
ಕುಂದಗೋಳ ಮಾ.31: ವಿದ್ಯಾರ್ಥಿಗಳಿಗೆ ಸರ್ಕಾರ, ಸಂಘ ಸಂಸ್ಥೆಗಳು ಅನೇಕ ರೀತಿಯಲ್ಲಿ ಜ್ಞಾನಾರ್ಜನೆಗೆ ನೆರವು ನೀಡುತ್ತಿದ್ದು, ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಮಾಜಿ ಶಾಸಕ ಎಂ.ಎಸ್. ಅಕ್ಕಿ ಹೇಳಿದರು.
ಕೆನರಾ ರೊಬೆಕೊ ಸ್ಕಿಮ್ ನಲ್ಲಿ 9 ಮತ್ತು 10ನೇ ತರಗತಿಯಲ್ಲಿ ಅತೀ ಹೆಚ್ಚು ಅಂಕ ಪಡೆದ 90 ವಿದ್ಯಾರ್ಥಿಗಳಿಗೆ ಕುಂದಗೋಳ ತಾಲೂಕಿನ ಕಳಸ ಗ್ರಾಮದ ನ್ಯೂ ಹೈಸ್ಕೂಲ್ ಆವರಣದಲ್ಲಿ ಅವರು ಸೈಕಲ್ ವಿತರಿಸಿ ಮಾತನಾಡಿದರು.
ಕೆನರಾ ಬ್ಯಾಂಕಿನ ರೀಜನಲ್ ಮ್ಯಾನೇಜರ್ ಸದಾನಂದ ಪ್ಯಾಟಿ ಮಾತನಾಡಿ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅನುಕೂಲಕ್ಕೆ ಸೈಕಲ್ ವಿತರಣೆ ಮಾಡಲಾಗಿದೆ ಎಂದು ಹೇಳಿದರು.
ಮು.ಶಿ ಎಂ. ವಿ. ಮೆಣಸಿನಕಾಯಿ, ನೀಲಪ್ಪ ಗದ್ದಿ, ಅಜ್ಜಪ್ಪ ಹೂರಕೇರಿ, ಲಿಂಗರಾಜ ಬೆಲ್ಲದ, ಚಂದ್ರಶೇಖರ ಯಾದವಾಡ, ಹಿರಿಯ ನ್ಯಾಯವಾಡಿ ಆರ್.ಎಂ.ಕಮತದ, ಎಚ್.ಸಿ. ಕಲ್ಲಣ್ಣವರ ಇತರರು ಇದ್ದರು.






















