Home ಜಿಲ್ಲೆ ತ್ರಿಭಾಷಾ ಸೂತ್ರ ಮುಂದುವರಿಸಲು ಆಗ್ರಹ: ಶಿಕ್ಷಕರಿಂದ ಬೃಹತ್ ಮೆರವಣಿಗೆ

ತ್ರಿಭಾಷಾ ಸೂತ್ರ ಮುಂದುವರಿಸಲು ಆಗ್ರಹ: ಶಿಕ್ಷಕರಿಂದ ಬೃಹತ್ ಮೆರವಣಿಗೆ

ಹುಬ್ಬಳ್ಳಿ,ಮಾ31: ರಾಜ್ಯದಲ್ಲಿ ತ್ರಿಭಾಷಾ ಸೂತ್ರ ಮುಂದುವರಿಸಲು ರಾಜ್ಯ ಸರ್ಕಾರದ ಮೇಲೆ ಒತ್ತಡ ತರಬೇಕೆಂದು ನೂರಾರು ಹಿಂದಿ ಶಿಕ್ಷಕರು ವಿಪ ಸಭಾಪತಿ ಬಸವರಾಜ ಹೊರಟ್ಟಿ ಅವರ ನಿವಾಸಕ್ಕೆ ತೆರಳಿ ಮನವಿ ಮಾಡಿದರು.


ಇಲ್ಲಿಯ ಪಿಂಟೋ ರಸ್ತೆಯ ಅವರ ನಿವಾಸಕ್ಕೆ ಭೇಟಿ ನೀಡಿದ ನೂರಾರು ಹಿಂದಿ ಶಿಕ್ಷಕರು, ರಾಜ್ಯ ಸರ್ಕಾರದ ಹಿಂದಿ ವಿಷಯದ ಗ್ರೇಡಿಂಗ್ ನೀತಿ ಖಂಡನಾರ್ಹ. ಇದರಿಂದ 15 ಸಾವಿರಕ್ಕೂ ಹೆಚ್ಚು ಹಿಂದಿ ಶಿಕ್ಷಕರು ಮತ್ತು ಅವರ ಕುಟುಂಬ ಆತಂತ್ರವಾಗಿವೆ. ಅಲ್ಲದೆ, ರಾಷ್ಟ್ರೀಯ ಏಕತೆಯ ಹಿತದೃಷ್ಟಿಯಿಂದ 1961ರಲ್ಲಿ ಜಾರಿಯಾದ ಬಹು ಭಾಷಾ ಕಲಿಕೆಗೆ ಪೆಟ್ಟು ಬಿದ್ದಿದೆ. ಆದ್ದರಿಂದ ಈ ಕೂಡಲೇ ಗ್ರೇಡಿಂಗ್ ಪದ್ಧತಿ ಕೈಬಿಟ್ಟು ಈ ಹಿಂದೆ ಇದ್ದಂತೆ ಹಿಂದಿ ವಿಷಯಕ್ಕೆ ಅಂಕ ನೀಡುವ ಪದ್ಧತಿ ಜಾರಿಗೊಳಿಸಿ ಯಥಾವತ್ತಾಗಿ ತ್ರಿಭಾಷಾ ಸೂತ್ರ ಮುಂದುವರಿಸಬೇಕೆಂದು ಒತ್ತಾಯಿಸಿದರು.