
ಧಾರವಾಡ, ಏ.8: ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಕಚೇರಿಯಲ್ಲಿ ಉಚಿತ ಯೋಗ ಶಿಬಿರದ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಶಿಬಿರವನ್ನು ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಅಡವೇಶ್ ಇಟಗಿ ಅವರು ಉದ್ಘಾಟಿಸಿ, ಮಾತನಾಡಿ, ಬೇಸಿಗೆ ಇರುವುದರಿಂದ ಮಕ್ಕಳು ಒಳಾಂಗಣ ಆಟಗಳನ್ನು ಆಡಬೇಕು. ಸರಿಯಾಗಿ ಪೌಷ್ಟಿಕ ಆಹಾರವನ್ನು ಸೇವಿಸಬೇಕು. ಜಾಸ್ತಿ ನೀರನ್ನು ಕುಡಿಯಬೇಕು. ಗಿಡ ಹತ್ತುವುದು, ಕೆರೆಗಳಿಂದ ದೂರ ಇರುವುದು, ಮೊಬೈಲ್ ಬಳಕೆ ಮಾಡದೇ ಇರುವುದು, ಮಕ್ಕಳು ಸುರಕ್ಷತೆಯನ್ನು ಕಾಪಾಡಿಕೊಳ್ಳಬೇಕು. ಯೋಗ ಮಾಡುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ ಎಂದು ತಿಳಿಸಿದರು.
ಆಪ್ತ ಕಾರ್ಯದರ್ಶಿ ಅನ್ನಪೂರ್ಣ ಸಂಗಳದ ಮಾತನಾಡಿ ಯೋಗ ಶಿಬಿರದ ಕುರಿತು ಮಕ್ಕಳಿಗೆ ಮಾರ್ಗದರ್ಶನ ನೀಡಿದರು.
ಶಿಬರದಲ್ಲಿ ಹುಬ್ಬಳ್ಳಿ ಧಾರವಾಡದ ಮಕ್ಕಳು ಭಾಗವಹಿಸಿದ್ದರು.






















