Home ಜಿಲ್ಲೆ ಸತ್ಕಾರ ಸಮಾರಂಭ

ಸತ್ಕಾರ ಸಮಾರಂಭ

ಚನ್ನಮ್ಮನ ಕಿತ್ತೂರು, ಏ9: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಗಂಗಾಧರ ಬೇವಿನಕೊಪ್ಪ ಇವರ ಸಾಮಾಜಿಕ ಸೇವೆ ಶ್ಲಾಘನೀಯ ಎಂದು ಕಸಾಪ ಅಧ್ಯಕ್ಷ ಡಾ. ಎಸ್.ಬಿ.ದಳವಾಯಿ ಹೇಳಿದರು.


ಸ್ಥಳೀಯ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಕಸಾಪ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಸತ್ಕಾರ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಾಜ ಸೇವೆಯೇ ನನ್ನ ಮುಖ್ಯ ಉದ್ದೇಶ ಎಂದ ಗಂಗಾಧರ ಅವರು ನಿಚ್ಚಣಕಿ ಗ್ರಾಮ ಮತ್ತು ಕಿತ್ತೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ಧಾರವಾಡ ಎನ್‍ಟಿಟಿಎಫ್ ಸಂಸ್ಥೆಯಲ್ಲಿ ತಾಂತ್ರಿಕ ಪದವಿ ಹೊಂದಿ ಪುಣೆ,ಗೋವಾ, ಬೆಂಗಳೂರಿನ ಹಲವು ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಾ ಹೆಚ್ಚಿನ ಪರಿಣತಿ ಹೊಂದಿದ್ದಾರೆ. ಆಸ್ಟ್ರೇಲಿಯಾದಲ್ಲಿ ಕಳೆದ 40 ವರ್ಷಗಳಿಂದ ಉದ್ಯಮ ಸ್ಥಾಪಿಸಿ ಅನೇಕ ಬಡಜನರಿಗೆ ಉದ್ಯೋಗ ನೀಡಿದ್ದಾರೆ ಇದು ಹೆಮ್ಮೆಯ ವಿಷಯ. ಅವರನ್ನು ಸನ್ಮಾನಿಸುವ ಅವಕಾಶ ಕಸಾಪಕ್ಕೆ ದೊರೆತಿದ್ದು ಹೆಮ್ಮೆಯ ವಿಷಯ ಎಂದರು.


ನಿಚ್ಚಣಕಿ ಗ್ರಾಪಂ ಗ್ರಂಥಪಾಲಕ ಬಸವರಾಜ ದಳವಾಯಿ ಮಾತನಾಡಿ ಸಣ್ಣ ನಿಚ್ಚಣಕಿ ಶರಣರ ಗ್ರಾಮ ಇಂತಹ ಪುಣ್ಯ ನೆಲದಲ್ಲಿ ಜನಸಿದ ಯೋಗ ಸಾಧಕ ಕೆಂಗಾನೂರ ಗಂಗಾಧರ ಬೇವಿನಕೊಪ್ಪ ಇವರು ಆಸ್ಟ್ರೇಲಿಯಾದಲ್ಲಿ ಸಮಾಜ ಸೇವೆ ಮಾಡುತ್ತಾ ಕನ್ನಡಿಗರಲ್ಲಿ ಕನ್ನಡ ಜಾಗೃತಿ ಮೂಡಿಸುತ್ತಿರುವುದು. ಸ್ವಾಗತಾರ್ಹ. ಕರ್ನಾಟಕದಿಂದ ಪದಾಧಿಕಾರಿಗಳು ಆಸ್ಟ್ರೇಲಿಯಾಕ್ಕೆ ತೆರಳಿದಾಗ ಅತಿಥಿ ಸತ್ಕಾರ ಮಾಡುವುದು ಇವರ ಕ್ರೀಯಾಶೀಲತೆಗೆ ಸಾಕ್ಷಿಯಾಗಿದೆ ಎಂದರು.


ಸತ್ಕಾರ ಸ್ವೀಕರಿಸಿ ಗಂಗಾಧರ ಮಾತನಾಡಿದರು.
ಸಭೆಯಲ್ಲಿ ಬೇವಿನಕೊಪ್ಪ ಕುಟುಂಬಸ್ಥರು ಕಸಾಪ ಪದಾಧಿಕಾರಿಗಳು ಇನ್ನಿತರರಿದ್ದರು. ಯಲ್ಲಪ್ಪ ಅವರಾದಿ ನಿರೂಪಿಸಿದರು, ಪಾರ್ವತಿ ಉಳವನ್ನವರ ಸ್ವಾಗತಿಸಿದರು, ರಾಜು ಕಂಬಿ ವಂದಿಸಿದರು.