
ಕೆಂಭಾವಿ:ಮಾ.27:ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಯೋಗ, ಪ್ರಾಣಾಯಾಮ, ಸುದರ್ಶನ ಕ್ರಿಯಾ ಮತ್ತು ಧ್ಯಾನದ ಮೂಲಕ ಮನಸ್ಸಿನ ಶಾಂತಿ, ಒತ್ತಡ ಮುಕ್ತ ಜೀವನ ಮತ್ತು ಆಂತರಿಕ ಸಂತೋಷವನ್ನು ಅನುಭವಿಸಲು ಕಲಿಸುತ್ತದೆ ಆರ್ಟ್ ಆಫ್ ಲಿವಿಂಗ್ ಯಾದಗಿರಿ ಜಿಲ್ಲೆಯ ಸಂಯೋಜಕರಾದ ಎಸ್.ಎಚ್.ರೆಡ್ಡಿ ಹೇಳಿದರು.
ಪಟ್ಟಣದ ಶ್ರೀ ಹೇಮರೆಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದಲ್ಲಿ ಗುರುವಾರ ಆರ್ಟ್ ಆಫ್ ಲೀವಿಂಗ್ ವತಿಯಿಂದ ಹಮ್ಮಿಕೊಂಡಿದ್ದ ಸಂತೋಷದ ಅನುಭೂತಿ ಮೂರನೆ ಬ್ಯಾಚ್‍ನ (ಹ್ಯಾಪಿನೆಸ್ ಪೆÇ್ರೀಗ್ರಾಂ) ಕಾರ್ಯಕ್ರಮದ ಸಮಾರೋಪದಲ್ಲಿ ಮಾತನಾಡಿದರು. ಶ್ರೀ ರವಿಶಂಕರ್ ಜೀ ಅವರಿಂದ ಸ್ಥಾಪಿತವಾದ ಈ ಸಂಸ್ಥೆಯು ‘ಹ್ಯಾಪಿನೆಸ್ ಪೆÇ್ರೀಗ್ರಾಂ’ ಮೂಲಕ ದೈನಂದಿನ ಜೀವನದಲ್ಲಿ ಕೌಶಲ್ಯಪೂರ್ಣವಾಗಿ ಮತ್ತು ಸಂತೋಷದಿಂದ ಬದುಕುವ ಮಾರ್ಗಗಳನ್ನು ಒದಗಿಸುತ್ತದೆ ಎಂದು ಹೇಳಿದರು.
ನೇತೃತ್ವ ವಹಿಸಿ ಮಾತನಾಡಿದ ಕವಿತಾದೇವಿ ವಸಂತ, ಒತ್ತಡದ ಇಂದಿನ ಬದುಕಿನಲ್ಲಿ ನಮ್ಮ ಶರೀರದ ಸ್ವಾಸ್ಥ??ಕ್ಕಾಗಿ ಸಮಯವನ್ನು ಮೀಸಲಿಡಬೇಕು. ಶ್ರೀ ರವಿಶಂಕರ ಗುರುಜಿ ಅವರು ಕಲಿಸಿಕೊಟ್ಟ ಸುದರ್ಶನ ಕ್ರಿಯೆಯನ್ನು ದಿನಾಲೂ ಮಾಡುವದರಿಂದ ದೇಹದಲ್ಲಿ ಚೈತನ್ಯ ಶಕ್ತಿ ವೃದ್ಧಿಸುತ್ತದೆ. ಗುರುಜಿಯವರ ಕೃಪೆಯಿಂದ ಕೆಂಭಾವಿಯಲ್ಲಿ ಸಂತೋಷ ಅನೂಭೂತಿ ಕಾರ್ಯಕ್ರಮಗಳು ಯಶಸ್ವಿಯಾಗಿ ಜರುಗುತ್ತಿವೆ. ಪ್ರತಿಯೊಬ್ಬರು ಯೋಗ, ಧ್ಯಾನದ ಈ ಶಿಬಿರದಲ್ಲಿ ಭಾಗವಹಿಸಿ ಗುರುವಿನ ಕೃಪೆಗೆ ಪಾತ್ರರಾಗಬೇಕು ಎಂದು ತಿಳಿಸಿದರು.
