
ಸುರಪುರ :ಮಾ.೩೦: ನಗರದ ಸರ್ಕಾರಿ ಕನ್ಯಾ ಮಾದರಿಯ ಪ್ರಾಥಮಿಕ ಶಾಲೆಯ (ದರ್ಬಾರ್) ೧೯೮೨-೮೩ ಸಾಲಿನ ಏಳನೇ ತರಗತಿ ವಿದ್ಯಾರ್ಥಿಗಳಿಂದ `ಹಳೆಬೇರು ಹೊಸಚಿಗುರು’ ಮೂರನೇ ವಾರ್ಷಿಕೋತ್ಸವ ಶನಿವಾರ ನಗರ ಹೊರವಲಯದ ಅದಿತಿ ಹೋಟೆಲ್ ಸಭಾಂಗಣದಲ್ಲಿ ನಡೆಯಿತು.
ಕರ್ನಾಟಕವಷ್ಟೇ ಅಲ್ಲದೇ ಇತರೆ ರಾಜ್ಯಗಳಲ್ಲಿ ನೆಲೆಗೊಂಡಿರುವ ೩೫ಕ್ಕೂ ಹೆಚ್ಚು ಹಳೆ ವಿದ್ಯಾರ್ಥಿಗಳು ಸಡಗರ-ಸಂಭ್ರಮದಿAದ ಪಾಲ್ಗೊಂಡರು.
ಮೊದಲಿಗೆ ಎಲ್ಲ ವಿದ್ಯಾರ್ಥಿಗಳು ಸುರಪುರದ ಹೊರವಲಯದಲ್ಲಿರುವ ಪುರಾತನ ಕಾಲದ ಚೌಕಿ ಬಯಲು ಹನುಮಾನ ದೇವಸ್ಥಾನ, ಕೊಟ್ಟೂರೇಶ್ವರ ದೇವಸ್ಥಾನ, ವೆಂಕಟಾಪುರ ಬಸವಣ್ಣ ದೇವಸ್ಥಾನ, ಶಿಬರಬಂಡಿಯಲ್ಲಿರುವ ಶ್ರೀ ರಾಮಬಾಣ ದರ್ಶನ ಪಡೆದುಕೊಂಡರು. ನಂತರ ಹೋಟೆಲ್ ಸಭಾಂಗಣದಲ್ಲಿ ದಿನವಿಡೀ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಶ್ರೀಮತಿ ಕುಸುಮಾ ಪ್ರದೀಪ ದೇಸಾಯಿ, ಶ್ರೀಮತಿ ಪುಷ್ಪಾ ಹೂಗಾರ, ಶ್ರೀಮತಿ ಕವಿತಾ ನಾಗರಾಜ ಕುಲಕರ್ಣಿ, ಶ್ರೀಮತಿ ಲೀಲಾವತಿ ಸುಭಾಷ ಕುಲಕರ್ಣಿ ಪ್ರಾರ್ಥನೆಗೈದರು. ಬಳಿಕ ಅಗಲಿದ ಶಿಕ್ಷಕರು ಮತ್ತು ಗೆಳೆಯ-ಗೆಳತಿಯರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ಮಾಡಲಾಯಿತು.
ಪ್ರಶಸ್ತಿ ಪ್ರದಾನ, ಗಾಯನ ಸ್ಪರ್ಧೆ, ವಿವಿಧ ಬಗೆಯ ಆಟ, ಹುಟ್ಟುಹಬ್ಬ ಆಚರಣೆ ನಡೆದವು. ಹಳೆ ವಿದ್ಯಾರ್ಥಿಗಳು ತಮ್ಮ ಶಾಲಾ ದಿನಗಳನ್ನು ನೆನಪಿಸಿಕೊಂಡರು. ತಮಗೆ ಕಲಿಸಿದ ಶಿಕ್ಷಕರನ್ನು ಸ್ಮರಿಸಿಕೊಂಡರು.
ದರ್ಬಾರ್ ಶಾಲೆಯಲ್ಲಿ ಕಲಿಯುತ್ತಿದ್ದಾಗ ತಮ್ಮನ್ನು ಶಿಕ್ಷಕರು ಪಿಕ್ನಿಕ್ಗೆ ಕೊಂಡೊಯ್ಯುತ್ತಿದ್ದ ಸ್ಥಳಗಳಿಗೇ ಮತ್ತೆ ಭೇಟಿ ನೀಡಿದ್ದು ಹಳೆ ವಿದ್ಯಾರ್ಥಿಗಳಲ್ಲಿ ಸಂತಸವನ್ನುoಟು ಮಾಡಿತು.
ಹಳೆ ವಿದ್ಯಾರ್ಥಿಗಳಾದ ಗಿರಿಜಾ, ಕುಸುಮಾ ದೇಸಾಯಿ, ಕವಿತಾ, ಪುಷ್ಪಾ, ಲೀಲಾವತಿ, ಶಾಕಾಂಬರಿ, ಸುರೇಖಾ, ಸಂಗೀತಾ, ಸರೋಜಾ, ಸುಧಾ, ಮಮತಾ ಝಾಂಗಡ್, ಜಯಶ್ರೀ, ಸುನಂದಾ, ತಿಪ್ಪಮ್ಮಾ, ವಿಜಯಲಕ್ಷ್ಮೀ, ಚೌವ್ವ ಮಹಾಲಕ್ಷ್ಮೀ, ರತ್ನಾ, ಗೌರಿ, ವೈಶಾಲಿ, ಉಮೇಶ, ನಿಟಲಾಕ್ಷ, ಪಂಪಣ್ಣ, ಗಂಗಾಧರ್, ಪ್ರಹ್ಲಾದ, ಸುರೇಶ, ಶ್ರೀಧರ, ಕೃಷ್ಣ, ಮುರಳಿಧರ ಜಿ. ಕರಲಗಿಕರ್, ಬ್ರಹ್ಮರ್, ಗಂಗಾ, ದತ್ತಾಶ್ರೀ, ಬಸವರಾಜ, ಮಹಾಂತೇಶ್, ಮಹೇಶ್, ವೆಂಕಟೇಶ, ಹರ್ಷ ಪಾಲ್ಗೊಂಡಿದ್ದರು.






















