
ಸುರಪುರ:ಮಾ.೧೭: ಕೃಷ್ಣಾ ಎಡದಂಡೆ ಕಾಲುಗಳಿಗೆ ಏ.೧೫ರ ವರೆಗೆ ನೀರು ಹರಿಸಿ ಇಲ್ಲವಾದರೆ ನಮಗೆ ಒಂದಿಷ್ಟು ವಿಷ ಕೊಡಿ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ಅಯ್ಯಣ್ಣ ಹಾಲಬಾವಿ ಆಕ್ರೋಶ ವ್ಯಕ್ತಪಡಿಸಿದರು.
ಕೃಷ್ಣಾ ಎಡದಂಡೆ ಕಾಲುವೆಗಳಿಗೆ ಏ.೧೫ರ ವರೆಗೆ ನೀರು ಹರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯ ನೇತೃತ್ವದಲ್ಲಿ ತಾಲೂಕಿನ ದೇವಾಪುರ ಮನಗೂಳಿ ಹಾಗೂ ಬೀದರ್ ಬೆಂಗಳೂರು ರಾಜ್ಯ ಹೆದ್ದಾರಿಯ ದೇವಾಪುರ ಕ್ರಾಸ್ ನಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿ ಮಾತನಾಡಿ, ಕಳೆದ ಅನೇಕ ವರ್ಷಗಳಿಂದ ರೈತ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ತುಂಬಾ ತೊಂದರೆ ಅನುಭವಿಸುತ್ತಿದ್ದಾನೆ ಈಗ ಬೆಳೆಗಳು ಕಾಳು ಕಟ್ಟುತ್ತಿರುವ ಸಂದರ್ಭದಲ್ಲಿ ಏಪ್ರಿಲ್ ೧೫ರವರೆಗೆ ನೀರು ಹರಿಸದಿದ್ದಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬರೆದಂತಾಗಲಿದೆ. ಸರಕಾರ ಮಾರ್ಚ್ ೨೧ರವರೆಗೆ ನೀರುಹರಿಸಿ ನಂತರ ಏಪ್ರಿಲ್ ತಿಂಗಳಲ್ಲಿ ಮೂರು ದಿನ ನೀರು ಹರಿಸುವ ಕುರಿತು ಹೇಳಲಾಗುತ್ತಿದ್ದು ಈ ರೀತಿ ಮಾಡಿದಲ್ಲಿ ಕೊನೆ ಭಾಗದ ರೈತರ ಜಮೀನುಗಳಿಗೆ ನೀರು ಬರದೆ ರೈತರ ಬೆಳೆದ ಬೆಳೆ ಹಳದಿ ತುಂಬಾ ತೊಂದರೆ ಉಂಟಾಗಲಿದೆ. ಏಪ್ರಿಲ್ ೧೫ರವರೆಗೆ ನೀರು ಹರಿಸಬೇಕು ಇಲ್ಲವಾದಲ್ಲಿ ರೈತರಿಗೆ ಸರ್ಕಾರ ಒಂದಿಷ್ಟು ವಿಷ ಕೊಡಲಿ ಎಂದು ಆಕ್ರೋಶದಿಂದ ಮಾತನಾಡಿ ಸರ್ಕಾರ ಏಪ್ರಿಲ್ ೧೫ ರವರೆಗೆ ನೀರು ಹರಿಸದಿದ್ದಲ್ಲಿ ನಿರಂತರವಾಗಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.ಷಂಘದ ಜಿಲ್ಲಾಧ್ಯಕ್ಷ ಅಯ್ಯಣ್ಣ ಹಾಲಬಾವಿ, ಮಹಾದೇವಮ್ಮ ಬೇನಾಳಮಠ, ಜೆಡಿಎಸ್ ಮುಖಂಡ ದೇವೇಂದ್ರಪ್ಪ ಬಳಿಚಕ್ರ, ಶ್ರವಣಕುಮಾರ ನಾಯಕ, ಸಚಿನ್ ಕುಮಾರ್ ನಾಯಕ, ಸಂಘದ ತಾಲೂಕ ಅಧ್ಯಕ್ಷ ಹಣಮಂತ್ರಾಯ ಚಂದ್ಲಾಪುರ, ಹನುಮಗೌಡ ನಾರಾಯಣಪುರ, ಸಾಹೇಬ ಗೌಡ ಮದಲಿಂಗನಾಳ ಇತರರು ಮಾತನಾಡಿದರು. ನಂತರ ನಾರಾಯಣಪುರ ಕೃಷ್ಣ ಭಾಗ್ಯ ಜಲ ನಿಗಮದ ಮುಖ್ಯ ಅಭಿಯಂತರರಿಗೆ ಬರೆದ ಮನವಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಜಿ.ಜಿ ಪವಾರ್ ಅವರ ಮೂಲಕ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಖಂಡರುಗಳಾದ ವೆಂಕಟೇಶ ಕುಪಗಲ್, ತಿಪ್ಪಣ್ಣ ಜಂಪಾ, ಗದ್ದೆಪ್ಪ ನಾಗದೇವಿ ನಾಳ, ಮಲ್ಲಣ್ಣ ಹಾಲಬಾವಿ, ಮಲ್ಲಣ್ಣ ಗುಳಬಾಳ, ದೇವಪ್ಪ ಯರಕಿಹಾಳ, ಸಂಜೀವ ಗುಳಬಾಳ, ತಿಪ್ಪಣ್ಣ ಇಟ್ಟಂಗಿ, ಬುಚ್ಚಪ್ಪ ನಾಯಕ, ಗೋವಿಂದ ಪತ್ತಾರ, ಹೈಯಾಳಪ್ಪ ಕವಡಿಮಟ್ಟಿ, ಬಸವರಾಜ ಬೂದಿಹಾಳ, ಪಾನಪ್ಪ ಕೊಂಬಿನ್, ಭೀಮಣ್ಣ ತಿಪ್ಪನಟಗಿ, ಭೀಮನಗೌಡ ಕರ್ನಾಳ, ರಾಘು ಕುಪ್ಪಗಲ್, ನಾಗಪ್ಪ ಕುಪ್ಪಗಲ್, ಶಿವನಗೌಡ ರುಕ್ಮಾಪುರ, ಮೌನೇಶ ಹರಳಹಳ್ಳಿ, ಪ್ರಭು ದೊರಿ, ದೇವಿಂದ್ರಪ್ಪ ತಿಪ್ಪನಟಗಿ, ನಿಂಗನಗೌಡ ಗುಳಬಾಳ, ಭೀಮರಾಯ ಒಕ್ಕಲಿಗ, ತಿಪ್ಪಣ್ಣ ತಳವಾರ, ವೆಂಕೋಪ ದೊರೆ ಕುಪಗಲ್,ಖುದಾಭಕ್ಷ, ಲೋಹಿತ ಕುಮಾರ, ಭೀಮನಗೌಡ ಸೂಗೂರ, ಮಾನಪ್ಪ ಕೊಂಬಿನ್, ಹಣಮಂತ ಕುಂಬಾರಪೇಟೆ ,ಶಿವಲಿಂಗಪ್ಪ ಕುಂಬಾರಪೇಟೆ,ಚAದ್ರಶೇಖರ ಗುಳಬಾಳ, ಕಾಮರಾಯ ಮೊದಲಿಂಗನಾಳ, ಶಂಕ್ರಪ್ಪ ಗುಳಬಾಳ ಸೇರಿದಂತೆ ಅನೇಕರು ಭಾಗವಹಿಸಿದ್ದರು.






















