ಯಲ್ಲಪ್ಪ ಲಕ್ಕನ್ನವರ, ಭೀಮಪ್ಪ ದಾಡಿಬಾವಿ, ಪುರಸಭೆ ಸದಸ್ಯ ರವಿ ಬೆಂಡಿಗೇರಿ, ಮೈಲಾರಪ್ಪ ವೈದ್ಯ, ಮಾಳಪ್ಪ ಮೂಲಿಮನಿ ಸೇರಿದಂತೆ ಕುರುಬ ಸಮಾಜದ ಸಮಸ್ತ ಗುರುಹಿರಿಯರು ಹಾಗು ಯುವಕರು ಉಪಸ್ಥಿತರಿದ್ದರು.






















