Home ಜಿಲ್ಲೆ ದೇಶ ಕಂಡ ಅಪ್ರತಿಮ ನಾಯಕ ಬಾಬು ಜಗಜೀವನ್ ರಾಮ್

ದೇಶ ಕಂಡ ಅಪ್ರತಿಮ ನಾಯಕ ಬಾಬು ಜಗಜೀವನ್ ರಾಮ್

ಬೆಳಗಾವಿ, ಏ.6: ಇತಿಹಾಸ ಮಹಾನ್ ವ್ಯಕ್ತಿಗಳನ್ನ ನೇಮಿಸುತ್ತದೆ ಆದರೆ ಸಮಯ ಕೆಲವೇ ಕೆಲವು ವ್ಯಕ್ತಿಗಳನ್ನು ನೆನಪಿಸುತ್ತದೆ. ಅಂತಹವರಲ್ಲಿ ಡಾ. ಬಾಬು ಜಗಜೀವನ್ ರಾಮ್ ಒಬ್ಬರು ಎಂದು ಸಂಜೀವ ಕೆ ತಳವಾರ ಅವರು ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆಯ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಸಂಗಮೇಶ್ವರ ನಗರದ ಡಾ. ಬಾಬು ಜಗಜೀವನ್ ರಾಮ್ ಉದ್ಯಾನವನದಲ್ಲಿ ನಡೆದ ಹಸಿರುಕ್ರಾಂತಿ ಹರಿಕಾರ ಡಾ. ಬಾಬು ಜಗಜೀವನ್ ರಾಮ್ ಜಯಂತಿ; ಉತ್ಸವ-2026ರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಮಾನತೆ ಸಮಾಜದ ಅಡಿಪಾಯ ಎಂದು ಹೇಳಿ ಅದಕ್ಕೆ ಶ್ರಮಿಸಿ, ಕಾರ್ಮಿಕರ ಹಿತವೇ ದೇಶದ ಹಿತ ಎಂದು ಹೇಳಿದರು. ಆಹಾರ ಭದ್ರತೆ ದೇಶದ ಭದ್ರತೆ ಎಂದು ಸಂದೇಶ ನೀಡಿ ಹಗಲಿರುಳು ದುಡಿದ ದಿಮಂತ ನಾಯಕ ಡಾ. ಬಾಬು ಜಗಜೀವನ್ ರಾಮ್ ಎಂದು ಹೇಳಿದರು.

ಸಂವಿಧಾನ ಸರಿಯಾದ ರೀತಿಯಲ್ಲಿ ಜಾರಿಯಾಗಬೇಕು, ಸಂದರ್ಭಗಳಿಂದ ಸೋಲದೆ ಆ ಸಮಯವನ್ನೇ ನಿಮ್ಮ ಅವಕಾಶವಾಗಿ ಮಾಡಿಕೊಳ್ಳಿ ಎಂದು ಎಲ್ಲ ಜನರಿಗೆ ತಿಳಿ ಹೇಳಿದ ಡಾ.ಬಾಬು ಜಗಜೀವನ್ ರಾಮ ಅವರ ಜೀವನ, ಆದರ್ಶಗಳನ್ನು ಎಲ್ಲರೂ ಅರಿತುಕೊಳ್ಳಲು ಸಂಜೀವ ಕೆ ತಳವಾರ ಅವರು ಕರೇ ನೀಡಿದರು.

ಪೆÇಲೀಸ್ ಆಯುಕ್ತರಾದ ಭೂಷಣ್ ಗುಲಾಬರಾವ್ ಬೊರಸೆ ಅವರು ಮಾತನಾಡಿ, ಜಗಜೀವನ ರಾಮ್ ಎಲ್ಲಾ ಯುವಕರಿಗೆ ಸ್ಪೂರ್ತಿಯಾಗಲಿ ಎಲ್ಲರೂ ನನ್ನವರು, ಸಮಾನತೆ, ಸಮಭಾವ ಎಂಬ ಭಾವನೆ ಇಂದ ನಾವು ಬದುಕಬೇಕು ಎಂದರು.

ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಮಾತನಾಡಿ, ದೇಶ ಕಂಡ ಅಪ್ರತಿಮ ನಾಯಕರಲ್ಲಿ ಜಗಜೀವನ್ ರಾಮ್ ಅವರು ಒಬ್ಬರು, ಕಾರ್ಮಿಕರಿಗೆ ಅನೇಕ ಕಾನೂನು ಗಳನ್ನೂ ಜಾರಿಗೆ ತಂದರು, ಸಮಸ್ಯೆ ಹೇಳುವರು ನಾಯಕರಲ್ಲ ಸಮಸ್ಯೆಗಳನ್ನು ಪರಿಹರಿಸುವ ವ್ಯಕ್ತಿಗಳು ನಾಯಕರಾಗುತ್ತಾರೆ.

ಬಾಬು ಜಗಜೀವನ ರಾಮ್ ಟಾಸ್ಕ್ ಮಾಸ್ಟರ್ ದೇಶದ ಪ್ರತಿ ಸಮಸ್ಯೆ ಪರಿಹರಿಸುವರಲ್ಲಿ ನಿಂತವರು, ಆಹಾರದ ಕೊರತೆಯನ್ನು ಹೋಗಲಾಡಿಸಿ ಬೇರೆ ದೇಶಗಳಿಗೆ ರಫ್ತು ಮಾಡುವಷ್ಟು ಬೆಳೆಸಿರುವುದಕ್ಕೆ ಕಾರಣ ಬಾಬುಜಿ ಯವರು, ದೇಶ ಕಷ್ಟದಲ್ಲಿ ಇದಾಗ ಗಟ್ಟಿಯಾಗಿ ನಿಂತವರು ಬಾಬುಜಿ ಅವರು, ಎಂದು ಹೇಳಿದರು.

ಬೆಳಗಾವಿ ಉಪ ವಿಭಾಗಾಧಿಕಾರಿ ಶ್ರವಣ್ ನಾಯಕ್ ಅವರು ಮಾತನಾಡಿ, ಆಡಳಿತ ಎಂದರೆ ಅಧಿಕಾರ ಬಯಸುವುದಲ್ಲ ಅದರಿಂದ ಎಷ್ಟು ಜನರಿಗೆ ಅನುಕೂಲ ಮಾಡಿದ್ದೀವಿ ಎಂಬುದು ಮುಖ್ಯ; ಜಗಜೀವನ ರಾಮ್ ಅವರ ಜೀವನವು ಸಾಮಾಜಿಕ ವ್ಯವಸ್ಥೆಗೆ ಅಡಿಪಾಯ ಅವರ ವಿಚಾರಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ರಾಮನಗೌಡ ಕನ್ನೊಳ್ಳಿ, ಪರಶುರಾಮ ವಗ್ಗನವರು, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜ ಚನ್ನಯ್ಯನವರ, ಕರ್ನಾಟಕ ನೌಕರ ಸಂಘದ ಅಧ್ಯಕ್ಷ ರಾಯಪ್ಪಗೋಳ, ಕ್ರೀಡಾ ಇಲಾಖೆಯ ಉಪ ನಿರ್ದೇಶಕರು, ಸಮಾಜದ ಮುಖಂಡರಾದ ಭೀಮರಾವ್ ಪವಾರ್, ಮಲ್ಲೇಶ ಚೌಗಲಾ, ಮಹಾದೇವ ತಳವಾರ, ಭಾವಕಣ್ಣ ಭಂಗ್ಯಾಗೋಳ, ಸಿದ್ರಾಯಿ ಮೇತ್ರಿ, ಲಕ್ಷ್ಮಣ್ ಲಗಮಪ್ಪಗೋಳ, ಬಸವರಾಜ ಅರವಳ್ಳಿ, ಮಹಾದೇವ ಪೆÇೀಲ್, ಬಸವರಾಜ ರಾಯವಾಗೋಲ್, ಸುಧೀರ ಚೌಗಲೆ, ಸಂದೀಪ ಕೋಲಕಾರ, ಹಿರಲಾಳ ಚೌಹಾಣ್, ಜೀವನ್ ಕುರಾನೆ, ಸಾರ್ವಜನಿಕರು ಉಪಸ್ಥಿತರಿದ್ದರು.