
ಚನ್ನಮ್ಮನ ಕಿತ್ತೂರು,ಏ.೩: ಪಟ್ಟಣದ ಐತಿಹಾಸಿಕ ರಾಣಿಚನ್ನಮ್ಮ ಕೋಟೆ ಆವರಣದಲ್ಲಿ ಶ್ರೀ ಕೋಟೆ ಆಂಜನೇಯ ಜಯಂತಿಯನ್ನು ಸಹಸ್ರಾರು ಭಕ್ತಾಧಿಗಳ ನಡುವೆ ಅದ್ದೂರಿಯಿಂದ ಆಚರಿಸಲಾಯಿತು.
ಶಾಸಕ ಬಾಬಾಸಾಹೇಬ ಪಾಟೀಲ, ಗಣ್ಯರು ಸೇರಿ ಆಂಜನೇಯ ದೇವರ ದರ್ಶನ ಪಡೆದು ಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಂಡರು ಪಟ್ಟಣ ಸೇರಿದಂತೆ ವಿವಿಧೆಡೆ ದೀಪಾಲಂಕಾರ ತಳಿರು ನೋಡುಗರ ಕಣ್ಮನ ಸೇಳೆದಿತ್ತು. ಬೆಳಿಗಿನಿಂದಲೇ ಅಭಿಷೇಕ ಹಾಗೂ ಪೂಜೆ ನೇರವೇರಿತು.
ಈ ವೇಳೆ ಪಪಂ ಅಧ್ಯಕ್ಷ ಜೈಸಿದ್ರಾಮ ಮಾರಿಹಾಳ, ಮಾಜಿ ತಾಪಂ ಅಧ್ಯಕ್ಷ ಬಸವರಾಜ ಸಂಗೋಳ್ಳಿ, ಮಂಜುನಾಥ ದೊಡ್ಡನ್ನವರ, ಕೃಷ್ಣಾ ಬಾಳೆಕುಂದರಗಿ, ರಮೇಶ ಮೊಖಾಶಿ, ಗ್ರಾಮ ಹಿರಿಯರು, ಯವಕರು, ಮಹಿಳೆಯರು, ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.






















