Home ಜಿಲ್ಲೆ ಸೇವೆಯಲ್ಲಿ ಶಿವನಿರುವನು :ಶಾಂತಮಯ ಸ್ವಾಮೀಜಿ

ಸೇವೆಯಲ್ಲಿ ಶಿವನಿರುವನು :ಶಾಂತಮಯ ಸ್ವಾಮೀಜಿ

ಸಂಜೆವಾಣಿ ವಾರ್ತೆ
ಕೆಂಭಾವಿ:ಎ.೧:ನಾವು ಮಾಡುವ ಸೇವೆ ಜನರಿಗೆ ಹಿತ ನೀಡಬೇಕು. ನಾವು ಮಾಡುವ ಸೇವೆಯಲ್ಲಿ ಭಗವಂತನನ್ನು ಕಾಣಬೇಕು ಎಂದು ಅಗತೀರ್ಥ ಗ್ರಾಮದ ಪೂಜ್ಯರಾದ ಶ್ರೀ ರೇವಣಸಿದ್ದೇಶ್ವರ ಶಾಂತಮಯ ಸ್ವಾಮೀಜಿಯವರು ನುಡಿದರು.
ಪಟ್ಟಣದ ಶ್ರೀ ಸಿದ್ದೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡ ಸತ್ಸಂಗ ಹಾಗೂ ಶ್ರೀಶೈಲ್ ಪಾದಯಾತ್ರಿ ಭಕ್ತಾಧಿಗಳಿಗೆ ಅನ್ನ ದಾಸೋಹ ಸೇವೆ ಮಾಡಿದಂತಹ ಸೇವಾರ್ಥಿಗಳಿಗೆ ನಮನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು. ಜನ ಸೇವೆಯೆ ಜನಾರ್ಧನ ಸೇವೆ. ನಾವು ಮಾಡುವ ಸೇವೆ ಪರಮಾತ್ಮನಿಗೆ ಮುಟ್ಟುತ್ತದೆ. ಸೇವೆ ಪರಮಾರ್ಥವಾದುದು. ಸೇವೆ ಮಾಡುವದರಲ್ಲೆ ಅನೇಕ ಸೇವಾರ್ಥಿಗಳು ದೇವರ ಸ್ವರೂಪ ಕಾಣುತ್ತಾರೆ. ದಾನ ಮಾಡುವಾಗ ಅಹಂಕಾರವಿರಬಾರದು. ವಿನಯ ಮತ್ತು ಸಂತೋಷದಿAದ ನೀಡುವ ದಾನವೇ ಶ್ರೇಷ್ಠವಾದುದು. ಈಚಿನ ದಿನಗಳಲ್ಲಿ ಸಂಪತ್ತಿನ ಹಿಂದೇಯೆ ಮುಖ ಮಾಡಿರುವ ಮನುಷ್ಯ ದಾನ ಧರ್ಮ ಎಂದರೆ ಸಾಕು ತಲೆಗೆ ಚಾನದಿಂದ ಹೋಡಿದ ಹಾಗೆ ತನ್ನ ವರ್ತನೆ ತೊರುವ ಜನರ ನಡುವೆ ಸಾವಿರಾರು ಶ್ರೀಶೈಲ ಪಾದಯಾತ್ರಿಗಳಿಗೆ ದಿನ ನಿತ್ಯ ಅನ್ನ ದಾಸೋಹ, ಸ್ನಾನಕ್ಕೆ ಬಿಸಿ ನೀರು, ಪ್ರತ್ಯೇಕ ಸ್ನಾನದ ವ್ಯವಸ್ಥೆ, ಸೊಳ್ಳೆ ಪರದೆ, ಏರ್ ಕೂಲರ್ ನಂತಹ ವ್ಯವಸ್ಥೆ ಮಾಡಿರುವುದು ನಿಜವಾಗಲೂ ಅದ್ಬುತವೆ ಸರಿ ಎಂದು ಹೇಳಿದರು.
ಪೂಜ್ಯ ರಾಜಶೇಖರಯ್ಯ ಹಿರೇಮಠ ಪ್ರಾಸ್ತಾವಿಕ ಮಾತನಾಡಿ, ಪಟ್ಟಣದ ಮೂರು ತಂಡಗಳು ಪಾದಯಾತ್ರಿಗಳಿಗೆ ಅನ್ನ ದಾಸೋಹದಂತಹ ಶ್ರೇಷ್ಠ ಕಾರ್ಯ ಮಾಡಿದ್ದಾರೆ. ಪಟ್ಟಣದ ಸಂಜೀವ ನಗರದಲ್ಲಿ ಸುಮಾರು ೨೬ ವರ್ಷಗಳಿಂದ ಅನ್ನ ದಾಸೋಹ ಮಾಡುತ್ತಾ ಬರಲಾಗುತ್ತಿದೆ. ಶ್ರೀಶೈಲ್ ಭ್ರಮರಾಂಬೆ ಮಲ್ಲಿಕಾರ್ಜುನ ಸೇವಾ ಸಮಿತಿಯವರು ೪ ವರ್ಷಗಳಿಂದ ದೇವದುರ್ಗ ತಾಲೂಕಿನ ರಾಮದುರ್ಗಾ ಕ್ರಾಸ್‌ನಲ್ಲಿ ಸತತವಾಗಿ ಒಂದು ವಾರಗಳ ಅನ್ನ ದಾಸೋಹ ಮಾಡಿದ್ದಾರೆ. ಅದೇ ರೀತಿಯಾಗಿ ಶ್ರೀ ಸಿದ್ದೇಶ್ವರ ಸೇವಾ ಸಮಿತಿ ಸೇವಾರ್ಥಿಗಳು ೯ ವರ್ಷದಿಂದ ಶ್ರೀಶೈಲ್‌ದ ಪಾತಾಳ ಗಂಗೆಯ ಹತ್ತಿರ ಸುಮಾರು ಎಂಟು ದಿನಗಳ ಕಾಲ ಅನ್ನ ದಾಸೋಹ ಸೇವೆ ಮಾಡಿದ್ದಾರೆ. ಸೇವಾರ್ಥಿಗಳ ನಿಸ್ವಾರ್ಥ ಸೇವೆ ದೇವರ ಪಾದಕ್ಕೆ ಸಮರ್ಪಿತವಾಗುತ್ತದೆ ಎಂದು ತಿಳಿಸಿದರು.
