
ನವಲಗುಂದ,ಏ7 : ಇಂದಿನ ಒತ್ತಡ ದಿನಮಾನಗಳಲ್ಲಿ ನೆಮ್ಮದಿಯ ಜೀವನಕ್ಕೆ ಸತ್ಸಂಗ, ಪ್ರವಚನಗಳು ಸಹಕಾರಿ ಎಂದು ಅರಹಟ್ಟಿ ಗ್ರಾಮದ ಜಗದ್ಗುರು ಶ್ರೀ ಮುರುಘರಾಜೇಂದ್ರ ಶ್ರೀಗಳು ನುಡಿದರು.
ಅವರು ತಾಲ್ಲೂಕಿನ ಅರಹಟ್ಟಿ ಗ್ರಾಮದ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ವಿರಕ್ತಮಠ ಮಹಾರಥೋತ್ಸವ ರಥೋತ್ಸವ ಸ್ಥಳ ಬದಲಾವಣೆ ಹಾಗೂ ಪುರಾಣ, ಪ್ರವಚನ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.
ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಮಾತನಾಡಿ ದೇಶದ ಸಂಸ್ಕೃತಿ, ಪರಂಪರೆ ತುಂಬಾ ಮಹತ್ವವಾದದ್ದು, ಆದರೆ ಇಂದು ಮಕ್ಕಳಲ್ಲಿ ನೈತಿಕತೆ, ಧಾರ್ಮಿಕತೆ ಕಡಿಮೆಯಾಗಿ ಆಚಾರ-ವಿಚಾರಗಳಿಂದ ದೂರ ಉಳಿಯುತ್ತಿದ್ದಾರೆ. ಇದನ್ನು ಹೋಗಲಾಡಿಸಲು ಪಾಲಕರು ಮತ್ತು ಸಮಾಜ ಪುರಾಣ-ಪ್ರವಚನದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.
ಶ್ರೀಸಿದ್ಧಲಿಂಗಯ್ಯ ಅಜ್ಜನವರು, ತೋಟಪ್ಪ ಶರಣರು, ಈರಯ್ಯ ಬೂಸನೂರಮಠ, ಸಿದ್ಧಣ್ಣ ಕೆಟಗೇರಿ, ನಿಂಗನಗೌಡ್ರ ಪಾಟೀಲ, ಬಸಣ್ಣ ಸವದಿ, ಮಲ್ಲಿಕಾರ್ಜುನ ಸಂಗನಗೌಡ್ರ , ನಿಂಗನಗೌಡ್ರ ಪಾಟೀಲ, ವೀರಭದ್ರ ಮಾಳವಾಡ ಸೇರಿ ಗ್ರಾಮದ ಗುರು ಹಿರಿಯರು, ಸಖಲ ಸದ್ಭಕ್ತರು ಪಾಲ್ಗೊಂಡಿದ್ದರು.






















