Home ಜಿಲ್ಲೆ ಗುರುಮಠಕಲ್ ಅಡುಗೆ ಅನಿಲಕ್ಕಾಗಿ ಗ್ರಾಹಕರ ಹ?ರಾಣು, ಏಜೆನ್ಸಿ ಸಿಬ್ಬಂದಿ ವಿರುದ್ಧ ಆಕ್ರೋಶ

ಗುರುಮಠಕಲ್ ಅಡುಗೆ ಅನಿಲಕ್ಕಾಗಿ ಗ್ರಾಹಕರ ಹ?ರಾಣು, ಏಜೆನ್ಸಿ ಸಿಬ್ಬಂದಿ ವಿರುದ್ಧ ಆಕ್ರೋಶ

ಗುರುಮಠಕಲ್:ಏ.೨:ಸ್ಥಳೀಯ ಗ್ಯಾಸ್ ಏಜೆನ್ಸಿಯಲ್ಲಿ ಸಿಲಿಂಡರ್ ಪೂರೈಕೆ ಸಂಪೂರ್ಣ ವ್ಯತ್ಯಯವಾಗಿದ್ದು, ಗ್ರಾಹಕರು ಕಳೆದ ೧೫ ದಿನಗಳಿಂದ ಕಚೇರಿಗೆ ಅಲೆದಾಡಿ ಸುಸ್ತಾಗಿದ್ದಾರೆ. ಇಂದು ಬೆಳಿಗ್ಗೆ ಏಜೆನ್ಸಿ ಮುಂದೆ ಜಮಾಯಿಸಿದ ಗ್ರಾಹಕರು ಸಿಬ್ಬಂದಿಯ ಬೇಜವಾಬ್ದಾರಿತನದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

೧೫ ದಿನ ಕಳೆದರೂ ಸಿಗದ ಸಿಲಿಂಡರ್: ಶಿವಕುಮಾರ್ ಕಂಬರ್ ಅಸಮಾಧಾನ
ಗ್ರಾಹಕರಾದ ಶಿವಕುಮಾರ್ ಕಂಬರ್ ಅವರು ಮಾತನಾಡಿ, ಏಜೆನ್ಸಿಯ ಹದಗೆಟ್ಟ ವ್ಯವಸ್ಥೆಯನ್ನು ತರಾಟೆಗೆ ತೆಗೆದುಕೊಂಡರು.

“ನಾನು ಸಿಲಿಂಡರ್ ಬುಕ್ ಮಾಡಿ ಇಂದಿಗೆ ೧೫ ದಿನಗಳಾಗಿವೆ. ಪ್ರತಿ ಬಾರಿ ವಿಚಾರಿಸಲು ಬಂದಾಗಲೂ ‘ಇವತ್ತು ಬರುತ್ತೆ, ನಾಳೆ ಬರುತ್ತೆ’ ಎಂದು ಕೇವಲ ಸುಳ್ಳು ಭರವಸೆಗಳನ್ನು ನೀಡುತ್ತಿದ್ದಾರೆ. ಸಿಲಿಂಡರ್ ಇಲ್ಲದೆ ಮನೆಯಲ್ಲಿ ಅಡುಗೆ ಮಾಡಲು ತುಂಬಾ ತೊಂದರೆಯಾಗುತ್ತಿದೆ. ಸಿಬ್ಬಂದಿಗಳು ಸರಿಯಾದ ಮಾಹಿತಿಯನ್ನೂ ನೀಡುತ್ತಿಲ್ಲ,” ಎಂದು ಅವರು ದೂರಿದರು.

ಗೃಹಿಣಿಯರ ಆಕ್ರೋಶ ಮತ್ತು ಬ್ಲಾಕ್ ಮಾರ್ಕೆಟ್ ದೂರು
ಕೇವಲ ಪಟ್ಟಣದವರಷ್ಟೇ ಅಲ್ಲದೆ, ದೂರದ ರಾಂಪುರ ಗ್ರಾಮದಿಂದ ಬಂದಿದ್ದ ಶ್ರೀದೇವಿಯಂತಹ ಗೃಹಿಣಿಯರು ಕೂಡ ಏಜೆನ್ಸಿಯ ವಿರುದ್ಧ ಕಿಡಿಕಾರಿದ್ದಾರೆ.ಸುಮಾರು ನಮ್ಮ ಗ್ರಾಮದಿಂದ ಹೊಗಲಿಕ್ಕೆ ಮತ್ತು ಬರಲಿಕ್ಕೆ ೫೦ ಕಿ.ಮೀ ದೂರದಿಂದ ಆಟೋ ಬಾಡಿಗೆ ಕಟ್ಟಿ ಬಂದರೂ ಖಾಲಿ ಸಿಲಿಂಡರ್‌ನೊAದಿಗೆ ವಾಪಸ್ ಹೋಗುವ ಪರಿಸ್ಥಿತಿ ಎದುರಾಗಿದೆ. ಹಣದ ಆಸೆಗಾಗಿ ಸಿಲಿಂಡರ್‌ಗಳನ್ನು ಬ್ಲಾಕ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪವನ್ನೂ ಗ್ರಾಹಕರು ಮಾಡಿದ್ದಾರೆ.

ಏಜೆನ್ಸಿ ಮಾಲೀಕರ ಭರವಸೆ
ಈ ಗೊಂದಲದ ನಡುವೆ ಏಜೆನ್ಸಿಯ ಮಾಲೀಕರಾದ ಬಸಪ್ಪ ಮೇಧ ಅವರು ಪ್ರತಿಕ್ರಿಯಿಸಿ, “ಮಧ್ಯಪ್ರಾಚ್ಯದ ಯುದ್ಧದಂತಹ ಜಾಗತಿಕ ವಿದ್ಯಮಾನಗಳಿಂದ ಪೂರೈಕೆಯಲ್ಲಿ ತುಸು ಏರುಪೇರಾಗಿದೆ. ಇನ್ನು ಮುಂದೆ ಎರಡು-ಮೂರು ದಿನಕ್ಕೊಮ್ಮೆ ವಾಹನಗಳು ಬರಲಿವೆ. ಜನರು ಗಾಬರಿ ಪಡುವ ಅಗತ್ಯವಿಲ್ಲ, ಎಲ್ಲರಿಗೂ ಶೀಘ್ರದಲ್ಲೇ ಸಿಲಿಂಡರ್ ವಿತರಿಸಲಾಗುವುದು,” ಎಂದು ಸಮಜಾಯಿಷಿ ನೀಡಿದ್ದಾರೆ.