
ನವಲಗುಂದ,ಏ.೧: ನವಲಗುಂದ ಹಾಗೂ ಅಣ್ಣಿಗೇರಿ ತಾಲ್ಲೂಕು ಪಂಚಾಯಿತಿ ಇಲಾಖೆಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದ ಪಿ ಆರ್ ಬಡೇಖಾನವರ ಅವರು ಜನಪರವಾಗಿ ಮತ್ತು ತಾಳ್ಮೆಯಿಂದ ಕಾರ್ಯನಿರ್ವಹಿಸುವ ಮೂಲಕ ಎಲ್ಲರ ಪ್ರೀತಿ ಪಾತ್ರರಾಗಿದ್ದಾರೆ ಎಂದು ತಹಶೀಲ್ದಾರ ಸುಧೀರ ಸಾಹುಕಾರ ಅಭಿಪ್ರಾಯ ವ್ಯಕ್ತ ಪಡಿಸಿದರು.
ಅವರು ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾ ಪಂ ಇಒ ಪಿ ಆರ್ ಬಡೇಖಾನವರÀ ಸೇವಾನಿವೃತ್ತಿ ಬೀಳ್ಕೊಡುಗೆ ಹಾಗೂ ನೂತನ ಇಒ ರವೀಂದ್ರಗೌಡ ಪಾಟೀಲ ಅವರಿಗೆ ಅಧಿಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಸ್ ಪಿ ಪೂಜಾರ, ಎಸ್ ಎಸ್ ಲಂಗೂಟಿ,ಜಗದೀಶ ಹಡಪದ, ರವೀಂದ್ರಗೌಡ ಪಾಟೀಲ್, ಗುರುನಾಥ ಜೋಗಿನ, ಗಾಯತ್ರಿದೇವಿ ಪಾಟೀಲ, ರಾಧಾ ಕುಲಕರ್ಣಿ, ಎಸ್. ಬಿ. ತೋಟದ, ವೀರನಗೌಡ ಪಾಟೀಲ, ವಿರೇಶ ಗೂಡದೂರಮಠ, ಡಿ.ಎನ್. ಸವದಿ, ಆನಂದ ನಾವಳ್ಳಿ, ಧರ್ಮರಾಜ ಚವ್ಹಾಣ, ಜಿ ಎಂ ಮಲ್ಲಾಪುರ, ವಿಜಯಲಕ್ಷಿ÷್ಮ ಕೊರವರ, ಆನಂದ ಕೆಂಚನ್ನವರ, ಪ್ರದೀಪ ಚಾಲುಕ್ಯ, ಕೆ ಎನ್ ಕುರಬರ, ಎಂ ಎಸ್ ರಾಚನಗೌಡ್ರ ಇತರರು ಉಪಸ್ಥಿತರಿದ್ದರು.






















