Home ಜಿಲ್ಲೆ ಲಕ್ಷೆö್ಮÃಶ್ವರ ಪುರಸಭೆ ಬಜೆಟ್: ಮಂಡನೆ

ಲಕ್ಷೆö್ಮÃಶ್ವರ ಪುರಸಭೆ ಬಜೆಟ್: ಮಂಡನೆ


ಲಕ್ಷೆö್ಮÃಶ್ವರ,ಏ.೩:
ಪಟ್ಟಣದ ಪುರಸಭೆಯ ಸನ್ ೨೦೨೬-೨೭ನೇ ಸಾಲಿನ ಬಜೆಟನ್ನು ಸಭೆಯಲ್ಲಿ ಆಡಳಿತಾದಿಕಾರಿಗಳ ಪರವಾಗಿ ಮುಖ್ಯಾದಿಕಾರಿ ಮಹಾಂತೇಶ ಭೀಳಗಿ ಮಂಡಿಸಿದರು,
ಪುರಸಭೆಯ ಆದಾಯವನ್ನು ಪುರಸಭೆ ನಿಧಿ ಮನೆ ಕರ ಮಳಿಗೆ ಬಾಡಿಗೆ ನೀರಿನ ಕರ ಇತರೆ ಮೂಲಗಳಿಂದ ೩ ಕೋಟಿ ೯೬ ಲಕ್ಷ ೭೦ ಸಾವಿರ ಅಂದಾಜಿಸಲಾಗಿದೆ,


ಅನುದಾನದ ಮೂಲ ಅಂದರೆ ಎಸ್ ಎಫ್ ಸಿ ಮುಕ್ತ ನಿಧಿ ೧೬ನೇ ಹಣಕಾಸು ಮತ್ತು ಇತರೆ ಅನುದಾನದ ಮೂಲದಿಂದ ೧೦ಕೋಟಿ ೫೫ಲಕ್ಷ ೩೦ಸಾವಿರ ರೂಗಳನ್ನು ನಿರೀಕ್ಷಸಲಾಗಿದೆ ಇತರೆ ಅ ಸಾಮಾನ್ಯ ಖಾತೆಯಿಂದ ೧ಕೋಟಿ ೬೧ಲಕ್ಷ ೧ಸಾವಿರ ನಿರೀಕ್ಷಲಾಗಿದೆ ಒಟ್ಟು ಆದಾಯ ೧೬ಕೋಟಿ ೧೦ಲಕ್ಷ ೭ಸಾವಿರ ಮತ್ತು ಆರಂಬಿಕ ಶುಲ್ಕ ೧೦ಕೋಟಿ ೧೪ಲಕ್ಷ ೪೪ಸಾವಿರ ಒಟ್ಟು ಬಜೆಟಿನ ಗಾತ್ರ ೨೬ಕೋಟಿ ೨೪ಲಕ್ಷ ೫೧ಸಾವಿರ ಇರುತ್ತದೆ,ಎಂದು ಹೇಳಿದರು,


ಇದೆ ಸಾಲಿಗೆ ಆಡಳಿತ ಮತ್ತು ಕಚೇರಿ ವೆಚ್ಚ ನೀರು ಸರಬರಾಜು ಬೀದಿ ದೀಪ ಸಾರ್ವಜನಿಕ ಅರೋಗ್ಯ ಸ್ವಚ್ಛತೆ ಇವುಗಳಿಗೆ ೪ಕೋಟಿ ೨೧ಲಕ್ಷ ೪೭ಸಾವಿರ ಮೀಸಲಿಡಲಾಗಿದೆ ಅನುದಾನ ಬಂದAತಹ ಮೊತ್ತವನ್ನು ಪುರಸಭೆ ನೌಕರವೇತನ ನೀರು ಸರಬರಾಜು ಬೀದಿ ದೀಪ ವಿದ್ಯುತ್ ಬಿಲ್ ರಸ್ತೆ ಮತ್ತು ಚರಂಡಿ ನಿರ್ಮಾಣ ಇತ್ಯಾದಿಗಳಿಗೆ ೧೭ಕೋಟಿ ೨೫ಲಕ್ಷ ೨೨ಸಾವಿರ ಮೀಸಲೀಡಲಾಗಿದೆ ಕೆರೆ ಅಭಿವೃದ್ಧಿಗೆ ೧೫ಲಕ್ಷ ಮಳಿಗೆ ನಿರ್ಮಾಣಕ್ಕೆ ೧ಕೋಟಿ ಸರಕಾರಕ್ಕೆ ಪಾವತಿಸಬೇಕಾದ ತೆರಿಗೆ ಇತ್ಯಾದಿಗಳಿಗೆ ೧ಕೋಟಿ ೬೯ಲಕ್ಷ ೩೮ಸಾವಿರ ಮೀಸಲೀಡಲಾಗಿದೆ ಹೀಗೆ ಒಟ್ಟು ಬಜೆಟ್ ಮೊತ್ತ ೨೫ಕೋಟಿ ೨೪ಲಕ್ಷ ೫೧ಸಾವಿರ ರೂ ಗಳನ್ನು ನಿಗದಿಪಡಿಸಲಾಗಿದ್ದು ಒಟ್ಟು ೯೩ಲಕ್ಷ ೧೪ಸಾವಿರ ರೂಗಳ ಉಳಿತಾಯ ಬಜೆಟ ಎಂದು ಅವರು ಹೇಳಿದರು,


