Home ಜಿಲ್ಲೆ ನ್ಯಾಯ ಒದಗಿಸಲು ಆಗ್ರಹಿಸಿ ಪ್ರತಿಭಟನೆ

ನ್ಯಾಯ ಒದಗಿಸಲು ಆಗ್ರಹಿಸಿ ಪ್ರತಿಭಟನೆ


ನವಲಗುಂದ,ಏ.೮: ಹೊರಗುತ್ತಿಗೆ ಡಿ ದರ್ಜೆ ನೌಕರರನ್ನು ಏಕಾಏಕಿ ಸೇವೆಯಿಂದ ತೆಗೆದು ಹಾಕಿ ತಮಗೆ ನಮಗೆ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಿ ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಎದಿರು ನೌಕರರು ಪ್ರತಿಭಟನೆ ಪ್ರಾರಂಭಿಸಿದ್ದಾರೆ.


ನಾವು ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಸುಮಾರು ೮-೧೦ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತ ಬಂದಿದ್ದೇವೆ ಕೋವಿಡ್ ಸಮಯದಲ್ಲಿ ನಮ್ಮ ಜೀವದ ಹಂಗು ತೊರೆದು ಸೇವೆ ಸಲ್ಲಿಸಿದ್ದೇವೆ. ಈಗ ಏಜೆನ್ಸಿ ಮುಖಾಂತರ ಸೇವೆ ಸಲ್ಲಿಸುತ್ತಿದ್ದರು ಸರಕಾರಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿಗಳು ನಮ್ಮನ್ನು ಕೆಲಸದಿಂದ ತೆಗೆದಿರುತ್ತಾರೆ. ನಮಗೂ ನಿಮಗೂ ಯಾವುದೇ ಸಂಬAಧವಿಲ್ಲ ಎನ್ನುತ್ತಿದ್ದಾರೆ. ಇನ್ನು ಏಜೆನ್ಸಿಯವರನ್ನು ಕೇಳಿದರೆ ನಾವು ನಿಮಗೆ ಕೆಲಸದಿಂದ ತೆಗೆದಿಲ್ಲ ಟೆಂಡರ್‌ಮಾತ್ರ ಮುಗಿದಿರುತ್ತದೆ ಎಂದು ಹೇಳುತ್ತಿದ್ದಾರೆ. ೫ ತಿಂಗಳಿAದ ಸಂಬಳ ಇಲ್ಲದೆ ಕಷ್ಟದಲ್ಲಿದ್ದೇವೆ. ಕೂಡಲೇ ನಾವು ದುಡಿದ ಸಂಬಳ ನೀಡಿ ಎಂದು ಪ್ರತಿಭಟನೆ ನಡೆಸುತ್ತಿದ್ದಾರೆ.


ಹರೀಶ ರಾಮಲಿಂಗಪ್ಪ ತೇರದಾಳ, ರೇಣವ್ವ ನಿಂಗಪ್ಪ ಹಾದಿಮನಿ, ಲತಾ, ಹಾದಿಮನಿ, ಶಂಕರ ಚಿಕ್ಕಲಿಗೇರ, ಚೈತ್ರಾ ಬೆನಕೊಪ್ಪ, ಲಕ್ಷಿ÷್ಮÃ ಅಣ್ಣಿಗೇರಿ, ಶಾಂತಾ ವಡ್ಡರ, ರಾಧಾ ಈರಪ್ಪ ಬೆಂಡಿಗೇರಿ, ಸಾಗರ ಭಜಂತ್ರಿ, ರೂಪಾ ಬೆಂಡಿಗೇರಿ, ನಾಗವ್ವ ಕೊಳ್ಳಿನ ಹನಮವ್ವ ಮಟಿಗೇರ ಪ್ರತಿಭಟನೆಯಲ್ಲಿದ್ದಾರೆ.