
ಧಾರವಾಡ, ಮಾ14: ಗೃಹಬಳಕೆಯ ಗ್ರಾಹಕರಿಗೆ ಗೃಹಬಳಕೆಯ ಸಿಲಿಂಡರ್‍ಗಳನ್ನು ವಿತರಿಸಲಾಗುತ್ತಿದೆ. ಗೃಹಬಳಕೆ ಸಿಲಿಂಡರ್‍ಗಾಗಿ ಬುಕ್ಕ್ ಮಾಡಲು ನಗರ ಪ್ರದೇಶದ ಗ್ರಾಹಕರಿಗೆ 25 ದಿನ ಮತ್ತು ಗ್ರಾಮೀಣ ಭಾಗದ ಗ್ರಾಹಕರಿಗೆ 45 ದಿನಗಳ ಅವಕಾಶವಿದೆ. ಯಾರು ಕೂಡಾ ವದಂತಿಗಳಿಗೆ ಒಳಗಾಗಿ ಅವಸರ ಪಡದೇ ಸಹಕಾರ ನೀಡಬೇಕೆಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಹೇಳಿದರು.
ಅವರು ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಸಭಾಂಗಣದಲ್ಲಿ ಎಲ್‍ಪಿಜಿ ವಿತರಕರ, ಹೋಟೆಲ್ ಮಾಲೀಕರ ಮತ್ತು ಸಿಲಿಂಡರ್ ಏಜೆನ್ಸಿಗಳ ಪ್ರತಿನಿಧಿಗಳ ಸಭೆ ಜರುಗಿಸಿ, ಮಾತನಾಡಿದರು.
ಕೇವಲ ಗೃಹಬಳಕೆಯ ಸಿಲಿಂಡರ್‍ಗಳನ್ನು ಮಾತ್ರ ನಿಯಮಾನುಸಾರ ವಿತರಿಸಲಾಗುತ್ತಿದೆ. ಮಾರುಕಟ್ಟೆಯಲ್ಲಿ ಗೃಹಬಳಕೆಯ ಸಿಲಿಂಡರ್‍ಗಳನ್ನು ಅಥವಾ ಸಣ್ಣ ಸಿಲಿಂಡರ್‍ಗಳನ್ನು ಹೆಚ್ಚಿನ ದರಕ್ಕೆ ಕಾಳಸಂತೆಯಲ್ಲಿ ಮಾರಾಟ ಮಾಡಿದರೆ ಕಾನೂನು ಕ್ರಮಕೈಗೊಳ್ಳಲಾಗುವುದು. ಈ ಕುರಿತು ಪರಿಶೀಲಿಸಿ ಕ್ರಮಕೈಗೊಳ್ಳಲು ತಂಡಗಳನ್ನು ರಚಿಸಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿರ್ದೇಶನದ ಪ್ರಕಾರ ಗ್ರಾಹಕರಿಗೆ ಸಿಲಿಂಡರ್‍ಗಳನ್ನು ವಿತರಿಸಲಾಗುತ್ತಿದೆ ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಐಓಸಿ 13, ಬಿಪಿಸಿ 18, ಎಚ್‍ಪಿಸಿ 22 ಒಟ್ಟು 55 ಗ್ಯಾಸ್ ಡೀಲರ್ಸ್‍ಗಳು ಇದ್ದಾರೆ. ಮತ್ತು ಐಓಸಿ, ಬಿಪಿಸಿ, ಎಚ್‍ಪಿಸಿ ಕಂಪನಿಗಳು ಸೇರಿ ಸಿಂಗಲ್ ಗ್ಯಾಸ್ ಕನೆಕ್ಷನ್ 2,83,796 ಮತ್ತು ಡಬಲ್ ಗ್ಯಾಸ್ ಕನೆಕ್ಷನ್ 3,47,265 ಸೇರಿ ಒಟ್ಟು 6,31,061 ಗ್ಯಾಸ್ ಸಂಪರ್ಕಗಳಿವೆ. ಮತ್ತು ವಾಣಿಜ್ಯ ಬಳಕೆಗಾಗಿ 11,799 ವಾಣಿಜ್ಯ ಸಿಲಿಂಡರ್ ಸಂಪರ್ಕಗಳಿವೆ. ಒಟ್ಟಾರೆಯಾಗಿ ಗೃಹಬಳಕೆ ಮತ್ತು ವಾಣಿಜ್ಯ ಬಳಕೆ ಸೇರಿ 6,42,860 ಗ್ಯಾಸ್ ಸಂಪರ್ಕಗಳಿವೆ. ಕಳೆದ 60 ದಿನಗಳ ಸರಾಸರಿಯಂತೆ ಪ್ರತಿದಿನ ಜಿಲ್ಲೆಯಲ್ಲಿ 10,987 ಸಿಲಿಂಡರ್‍ಗಳನ್ನು ವಿತರಿಸಲಾಗುತ್ತಿದೆ ಎಂದು ಅವರು ಹೇಳಿದರು.
