
ಚನ್ನಮ್ಮನ ಕಿತ್ತೂರು,ಏ3: 1008 ಶ್ರೀ ಮಹಾವೀರ ತೀರ್ಥಂಕರು ಮನುಷ್ಯರ ಅಪರಿಮಿತ ಆಸೆಗಳನ್ನು ಕೊನೆಗೊಳಿಸಲು ದುರಾಸೆ ಮತ್ತು ಲೌಕಿಕ ಆಸ್ತಿಯನ್ನು ತೊಡೆದು ಹಾಕಬೇಕು ಎನ್ನುವುದನ್ನು ಜಗತ್ತಿಗೆ ಸಾರಿದರು. ಎಂದು ಶಾಸಕ ಬಾಬಾಸಾಹೇಬ ಪಾಟೀಲ ಅಭಿಪ್ರಾಯಪಟ್ಟರು.
ತಾಲೂಕಿನ ಕಲಂಭಾವಿ ಗ್ರಾಮದ 1008 ಆದಿನಾಥ ದಿಗಂಬರ ಜೈನ ಮಂದಿರದಲ್ಲಿ ಸಡಗರ ಸಂಬ್ರಮ ಅದ್ದೂರಿಯಿಂದ ಶ್ರೀ ಮಹಾವೀರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಮಾತನಾಡಿ ಜೈನ ಧರ್ಮದ ಪ್ರಚಾರಕ್ಕಾಗಿ ದೇಶ ಪರ್ಯಟನೆ ಮಾಡಿದ್ದರು. ಇವರು ಅಹಿಂಸೆ, ಸತ್ಯ, ಆಸ್ತೇಯ, ಬ್ರಹ್ಮಚರ್ಯ ಹಾಗೂ ಅಪರಿಗ್ರಹ ತತ್ವವನ್ನು ಪ್ರತಿಪಾದಿಸಿದ್ದು, ಉತ್ತಮ ಸಮಾಜಕ್ಕೆ ಸ್ಫೂರ್ತಿಯಾಗಿದೆ ಎಂದರು.
ನಂತರ ಜೈನ ಶ್ರಾವಕ-ಶ್ರಾವಕೀಯರು ವಾದ್ಯ ಮೇಳದೊಂದಿಗೆ ಆರತಿ, ಕುಂಭ, ಧ್ವಜ ಹಿಡಿದು ಪಲ್ಲಕ್ಕಿಯಲ್ಲಿ ಮಹಾವೀರ ತೀರ್ಥಂಕರ ಮೂರ್ತೀ ಕೂಡಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಉತ್ಸವ ಜರುಗಿತು.
ಕಾರ್ಯಕ್ರಮದಲ್ಲಿ ಪಾರೀಸ್ ಉಪಾಸಿ, ಗಂಗಪ್ಪ ಬೆಟಗೇರಿ, ಸೂರಪ್ಪ ಅಕೊಳ್ಳಿ, ಅಡಿವೆಪ್ಪ ಕುರಕುರಿ, ಜೀತೇಂದ್ರ ಬೆಟಗೇರಿ, ವರ್ಧಮಾನ ಅಕ್ಕೋಳ್ಳಿ, ಮಲ್ಲಪ್ಪ ಓಮನ್ನವರ, ಚಂದ್ರಕಾಂತ ಹಂಜಿ, ಸಂಗಪ್ಪ ಬೇಟಗೇರಿ, ಪಾರೀಸ್ ಅಕ್ಕೋಳ್ಳಿ, ಶೋಕ ಬೆಟಗೇರಿ,ವಿಠ್ಠಲ ಬೆಟಗೇರಿ, ಮಲ್ಲಪ್ಪ ಉಪಾಸಿ, ನೇಮು ಕುರಕುರಿ, ಸವಿತಾ ಅಕ್ಕೋಳ್ಳಿ, ಸವಿತಾ ತುಕ್ಕೋಳ್ಕರ, ಮಂಜುಳಾ ಉಪಾಸಿ, ಕಮಲಾ ಅಕ್ಕೋಳಿ, ಶೋಭಾ ಬೆಟಗೇರಿ, ಜ್ಯೋತಿಬಾ ಜೀವೋಜಿ, ಸುನೀತಾ ಓಮನ್ನವರ, ಶ್ರಾವಕ-ಶ್ರಾವಕೀಯರು ಇದ್ದರು.






















