
ಗುರುಮಠಕಲ್:ಮಾ.೩೦: ತಾಲೂಕಿನ ಪುಟಪಾಕ ಗ್ರಾಮದಲ್ಲಿ ನೆಲೆಸಿರುವ ಪ್ರಸಿದ್ಧ ಸೂಫಿ ಸಂತ ಹಜರತ್ ಜಿಂದಾ ಶಾ ಮದರ್ ಅವರ ವಾರ್ಷಿಕ ಉರ್ಸ್ ಮತ್ತು ಸಂದಲ್ ಶರೀಫ್ ಕಾರ್ಯಕ್ರಮವು ಅತ್ಯಂತ ಸಡಗರ ಸಂಭ್ರಮದಿAದ ಜರುಗಲಿದೆ ಎಂದು ದರ್ಗಾದ ಮುತವಲ್ಲಿ ಛೋಟು ಮಿಯಾನ ಅವರು ತಿಳಿಸಿದ್ದಾರೆ.
ಏಪ್ರಿಲ್ ೨, ೨೦೨೬: ಪವಿತ್ರ ಸಂದಲ್ ಶರೀಫ್ ಮೆರವಣಿಗೆ.ಏಪ್ರಿಲ್ ೩, ೨೦೨೬: ವಾರ್ಷಿಕ ಉರ್ಸ್ ಮುಬಾರಕ್ ಆಚರಣೆ
ಈ ಶುಭ ಸಂದರ್ಭದಲ್ಲಿ ಎಲ್ಲಾ ಭಕ್ತಾದಿಗಳು ಮತ್ತು ಅಧ್ಯಾತ್ಮ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದರ್ಶನ ಪಡೆದು ಪುನೀತರಾಗಬೇಕೆಂದು ಮುತವಲ್ಲಿಗಳು ವಿನಂತಿಸಿದ್ದಾರೆ. ಈ ಸಂದರ್ಭದಲ್ಲಿ ಅಬ್ದುಲ್ ಖಾದರ್ ಮತ್ತು ಹಫೀಜ್ ಸಾಹೇಬ್ ಅವರು ಉಪಸ್ಥಿತರಿದ್ದು, ಕಾರ್ಯಕ್ರಮದ ಯಶಸ್ಸಿಗಾಗಿ ಭರದ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.






















