Home ಜಿಲ್ಲೆ ತರಬೇತಿ ಕಾರ್ಯಾಗಾರ

ತರಬೇತಿ ಕಾರ್ಯಾಗಾರ

ನವಲಗುಂದ,ಏ8 : ಜನಗಣತಿ ಕಾರ್ಯದಿಂದ ದೇಶದ ಅಭಿವೃದ್ಧಿಗೆ ಯೋಜನೆ ರೂಪಿಸಲು ಸಹಕಾರಿಯಾಗುತ್ತದೆ. ಈ ಬಾರಿಯ ಜನಗಣತಿ ಸುಲಭ ಹಾಗೂ ಸರಳವಾಗಿದ್ದು, ಡಿಜಿಟಲ್ ಮೊಬೈಲ್ ಆಧಾರಿತ ಜನಗಣತಿಯಾಗಿದೆ ಎಂದು ಜನಗಣತಿ ನೋಡಲ್ ಅಧಿಕಾರಿ ಆರ್ ದೇವರಾಜ ಹೇಳಿದರು.

ಅವರು ಸ್ಥಳೀಯ ಶಂಕರ ಮಹಾವಿದ್ಯಾಲಯದಲ್ಲಿ ಭಾರತ ಜನಗಣತಿ 2027 ರ ನಿಮಿತ್ಯ ಮೇಲ್ವಿಚಾರಕರು ಹಾಗೂ ಗಣತಿದಾರರಿಗೆ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಏ.1 ರಿಂದ 15ರವರೆಗೆ ಸ್ವಯಂ ಗಣತಿಗೆ ಅವಕಾಶ ನೀಡಿದ್ದು, ಏ.16ರಿಂದ ಗಣತಿದಾರರು ಮನೆಬಾಗಿಲಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆ. ಗಣತಿದಾರರು ಗೊಂದಲ ಮಾಡಿಕೊಳ್ಳದೆ ತರಬೇತಿದಾರರ ಮಾರ್ಗದರ್ಶನದ ಮೇರೆಗೆ ಮಾಹಿತಿ ಸಂಗ್ರಹಿಸಿ ಎಂದರು.

ತಹಶೀಲ್ದಾರ ಸುಧೀರ ಸಾಹುಕಾರ ಮಾತನಾಡಿ ಡಿಜಿಟಲ್ ಜನಗಣತಿ ಕಾರ್ಯಕ್ರಮಕ್ಕೆ ತಾಲ್ಲೂಕು ಆಡಳಿತದಿಂದ ಗ್ರಾಮೀಣ ಭಾಗದಲ್ಲಿ 157 ಗಣತಿದಾರರು, 26 ಮೇಲ್ವೀಚಾರಕರು, 9 ತರಬೇತಿದಾರರು. ಹಾಗೂ ಕಾಯ್ದಿದಿರಿಸಿದ 16 ಗಣತಿದಾರರು ಹಾಗೂ ಮೂವರು ಮೇಲ್ವೀಚಾರಕರು ಸೇರಿ ನೇಮಿಸಲಾಗಿದೆ’

ಎಲ್ಲ ಗಣತಿದಾರರು ಹಾಗೂ ಮೇಲ್ವಿಚಾರಕರು ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಪಡೆದು ಮೊಬೈಲ್‍ನಲ್ಲಿ ಸಾರ್ವಜನಿಕರಿಂದ ನಿಖರ ಮಾಹಿತಿ ಪಡೆದು 2027ರ ಜನಗಣತಿಯನ್ನು ಯಶಸ್ವಿಗೊಳಿಸಿ ಎಂದು ತಿಳಿಸಿದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವ್ಹಿ ಡಿ ರಂಗಣ್ಣವರ, ಎನ್ ವ್ಹಿ ಕುರವತ್ತಿಮಠ, ಜಿ ಎಂ ಮಾಕಣ್ಣವರ, ಉಪ ತಹಶೀಲ್ದಾರ ಗಣೇಶ ಚಳ್ಳಕೆರೆ, ಹನುಮರಡ್ಡಿ ದೇವರಡ್ಡಿ ಸೇರಿ ತರಬೇತಿದಾರರು, ಮೇಲ್ವೀಚಾರಕರು ಗಣತಿದಾರರು ಇದ್ದರು