
ವಿಜಯಪುರ :ಮಾ.೨೮: ಜಿಲ್ಲೆಯ ಖ್ಯಾತ ಹಿರಿಯ ನ್ಯಾಯವಾದಿ.ನಿವೃತ ಡಿಸಿ ಸಿ ಬ್ಯಾಂಕ್ ವ್ಯಸ್ಥಾಪಕರಾದ ಗವಿಸಿದ್ದಪ್ಪ.ವಿ.ಕೋರಿ ಹಾಗೂ ಅವರ ಧರ್ಮ ಪತ್ನಿ ಶ್ರೀಮತಿ ಅನಸೂಯಾ.ಗ.ಕೋರಿ ಅವರಿಗೆ ಬೆಂಗಳೂರಿನ ಶ್ರೀ ಸರ್ವೇಜನ ಆರ್ಟ್ ಮತ್ತು ಕಲ್ಚರಲ್ ಟ್ರಸ್ಟ್ (ರಿ) ಬೆಂಗಳೂರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ವಿಜಯಪುರ ಕಂದಗಲ್ ಹಣಮಂತರಾಯ ರಂಗಮAದಿರದಲ್ಲಿ ಜರುಗಿದ ಸಾಂಸ್ಕೃತಿಕ ಜನಪದ ವೈಭವ ಮತ್ತು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ಅದ್ದೂರಿ ವೇದಿಕೆಯಲ್ಲಿ ಖ್ಯಾತ ಹಿರಿಯ ನ್ಯಾಯವಾದಿ. ಕೊಪ್ಪಳ ಜಿಲ್ಲಾ ನಿವೃತ
ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಗವಿಸಿದ್ದಪ್ಪ. ವಿ.ಕೋರಿ ಹಾಗೂ ಅವರ ಧರ್ಮ ಪತ್ನಿ ಶ್ರೀಮತಿ ಅನುಸೂಯಾ.ಗ.ಕೋರಿ ಅವರನ್ನು ಸಾಮಜಿಕ.ಸಹಕಾರಿ.
ಧಾರ್ಮಿಕ.ನ್ಯಾಯಾಂಗ ಕ್ಷೇತ್ರದ ಅಪಾರ ಸೇವೆ ಪರಿಗಣಿಸಿ ದಂಪತಿಗಳನ್ನು “ಕರ್ನಾಟಕ ಭೂಷಣ”
ರಾಷ್ಟ್ರೀಯ ಪ್ರಶಸ್ತಿಯನ್ನು.ವಿಶ್ವಗುರು ಶ್ರೀ ಬಸವಣ್ಣ ಹಾಗೂ ವೀರ ರಾಣಿ ಕಿತ್ತೂರು ಚೆನ್ನಮ್ಮಳ ಸ್ಮರಣಿಕೆ.ಪ್ರಶಸ್ತಿ ಪತ್ರ. ಶಾಲು ಹೊದಿಸಿ ಫಲಪುಷ್ಪ ವಿತರಿಸಿ ಗೌರವಿಸಲಾಯಿತು.
ಈ ಸಂಧರ್ಭದಲ್ಲಿ ಶ್ರೀ ಸರ್ವೇಜನ ಆರ್ಟ್ ಮತ್ತು ಕಲ್ಚರಲ್ ಟ್ರಸ್ಟ್ ನಾ ಅಧ್ಯಕ್ಷೆ ಲಕ್ಷ್ಮಿತಾ ಗಂಗಾವತಿ.ಯುವ ಧುರೀಣ ರಾಜು ಕಂಕಣವಾಡಿ.ನ್ಯಾಯವಾದಿ ದಾನೇಶ್ ಅವಟಿ ಮುಂತಾದವರು ಉಪಸ್ಥಿತರಿದ್ದು ಪ್ರಶಸ್ತಿ ಪುರಸ್ಕೃತ ದಂಪತಿಗಳನ್ನು ಅಭಿನಂದಿಸಿದ್ದಾರೆ.























