Home ಜಿಲ್ಲೆ ಮನೆ-ಮನೆ ಗಣತಿ ಕಾರ್ಯಕ್ಕೆ ಗಣತಿದಾರರು ಸಜ್ಜಾಗಬೇಕು: ಜಿಲ್ಲಾಧಿಕಾರಿ ಡಾ.ಆನಂದ ಕೆ. ಸೂಚನೆ

ಮನೆ-ಮನೆ ಗಣತಿ ಕಾರ್ಯಕ್ಕೆ ಗಣತಿದಾರರು ಸಜ್ಜಾಗಬೇಕು: ಜಿಲ್ಲಾಧಿಕಾರಿ ಡಾ.ಆನಂದ ಕೆ. ಸೂಚನೆ

ವಿಜಯಪುರ, ಏ.8: ಏ.16 ರಿಂದ ಮನೆ-ಮನೆ ಮನೆಪಟ್ಟಿ ಕಾರ್ಯಕ್ಕೆ ಗಣತಿದಾರರು ಕಾರ್ಯ ಪ್ರವೃತ್ತರಾಗಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ. ಅವರು ಹೇಳಿದರು.
ಜನಗಣತಿ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗಣತಿದಾರರು ಈಗಾಗಲೇ ಸರಿಯಾಗಿ ತರಬೇತಿ ಪಡೆದುಕೊಳ್ಳುತ್ತಿದ್ದಾರೆ. ಎಲ್ಲರೂ ತರಬೇತಿಗೆ ಹಾಜರಿರುವಂತೆ ನೋಡಿಕೊಳ್ಳಬೇಕು ಅಧಿಕಾರಿಗಳಿಗೆ ಸಲಹೆ ಮಾಡಿದ ಅವರು, ಸ್ವಯಂ ಗಣತಿ ಕಾರ್ಯಕ್ಕೂ ಒತ್ತು ನೀಡಬೇಕು ಎಂದರು.
ಯಾರೂ ನಿರ್ಲಕ್ಷ್ಯವಹಿಸಬಾರದು. ತಾಲೂಕು ಮಟ್ಟದಲ್ಲಿ ತರಬೇತಿ ನೀಡಿ, ಪರಿಪೂರ್ಣ ತರಬೇತಿ ಕೊಡಿಸಬೇಕು ಎಂದರು. ತಹಶೀಲ್ದಾರರು ತರಬೇತಿಯ ಪ್ರತಿ ಹಾಲ್ ಭೇಟಿ ನೀಡಿ ಖುದ್ದಾಗಿ ಸಮಸ್ಯೆ ಪರಿಹರಿಸಬೇಕು ಎಂದರು.
ಗಣತಿ ಸಂದರ್ಭ ತಾಂತ್ರಿಕ ಸಮಸ್ಯೆ ಪರಿಹಾರ ಒದಗಿಸಿ, ಗ್ರಾಪಂ, ಸ್ಥಳೀಯ ಸಂಸ್ಥೆಗಳ ಕಸ ವಿಲೇವಾರಿ ವಾಹನಗಳಲ್ಲಿ ಈ ಜನಗಣತಿ ಬಗ್ಗೆ ಜಾಗೃತಿ ಮೂಡಿಸಬೇಕು ಎಂದ ಅವರು, ಇದೇ ವೇಳೆ ಅಧಿಕಾರಿ, ಸಿಬ್ಬಂದಿ ಸ್ವಯಂ ಗಣತಿ ಮಾಡಿಕೊಳ್ಳಬೇಕು ಎಂದೂ ಸೂಚಿಸಿದರು.
ಕ್ರಾಪ್ ಸರ್ವೆ ಸಂದರ್ಭದಲ್ಲಿ ಪ್ರೈವೆಟ್ ರೆಸಿಡೆಂಟ್ ರಿಪೆÇೀಟರ್ಸ್ ಅವರು ನಿಖರ ಮಾಹಿತಿ ದಾಖಲಿಸಬೇಕು. ಯಾವುದೇ ಮಾಹಿತಿ ತಪ್ಪಾಗಿ ನಮೂದಾದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸಲಾಗುವುದು ಎಂದರು.
ರೈತರ ಯಾವುದೇ ಮಾಹಿತಿ ಮಿಸ್ ಮ್ಯಾಚ್ ಆಗದಂತೆ ನೋಡಿಕೊಳ್ಳಬೇಕು ಎಂದರು.
ತಹಶೀಲ್ದಾರ ಅವರು ಮೇಲುಸ್ತುವಾರಿ ವಹಿಸಬೇಕು. ಕೃಷಿ ಪ್ರಧಾನ ಜಿಲ್ಲೆಯಾಗಿರುವ ಜಿಲ್ಲೆಯಲ್ಲಿ ಈ ದತ್ತಾಂಶ
ಕ್ರಾಪ ಸರ್ವೆ ಡಾಟಾ ಸರಿಯಾಗಿ ನಿರ್ವಹಿಸಬೇಕು.
ಪ್ರೈವೆಟ್ ರೆಸಿಡೆಂಟ್ ರಿಪೆÇೀಟರ್ಸ್
ಅವರು ಸರಿಯಾಗಿ ಕೆಲಸ ನಿರ್ವಹಿಸುವಂತೆ ಕಟ್ಟು ನಿಟ್ಟಾಗಿ ಸೂಚಿಸಿ,ಕ್ರಾಪ್ ಕಟಿಂಗ್ ಎಕ್ಸಪೇರಿಮೆಂಟ್ ಸರಿಯಾಗಿ ನಿರ್ವಹಿಸಬೇಕು ಎಂದ ಅವರು, ಫೀಲ್ಡಿಗೆ ಹೋಗಿ ಕ್ರಾಪ್ ಕಟಿಂಗ್ ಪ್ರಾತ್ಯಕ್ಷಿಕತೆ ಸರಿಯಾಗಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಾಗಿ
ಸೂಚಿಸಿದರು.
ಸಭೆಯಲ್ಲಿ ಎಡಿಸಿ ಡಾ. ಔದ್ರಾಮ, ಉಪವಿಭಾಗಾಧಿಕಾರಿಗಳು ಹಾಗೂ ತಹಸೀಲ್ದಾರ್ ರ ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳಿದ್ದರು.