
ಲಕ್ಷ್ಮೇಶ್ವರ,ಏ1: ಹಿಂಗಾರಿ ಹಂಗಾಮಿನ ಪ್ರಮುಖ ವಾಣಿಜ್ಯ ಬೆಳೆಯಾದ ಕಡಲೆಯನ್ನು ಬೆಂಬಲ ಬೆಲೆ ಖರೀದಿ ಮುಖಾಂತರ ಮಾರಾಟ ಮಾಡಲು ರೈತರ ಅನುಕೂಲಕ್ಕಾಗಿ ಬೆಂಬಲ ಬೆಲೆ ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದೆ.
ತಾಲೂಕಿನ ಯಳವತ್ತಿ ಅಡರಕಟ್ಟಿ ಮತ್ತು ಲಕ್ಷ್ಮೇಶ್ವರದ ಟಿಎಪಿಸಿಎಂಎಸ್ ಖರೀದಿ ಕೇಂದ್ರಗಳಲ್ಲಿ ರೈತರು ಹೆಸರು ನೋಂದಾಯಿಸಿ ಈಗ ಕಡಲೆ ಉತ್ಪನ್ನವನ್ನು ಮಾರಾಟ ಮಾಡುತ್ತಿದ್ದಾರೆ.
ಮುಕ್ತ ಮಾರುಕಟ್ಟೆಯಲ್ಲಿ ಕಡಲೆ ಬೆಲೆ ಕುಸಿತವಾಗಿದ್ದು ನೋಂದಾಯಿತ ರೈತರು ಖರೀದಿ ಕೇಂದ್ರದಲ್ಲಿ ಮಾರಾಟ ಮಾಡುತ್ತಿದ್ದಾರೆ.
ತಾಲೂಕಿನ ಯಳವತ್ತಿ ಕೇಂದ್ರದಲ್ಲಿ ದಾಖಲೆ ಹೆಸರನ್ನು ನೋಂದಾಯಿಸಿರುವ ರೈತರು ಈಗ ಖರೀದಿ ಕೇಂದ್ರಕ್ಕೆ ಕಡಲೆಯನ್ನು ತಂದು ಮಾರಾಟ ಮಾಡುತ್ತಿದ್ದಾರೆ.
ಮೂಲಗಳಿಂದ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಒಟ್ಟು 791ಕ್ಕೂ ಹೆಚ್ಚು ರೈತರು ಹೆಸರು ನೊಂದಾಯಿಸಿದ್ದು ಅದರಲ್ಲಿ 457 ರೈತರು ಈಗ ಬೆಂಬಲ ಬೆಲೆಯಲ್ಲಿ ಕಡಲೆಯನ್ನು ಮಾರಾಟ ಮಾಡಿದ್ದಾರೆ.
ಒಟ್ಟು 457 ರೈತರಿಂದ 7039.50 ಕ್ವಿಂಟಲ್ ಅಂದರೆ 14095 ಚೀಲಗಳನ್ನು ಖರೀದಿ ಮಾಡಲಾಗಿದೆ.






