ಮುಂಬರುವ ದಿನಗಳಲ್ಲಿ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೆರಿಸಲು ಕ್ರಮ ಕೈಗೊಳ್ಳುವುದು ನಗರ ಸ್ವಚ್ಛತೆಗೆ ಆದ್ಯತೆ ೩೬ಕೋಟಿ ರೂಪಾಯಿಗಳ ಕುಡಿಯುವ ನೀರಿನ ಯೋಜನೆಗೆ ತ್ವರಿತವಾಗಿ ಅನುಷ್ಠಾನಗೊಳಿಸಲು ಕ್ರಮಗೊಳಿಸಲಾಗುವುದು,


ಪುರಸಭೆಯಿಂದ ಬಡಜನರ ಕಲ್ಯಾಣಕ್ಕಾಗಿ ರೂಪಿಸಲಾಗಿದ್ದು ಎಸ್ ಸಿ ಎಸ್ ಟಿ ಪಂಗಡದ ಕಲ್ಯಾಣ ಕಾರ್ಯಕ್ರಮಕ್ಕಾಗಿ ಪುರಸಭೆ ನಿಧಿಯಿಂದ ೩ಲಕ್ಷ ೨೧ಸಾವಿರ ರಾಜ್ಯ ಹಣಕಾಸು ನಿಧಿಯಿಂದ ೩ಲಕ್ಷ, ಇತರೆ ಬಡ ಜನಾಂಗದವರ ಕಲ್ಯಾಣಕ್ಕಾಗಿ ಪುರಸಭೆ ನಿಧಿಯಿಂದ ೧ಲಕ್ಷ ರಾಜ್ಯ ಹಣಕಾಸು ನಿಧಿಯಿಂದ ೬೬ಸಾವಿರ, ಅಂಗವಿಕಲರ ಕಲ್ಯಾಣಕ್ಕಾಗಿ ಪುರಸಭೆ ನಿಧಿಯಿಂದ ೬೬ಸಾವಿರ ರಾಜ್ಯ ಹಣಕಾಸು ನಿಧಿ ೪೫ಸಾವಿರ ನಿಗದಿಪಡಿಸಲಾಗಿದೆ ಎಂದು ಜಿಲ್ಲೆಯಲ್ಲಿ ಭರದಿಂದ ಬೆಳೆಯುತ್ತಿರುವ ತಾಲೂಕ ಕೇಂದ್ರ ಸ್ಥಳವಾಗಿರುವ ಲಕ್ಷೆ÷್ಮÃಶ್ವರದ ಅಭಿವೃದ್ಧಿಗಾಗಿ ಮತ್ತು ಮೂಲಭೂತ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೂ ಅಗತ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆ ವ್ಯವಸ್ಥಾಪಕಿ ಮಂಜುಳಾ ಹೂಗಾರ, ಕಂದಾಯ ಅಧಿಕಾರಿ ಸುರೇಶ ಪೂಜಾರ ಕಂದಾಯ ನಿರೀಕ್ಷಕ ವೆಂಕಟೇಶ ರಾಮಗೇರಿ,ಹಣಕಾಸು ವಿಭಾಗದ ನೇತ್ರಾ ಹೊಸಮನಿ, ಮಹೇಶ ಹೊಸಮನಿ,ಹನುಮಂತಪ್ಪ ನಂದೆಣ್ಣವರ ಇದ್ದರು.