Home ಜಿಲ್ಲೆ ತರಬೇತಿ ಕಾರ್ಯಾಗಾರ

ತರಬೇತಿ ಕಾರ್ಯಾಗಾರ

ನವಲಗುಂದ,ಏ1 : ಸರಕಾರಿ ಶಾಲೆಗಳಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಿ ಮಕ್ಕಳ ಕಲಿಕೆಗೆ ಪೂರಕ ವಾತಾವರಣ ಸೃಷ್ಟಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಎಸ್‍ಡಿಎಂಸಿ ಸದಸ್ಯರು ಕಾಳಜಿ ವಹಿಸಬೇಕಿದೆ ಎಂದು ಪ್ರಗತಿಪರ ರೈತ ಮಂಜುನಾಥ ಕಾಲವಾಡ ಅಭಿಪ್ರಾಯ ವ್ಯಕ್ತ ಪಡಿಸಿದರು.

ಅವರು ತಾಲ್ಲೂಕಿನ ಮೊರಬ ಗ್ರಾಮದ ಪಿ.ಎಂ ಶ್ರೀ ಸರ್ಕಾರಿ ಮಾದರಿ ಕೇಂದ್ರ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಎಸ್ ಡಿ ಎಂ ಸಿ ಸದಸ್ಯರಿಗೆ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಖಾಸಗಿ ಶಾಲೆಗಳಿಗೆ ಪೈಪೆÇೀಟಿ ನೀಡುವಲ್ಲಿ ನಮ್ಮ ಸರ್ಕಾರಿ ಶಾಲೆಗಳೂ ಬಲಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಎಸ್‍ಡಿಎಂಸಿ ಸದಸ್ಯರು ಮುತುವರ್ಜಿಯಿಂದ ಕಾರ್ಯನಿರ್ವಹಿಸುವ ಅಗತ್ಯವಿದೆ. ಜತೆಗೆ ಮಕ್ಕಳ ದಾಖಲಾತಿಯನ್ನು ಹೆಚ್ಚಿಸುವಂತೆ ಸಲಹೆ ನೀಡಿದರು.

ಸಿ.ಆರ್. ಪಿ. ಗಣೇಶ ಹೊಳೆಯಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪ್ರಧಾನಗುರುಮಾತೆ ಎಸ್ ಎಸ್ ಹೂಗಾರ, ವೆಂಕಟೇಶ ಭಜಂತ್ರಿ, ಹೆಚ್ ಬಿ ಗೋಕುಲ, ವಿಶಾಲಾಕ್ಷಿ, ಎಲ್.ಬಿ.ಕಮತ, ಹೆಚ್.ಎಸ್ ಚನ್ನಪ್ಪಗೌಡರ, ಡಿ ಎಚ್ ಖುದ್ದನ್ನವರ, ರಾಚಯ್ಯ ಕೋರಿಮಠ, ಎ ಆರ್ ಮೆಣಸಿನಕಾಯಿ, ಸೇರಿದಂತೆ ಮೊರಬ,ಜಾವೂರ ಹಾಗೂ ಗುಮ್ಮಗೋಳ ಕ್ಲಸ್ಟರ್ ವ್ಯಾಪ್ತಿಯ ಶಾಲೆಗಳ ಎಸ್ ಡಿ ಎಮ್ ಸಿ ಅಧ್ಯಕ್ಷರು, ಸದಸ್ಯರು ಹಾಗೂ ಮುಖ್ಯೋಪಾಧ್ಯಾಯರು, ಶಿಕ್ಷಕರು ಭಾಗವಹಿಸಿದ್ದರು.