ಸಿಲಿಂಡರ್‍ಗಳ ವಿತರಣೆಯಲ್ಲಿ ವೈದ್ಯಕೀಯ, ಶಾಲಾ ಕಾಲೇಜು, ಅಂಗನವಾಡಿ, ಹಾಸ್ಟೇಲ್, ಇಂದಿರಾ ಕ್ಯಾಂಟಿನ್‍ಗಳಿಗೆ ಆಧ್ಯತೆ ನೀಡಬೇಕು. ಸಿಲಿಂಡರ್‍ಗಳ ರೀಫಿಲಿಂಗ್ ಬುಕ್ಕಿಂಗ್ ಮಾಡಿದ ಕನಿಷ್ಠ 25 ದಿನಗಳ ನಂತರ ನಗರಗಳಲ್ಲಿ ಹಾಗೂ 45 ದಿನಗಳ ನಂತರ ಗ್ರಾಮೀಣ ಭಾಗದಲ್ಲಿ ಸಿಲಿಂಡರ್‍ಗಳು ದೊರೆಯುತ್ತವೆ. ಗೃಹಬಳಕೆಯ ಸಿಲಿಂಡರ್‍ಗಳನ್ನು ಅಕ್ರಮವಾಗಿ ವಾಣಿಜ್ಯ ಬಳಕೆಗೆ ಬಳಸಿಕೊಳ್ಳುವುದನ್ನು ನಿರ್ಭಂಧಿಸಲಾಗಿದೆ. ಮತ್ತು ಅಕ್ರಮ ಅನೀಲ ಸಿಲಿಂಡರ್‍ಗಳ ವಿತರಣೆ ಕಂಡುಬಂದಲ್ಲಿ ಅಗತ್ಯ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಸಭೆಯಲ್ಲಿ ತಿಳಿಸಿದರು.
ಜಿಲ್ಲೆಯಲ್ಲಿ ಎಲ್‍ಪಿಜಿ ಸಿಲೆಂಡರ್‍ಗಳ ಕೊರತೆ ಇರುವುದಿಲ್ಲ. ಆದ್ದರಿಂದ ಸಾರ್ವಜನಿಕರು, ಜಿಲ್ಲೆಯ ಎಲ್ಲಾ ಎಲ್‍ಪಿಜಿ ಗ್ರಾಹಕರು ಭಯಪಡುವ ಅಗತ್ಯವಿಲ್ಲ ಮತ್ತು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿರುವ ಸುಳ್ಳು ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು. ಗ್ರಾಹಕರು ಸಿಲಿಂಡರ್‍ಗಳ ರೀಫಿಲಿಂಗ್ ಬುಕ್ಕಿಂಗ್ ಮಾಡಿದ ನಂತರ ಕನಿಷ್ಠ ಅವಧಿಗೆ ಕಾಯಬೇಕು. ಅನಗತ್ಯವಾಗಿ ಗ್ಯಾಸ್ ವಿತರಕರ ಹಾಗೂ ಗ್ಯಾಸ್ ಡಿಲರ್‍ಗಳ ಕಚೇರಿ ಅಥವಾ ಉಗ್ರಾಣಗಳಿಗೆ ತೆರಳಿ ಒತ್ತಡ ಹಾಕಬಾರದು ಅವರು ಸಹ ಸರ್ಕಾರದ ಸೂಚನೆಗಳ ಪ್ರಕಾರ ಕಾರ್ಯನಿರ್ವಹಿಸಬೇಕು. ಆದ್ದರಿಂದ ಸಾರ್ವಜನಿಕರು ಸಹಕಾರ ನೀಡಬೇಕೆಂದು ಅವರು ಹೇಳಿದರು.
ಗೃಹಬಳಕೆ ಸಿಲೆಂಡರ್‍ಗಳನ್ನು ವಾಣಿಜ್ಯ ಬಳಕೆಗೆ ಉಪಯೋಗಿಸಬಾರದು. ಅಲ್ಲದೇ ಸಿಲೆಂಡರ್‍ಗಳನ್ನು ಅನಧಿಕೃತವಾಗಿ ಸಂಗ್ರಹಿಸಿ ಒಂದು ಸಿಲೆಂಡರ್‍ನಿಂದ ಮತ್ತೊಂದು ಸಿಲೆಂಡರ್‍ಗೆ ವರ್ಗಾಯಿಸುವದು (ಐiqueಜಿieಜ Peಣಡಿoಟeum ಉಚಿs (ಖಇಉUಐಂಖಿIಔಓ ಔಈ SUPPಐಙ ಂಓಆ ಆISಖಿಖUಃUಖಿIಔಓ) ಔಡಿಜeಡಿ 2000 ರನ್ವಯ) ಅಪರಾಧವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ತಿಳಿಸಿದರು.
ಸಭೆಯಲ್ಲಿ ಧಾರವಾಡ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಮಹೇಶ ಶೆಟ್ಟಿ ಹಾಗೂ ಗ್ಯಾಸ್ ಡಿಲರ್ಸ್ ಮಾಲೀಕರು ಮಾತನಾಡಿದರು.
ಸಭೆಯಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಜಂಟಿ ನಿರ್ದೇಶಕ ವಿನೋದಕುಮಾರ ಹೆಗ್ಗಳಗಿ, ಐಓಸಿ, ಬಿಪಿಸಿ, ಎಚ್‍ಪಿಸಿ ಕಂಪನಿಗಳ ಪ್ರತಿನಿಧಿಗಳು, ಹೋಟೆಲ್ ಮಾಲೀಕರ ಸಂಘದ ಪದಾಧಿಕಾರಿಗಳು, ಹೋಟೆಲ್ ಮಾಲೀಕರು, ಗ್ಯಾಸ್ ವಿತರಕರು ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಆಹಾರ ನಿರೀಕ್ಷಕರು ಭಾಗವಹಿಸಿದ್ದರು.






















