
ಲಕ್ಷ್ಮೇಶ್ವರ,ಏ9: ದೇವಸ್ಥಾನಗಳು ಧಾರ್ಮಿಕ ನಂಬಿಕೆ, ಸಂಸ್ಕೃತಿ ಹಾಗೂ ಆಧ್ಯಾತ್ಮಿಕ ಪರಂಪರೆಯ ಪ್ರತೀಕಗಳಾಗಿವೆ. ಇವು ಭಕ್ತರ ಶ್ರಧಾ ಕೇಂದ್ರಗಳಾಗಿದ್ದು , ಶಾಂತಿ, ಭಕ್ತಿ, ದೈವಿ ಚೈತನ್ಯ ಮತ್ತು ಸಂಪ್ರದಾಯದ ಸಂಕೇತಗಳಾಗಿವೆ. ಇಂತಹ ಪವಿತ್ರ ಧಾರ್ಮಿಕ ಕ್ಷೇತ್ರಗಳಲ್ಲಿ ಪ್ರಿ ವೆಡ್ಡಿಂಗ್ ಶೂಟಿಂಗ್ ಗಳನ್ನು ನಿಷೇದಿಸಿ ಕಾನೂನು ರೂಪಿಸಬೇಕೆಂದು ಕರ್ನಾಟಕ ಮಂದಿರ ಮಹಾಸಂಘದ ಸದಸ್ಯರಾದ
ಶಿವಶಂಕರ ಬ್ಯಾಡಗಿ, ಅನಿಲಕುಮಾರ ಮುಳಗುಂದ ಹೇಳಿದರು
ಅವರು ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ತಹಸೀಲ್ದಾರ ಧನಂಜಯ ಎಂ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿ ಮದುವೆ ಪೂರ್ವದ ಈ ಶೂಟಿಂಗು ಭಕ್ತರ ಭಾವನೆಗೆ ಧಕ್ಕೆ ತರುವಂತಿದ್ದು ವಧು-ವರರು ದೇವಸ್ಥಾನದಲ್ಲಿ ಮನಸೋ ಇಚ್ಛೆ ಫೆÇೀಟೋಗಳನ್ನು ಮಾಡಿಸಿಕೊಳ್ಳುವುದರಿಂದ ಸಾಂಪ್ರದಾಯಕ್ಕೆ ವಿರುದ್ಧವಾಗುತ್ತದೆ ಆದ್ದರಿಂದ ಪ್ರಿ ವೆಡ್ಡಿಂಗ್ ಶೂಟಿಂಗನ್ನು ನಿಷೇಧಿಸುವ ಕಾನೂನು ರಚಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಮಂಜುನಾಥ ಸುಣ್ಣದಮನಿ,ಕಾವೇರಿ ಲಮಾಣಿ,ಪವಿತ್ರಾ ಲಮಾಣಿ,ಶಿವಪ್ಪ ಮಂಟೂರ,ಮಂಜುನಾಥ ಹರಿಜನ, ಗಂಗಾಧರ ಗೋಡಿ ಎಲ್ ಎಫ್ ಗೋಣೆಪ್ಪನವರ, ಶೋಭಾ ಇಟಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.






















