Home ಜಿಲ್ಲೆ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಸ್ಪಂದನೆ ಅಗತ್ಯ

ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಸ್ಪಂದನೆ ಅಗತ್ಯ

ಚನ್ನಮ್ಮನ ಕಿತ್ತೂರು,ಏ6: ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಸ್ಪಂದನೆ ಅಗತ್ಯ. ರಾಷ್ಟ್ರೀಯ ಸೇವಾ ಯೋಜನೆ. ಸಾಮಾಜಿಕ ಕಳಕಳಿ ಬೆಳೆಸುವುದು ಮೂಲ ಉದ್ದೇಶವೆಂದು ಕಿನಾವಿವ ಸಂಘದ ಮಾಜಿ ಚೇರಮನ್ ಹಾಗೂ ನಿರ್ದೇಶಕ ಜಗದೀಶ ವಸ್ತ್ರದ ಹೇಳಿದರು.


ತಾಲೂಕಿನ ಬೈಲೂರ ನಿಷ್ಕಲ ಮಂಟಪದಲ್ಲಿ ನಡೆಯುತ್ತಿರುವ ಕಿನಾವಿವ ಸಂಘ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇ?À ಶಿಬಿರವನ್ನು ಉದ್ಘಾಟಿಸಿ ಮಾತನಾಡಿ. ಇಂದಿನ ತಂತ್ರಜ್ಞಾನ ಯುಗದಲ್ಲಿ ಜನರು ಸಾಮಾಜಿಕ ಸ್ಪಂದನೆಯನ್ನು ಕಳೆದುಕೊಂಡಿದ್ದು ಕೇವಲ ಸ್ವಾರ್ಥಿ ಜೀವನವನ್ನು ನಡೆಸುತ್ತಿದ್ದಾರೆ, ಸಮಾಜದಲ್ಲಿ ಸಂಬಂಧಗಳು ಕಳಚಿದ ಕೊಂಡಿಗಳಾಗಿವೆ. ಇದರಿಂದ ನಮ್ಮ ಸಮಾಜದ ಮೇಲೆ ಸಾಕಷ್ಟು ದುಷ್ಪರಿಣಾಮ ಉಂಟಾಗಿದ್ದು ಇದನ್ನು ತಡೆಗಟ್ಟಲು ಸಾಮಾಜಿಕ ಪಿಡುಗುಗಳನ್ನು ಮುಕ್ತಗೊಳಿಸಲು ಸ್ಪಂದಿಸುವಂತೆ ಯುವಕರನ್ನು ಬೆಳೆಸಬೇಕಾಗಿದೆ. ಯುವಕರನ್ನು ರಾಷ್ಟ್ರದ ಅಭಿವೃದ್ಧಿಯಲ್ಲಿ ತೊಡಗಿಸುವುದು ನಮ್ಮೆಲ್ಲರ ಮೂಲ ಕರ್ತವ್ಯವಾಗಿದೆ ಅದಕ್ಕಾಗಿ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿಗಳನ್ನು ನೀಡುವುದರ ಮೂಲಕ ಅವರಲ್ಲಿ ಸಮಾಜದ ಅರಿವು ಮೂಡಿಸುವುದು ಎಲ್ಲ ವರ್ಗದ ಜನರೊಂದಿಗೆ ಸಾಮರಸ್ಯದಿಂದ ಬಾಳುವಂತೆ ಬೆಳೆಸಬೇಕಾಗಿದೆ ಎಂದರು..


ಅಧ್ಯಕ್ಷತೆ ವಹಿಸಿ ಮಾತನಾಡಿದ ಕಿನಾವಿವ ಸಂಘದ ಚೇರಮನ್ನ ಶಂಕರ ವಳಸಂಗ ರಾ.ಸೇ.ಯೋ ದ ವಿಶೇಷ ಶಿಬಿರದಲ್ಲಿ ವಿದ್ಯಾರ್ಥಿಗಳು ಅನೇಕ ಸಾಮಾಜಿಕ ಕಾರ್ಯಗಳನ್ನು ಕೈಗೊಂಡು ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವಂತಾಗಬೇಕು ಹಾಗೂ ಸಮಾಜಕ್ಕೆ ಒಬ್ಬ ಉತ್ತಮ ಜವಾಬ್ದಾರಿಯುತ ನಾಗರೀಕನಾಗಬೇಕು ಎಂದು ಹೇಳಿದರು.


ಪ್ರಾಸ್ತಾವಿಕವಾಗಿ ಮಾತನಾಡಿದ ಶಿಬಿರಾಧಿಕಾರಿ ಡಾ. ಹೊನ್ನರಾಜು ಎಸ್.ವಿ ದತ್ತು ಗ್ರಾಮ ಬೈಲೂರಲ್ಲಿ ನಡೆಯುತ್ತಿರುವ ವಾರ್ಷಿಕ ವಿಶೇಷ ಶಿಬಿರದಲ್ಲಿ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ, ನಾಯಕತ್ವ ಗುಣ ವೃದ್ಧಿಸಿಕೊಳ್ಳುವ ಹಾಗೂ ಸಮಾಜದ ಅಭಿವೃದ್ಧಿಗೋಸ್ಕರ ಅನೇಕ ವಿಶೇಷ ಕಾರ್ಯಕ್ರಮಗಳನ್ನು, ಉಪನ್ಯಾಸಗಳನ್ನು ಹಾಗೂ ಆರೋಗ್ಯ ರಕ್ಷಣೆ ಹಾಗೂ ಸಾಂಕ್ರಾಮಿಕ ರೋಗಗಳ ಕುರಿತು ಅರಿವುಮೂಡಿಸುವುದು ಹಾಗೂ ನಾಗರೀಕರ ಆರೋಗ್ಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಂಡಿದ್ದು ಇದರ ಸದುಪಯೋಗ ಗ್ರಾಮಸ್ಥರು ಪಡೆಯಬೇಕೆಂದರು.


ಶ್ರೀ ಚನ್ನಬಸವೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಶಂಕರ ಪತ್ತಾರ ಸಸಿಗೆ ನೀರರೆಯುವ ಮೂಲಕ ಶಿಬಿರವನ್ನು ಉದ್ಘಾಟಿಸಿದರು. ಶಂಕರಗೌಡ ಪಾಟೀಲ, ಮಯೂರ ಗಿರಿಯಾಲ, ಬಸವರಾಜ ಲದ್ದೀಮಠ, ಬಸವರಾಜ ಬೀಡಿ, ಕಿನಾವಿವ ಸಂಘದ ವಾಯಿಸ್ ಚೇರಮನ್ನ ಜಗದೀಶ ಘಟ್ನಟ್ಟಿ, ಗೌರವ ಕಾರ್ಯದರ್ಶಿ ಜಗದೀಶ ಬಿಕ್ಕಣ್ಣವರ ಇತರರಿದ್ದರು. ಸ್ವಾಗತ ಪ್ರಾಚಾರ್ಯ ನಾಗರಾಜ ಎಚ್ .ಕೆ, ಮೇಘಾ ಸಂಗಡಿಗರು ಪ್ರಾರ್ಥನೆ ಹಾಗೂ ರಾ.ಸೇ.ಯೋ ಗೀತೆಯನ್ನು ಹಾಡಿದರು, ಡಾ. ಸಂಗೀತಾ ತೋಲಗಿ ವಂದಿಸಿದರು.