ಮುದನೂರಿನ ಶ್ರೀ ಕಂಠಿ ಕೋರಿಸಿದ್ದೇಶ್ವರ ಶಾಖಾಮಠದ ಷ.ಬ್ರ.ಸಿದ್ದ ಚೆನ್ನಮಲ್ಲಿಕಾರ್ಜುನ ಅವರ ಕಂಠದಿಮದ ಮೂಡಿಬಂದ ಶ್ರೀ ಕೃಷ್ಣನ ಹಾಡು ನೆರೆದಿದ್ದ ಭಕ್ತರನ್ನು ಮಂತ್ರಮುಗ್ಧರನ್ನಾಗಿಸಿತು. ಆರ್ಟ್ ಆಫ್ ಲಿವಿಂಗ್‌ನ ಯಾದಗಿರಿಯ ಪ್ರಮುಖರಾದ ಎಸ್.ಎಚ್.ರೆಡ್ಡಿಯವರು ಮಾತನಾಡಿದರು. ಆರ್ಟ್ ಆಫ್ ಲಿವಿಂಗ್‌ನ ಜಿಲ್ಲಾ ಶಿಕ್ಷಕಿ ಶಿಲ್ಪಾ ಅವಂಟಿ, ಸಿದ್ದಮ್ಮ, ಶೋಭಾ ಹಿರೇಮಠ ಅವರಿಂದ ಜರುಗಿದ ಭಜನಾ ಕಾರ್ಯಕ್ರಮ ಎಲ್ಲರನ್ನು ಭಕ್ತಿಯಲ್ಲಿ ತಲ್ಲೀನವಾಗುವಂತೆ ಮಾಡಿತು.
ಹಿರೇಮಠದ ಷ.ಬ್ರ.ಚನ್ನಬಸವ ಶಿವಾಚಾರ್ಯರು ದಿವ್ಯ ಸಾನಿಧ್ಯ ವಹಿಸಿದ್ದರು. ವೇದಮೂರ್ತಿ ಚೆನ್ನಯ್ಯ ಚಿಕ್ಕಮಠ, ಬಸವರಾಜ ಬೂದಿಹಾಳ ವೇದಿಕೆ ಮೇಲಿದ್ದರು. ಖ್ಯಾತ ಗಾಯಕ ಬಸವರಾಜ ಬಂಟನೂರ, ಯಮನೇಶ ಯಾಳಗಿ ಸಂಗೀತ ಸೇವೆ ಒದಗಿಸಿದರು. ಪ್ರಮುಖರಾದ ಶಂಕರಲಿAಗ ಸೊನ್ನದ, ಮಹಿಪಾಲರೆಡ್ಡಿ ಡಿಗ್ಗಾವಿ, ಪ್ರಭು ಅಂಗಡಿ, ವಿಕಾಸ ಸೊನ್ನದ, ರಾಘವೇಂದ್ರ, ರಮೇಶ ಸೊನ್ನದ, ಬಸವರಾಜ ಬೈಚಬಾಳ, ಸಂಗಣ್ಣ ತುಂಬಗಿ, ಸಿದ್ದು ಹುಣಸಗಿ, ಶಿವಾನಂದ ಆಲಗೂರ, ಶರಣಪ್ಪ ಯಾಳಗಿ, ಶರಣಗೌಡ ಪಾಟೀಲ, ಶಿವು ಮಾಲಿಪಾಟೀಲ, ಕೃಷ್ಣರೆಡ್ಡಿ, ರಮೇಶ ಸಾಸಾಬಾಳ, ಪ್ರಕಾಶ, ಮಧು ಬಂದೆ, ಶೋಭಾ ಮಾಲಗತ್ತಿ ಇದ್ದರು.
ಡಿ.ಸಿ.ಪಾಟೀಲ ನಿರೂಪಿಸಿದರು. ಯಲ್ಲಾಲಿಂಗ ಸ್ವಾಗತಿಸಿದರು. ಪ್ರಕಾಶ ಬೈಚಬಾಳ ವಂದಿಸಿದರು.