
ಚನ್ನಮ್ಮ ಕಿತ್ತೂರ,ಏ4: ಸಮೀಪದ ಚಿಕ್ಕಹಟ್ಟಿಹೊಳಿ ಗ್ರಾಮದ ಶ್ರೀ ವೀರಭಧ್ರೆಶ್ವರ ಮಹಾರಥೋತ್ಸವ ಭಕ್ತಿ ಅದ್ದೂರಿಯಿಂದ ನೆರವೇರಿತು.
ರಥದಲ್ಲಿ ಶ್ರೀ ವೀರಭಧ್ರೆಶ್ವರ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು. ಸೇರಿದ ಅಪಾರ ಭಕ್ತರು ಜಯಘೋಷಗಳ ಮದ್ಯೆ ರಥ ಎಳೆದರು.
ರಥವನ್ನು ಬೃಹತ್ ರುದ್ರಾಕ್ಷಿ ಮಾಲೆಯಿಂದ ಶೃಂಗರಿಸಲಾಗಿತ್ತು. ಇಟಗಿ, ಹಿರೇಬಾಗೇವಾಡಿ, ದಾಸ್ತಿಕೊಪ್ಪ, ಚಿಕ್ಕಮುನವಳ್ಳಿ, ಬೈಲೂರು, ಬೈಲಹೊಂಗಲ, ಬೆಳಗಾವಿ ಸೇರಿದಂತೆ ಸುತ್ತಲಿನ ಅನೇಕ ಗ್ರಾಮಗಳ ಅಪಾರ ಸಂಖ್ಯೆಯ ಭಕ್ತರು ಸೇರಿದ್ದರು.






