ಯೋಗಾರ್ಥಿಗಳಿಗೆ ಜಿಲ್ಲಾ ಶಿಕ್ಷಕಿ ಶಿಲ್ಪಾ ಅವಂಟಿ ವಿಶೇಷ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಮೋಹನರೆಡ್ಡಿ ಡಿಗ್ಗಾವಿ, ರಮೇಶ ಸೊನ್ನದ, ಜಯಶ್ರೀ ಹಿರೇಮಠ, ನಾಗೇಶ್ವರರಾವ, ನವೀನ, ಶರಣಗೌಡ ಪಾಟೀಲ, ಡಿ.ಸಿ.ಪಾಟೀಲ, ರಾಘವೇಂದ್ರ, ಶ್ರೀನಿವಾಸ.ಸಿ, ಆಂಜನೇಯ, ರೇವಣಸಿದ್ದಯ್ಯ, ದೇವು ಯಾಳಗಿ, ಸತೀಶ, ಪ್ರಭು ಅಂಗಡಿ, ಶಿವರಾಜ ಬೂದುರ, ಶಂಕರಗೌಡ ಶಿವನಂದಿ, ರಾಮಕೃಷ್ಣ ಸೇರಿದಂತೆ ಇತರರಿದ್ದರು.
ಸಂತೋಷದ ಅನುಭೂತಿಯ ಪ್ರಮುಖ ಅಂಶಗಳು:
ಸುದರ್ಶನ ಕ್ರಿಯಾ: ಉಸಿರಾಟದ ತಂತ್ರದ ಮೂಲಕ ಮನಸ್ಸು ಮತ್ತು ದೇಹದ ಒತ್ತಡವನ್ನು ಹೋಗಲಾಡಿಸಿ, ಆಳವಾದ ವಿಶ್ರಾಂತಿ ಮತ್ತು ಸಂತೋಷವನ್ನು ತರುತ್ತದೆ.
ಯೋಗ ಮತ್ತು ಧ್ಯಾನ: ಮನಸ್ಸನ್ನು ಶಾಂತಗೊಳಿಸಿ, ಆಂತರಿಕ ಸಮತೋಲನವನ್ನು ಹೆಚ್ಚಿಸುತ್ತದೆ, ಇದು ಅಂತಿಮವಾಗಿ ಆನಂದದ ಅನುಭವಕ್ಕೆ ಕಾರಣವಾಗುತ್ತದೆ.
ಬದುಕಿನ ಸೂತ್ರಗಳು: ಪ್ರಸ್ತುತ ಕ್ಷಣದಲ್ಲಿ ಬದುಕುವುದು, ಇತರರ ತಪ್ಪುಗಳನ್ನು ಕ್ಷಮಿಸುವುದು ಮತ್ತು ಮನಸ್ಸಿನ ಸಮತೋಲನವನ್ನು ಕಾಪಾಡಿಕೊಳ್ಳುವುದು ಮುಂತಾದ ಜ್ಞಾನದ ಮಾತುಗಳು ಸಂತೋಷಕ್ಕೆ ಕಾರಣವಾಗುತ್ತವೆ.
ಸೇವಾವೃತ್ತಿ: ಇತರರಿಗೆ ಸಹಾಯ ಮಾಡುವುದು ಮತ್ತು ಸ್ವಯಂಸೇವಕರಾಗಿ ಕಾರ್ಯನಿರ್ವಹಿಸುವುದು ಮನಸ್ಸಿಗೆ ಅಪಾರ ತೃಪ್ತಿ ಮತ್ತು ಆನಂದವನ್ನು ನೀಡುತ್ತದೆ.
ಆರ್ಟ್ ಆಫ್ ಲಿವಿಂಗ್ ಶಿಬಿರಗಳಲ್ಲಿ ಭಾಗವಹಿಸುವುದರಿಂದ, ಜೀವನವನ್ನು ಒಂದು ಆಟದಂತೆ ಭಾವಿಸಿ ಸಂತೋಷವಾಗಿ ಬದುಕುವ ಕಲೆ ಕರಗತವಾಗುತ್ತದೆ.






















