
ಧಾರವಾಡ,ಏ8: ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯ ಪ್ರೌಢಶಾಲೆಯಲ್ಲಿ ಬ್ರಿಲಿಯಂಟ್ ಬ್ರೇನ್ಸ್ ವೇದಿಕಾ ಮ್ಯಾಥ್ಸಾ ಕ್ಲಾಸಸ್ ಮತ್ತು ಲಿಂಗಾಯತ ವಿದ್ಯಾಭಿವೃದಿ ್ಧಸಂಸ್ಥೆ ಇವುಗಳ ಜಂಟಿ ಸಹಯೋಗದಲ್ಲಿ ಪದವಿ ಪ್ರಧಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಅಧ್ಯಕ್ಷತೆಯನ್ನು ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯ ಕಾರ್ಯಾಧ್ಯಕ್ಷರಾದ ರಾಜಶೇಖರ ಬೆಳ್ಳಕ್ಕಿ ವಹಿಸಿದ್ದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬಿ.ಎಸ್.ತಾಳಿಕೋಟಿ ಮತ್ತು ರವಿ ಬಿ. ಸೀಬಣ್ಣವರ ಆಗಮಿಸಿದ್ದರು.
ಮುಖ್ಯ ಗುರುಮಾತೆ ಶ್ರೀಮತಿ. ಭುವನೇಶ್ವರಿ ದಂಡಿನ ಪ್ರಾಸ್ತಾವಿಕವಾಗಿ ಮಾತನಾಡಿದರು.
ರವಿ ಸೀಬಣ್ಣವರ ಮಾತನಾಡಿ ನಮ್ಮ ವೇದಿಕಾ ಮ್ಯಾಥ್ಸ್ ಕ್ಲಾಸುಗಳಿಗೆ ಬರುವ ವಿದ್ಯಾರ್ಥಿಗಳನ್ನು ವಿಜ್ಞಾನ ವಿಷಯದಲ್ಲಿ ಪರಿಣಿತರನ್ನಾಗಿ ಮಾಡಲಾಗುವದು ಎಂದರು. ಇನ್ನೋರ್ವ ಅತಿಥಿಯಾದ ಬಿ.ಎಸ್.ತಾಳಿಕೋಟಿ ಇವರು ಮಾತನಾಡಿ ಪಾಲಕರು ತಮ್ಮ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಅವರನ್ನು ಮೊಬೈಲ್ನಿಂದ ದೂರ ಇರುವಂತೆ ಕ್ರಮ ಕೈಕೊಳ್ಳಬೇಕು ಎಂದರು.
ಕಚೇರಿ ಅಧೀಕ್ಷಕರಾದ ಶಿವಲಿಂಗ ನೀಲಗುಂದ ಮಾತನಾಡಿದರು. ಕೈಗಾರಿಕಾ ತರಬೇತಿ ಸಂಸ್ಥೆಯ ಟ್ರೇಡ್ ಗಳ ಬಗ್ಗೆ ಮತ್ತು ಗ್ರಂಥಾಲಯ ವಿಜ್ಞಾನದ ಕೋರ್ಸಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಿದರು. ಬಡವಿದ್ಯಾರ್ಥಿಗಳ ಕಲಿಕೆಗೆ ಸಂಸ್ಥೆಯಿಂದ ಇರುವ ಸೌಲಭ್ಯಗಳ ಬಗ್ಗೆ ಪಾಲಕರಿಗೆ ತಿಳಿಸಿದರು.
ಸಹಶಿಕ್ಷಕಿಯರಾದ ಶ್ರೀಮತಿ ಸಾವಿತ್ರಿ ಪಾಟೀಲ, ಶ್ರೀಮತಿ ಮಂಜುಳಾ ಬಾವಿಹಾಳ, ಶ್ರೀಮತಿ ಮಂಜುಳಾ ಹನಸಿ, ಶ್ರೀಮತಿ ಶಶಿಕಲಾ ಹಿರೇಮಠ, ಶಿಕ್ಷಕೇತರ ಸಿಬ್ಬಂದಿಗಳಾದ ಶ್ರೀಮತಿ. ಸುನಿತಾ ಚಿನ್ನದಕೈ, ರೇಣುಕಾ ಹೆಬ್ಬಳ್ಳಿ ಭಾಗವಹಿಸಿದ್ದರು.






















