Home ಜಿಲ್ಲೆ ದೊರನಹಳ್ಳಿಗೆ ಸರ್ಕಾರಿ ಪಿಯು ಕಾಲೇಜು ಮಂಜೂರು!೨೦೨೬-೨೭ರಿAದಲೇ ಕಾಲೇಜು ಆರಂಭ – ವಿದ್ಯಾರ್ಥಿಗಳಿಗೆ ದೊಡ್ಡ ವರ

ದೊರನಹಳ್ಳಿಗೆ ಸರ್ಕಾರಿ ಪಿಯು ಕಾಲೇಜು ಮಂಜೂರು!೨೦೨೬-೨೭ರಿAದಲೇ ಕಾಲೇಜು ಆರಂಭ – ವಿದ್ಯಾರ್ಥಿಗಳಿಗೆ ದೊಡ್ಡ ವರ

ಯಾದಗಿರಿ:ಮಾ.೧೪:ಯಾದಗಿರಿ ಮತಕ್ಷೇತ್ರದ ದೊರನಹಳ್ಳಿ ಪಟ್ಟಣದ ವಿದ್ಯಾರ್ಥಿಗಳ ದೀರ್ಘಕಾಲದ ಕನಸು ಇದೀಗ ನನಸಾಗಲಿದೆ. ಪಟ್ಟಣದಲ್ಲಿ ಸರ್ಕಾರಿ ಪಿಯು ಕಾಲೇಜಿನ ಅಗತ್ಯವಿರುವುದನ್ನು ಮನಗಂಡು ಸರ್ಕಾರದ ಗಮನಕ್ಕೆ ವಿಷಯ ತಂದು, ದೊರನಹಳ್ಳಿಗೆ ಸರ್ಕಾರಿ ಪಿಯು ಕಾಲೇಜು ಮಂಜೂರು ಮಾಡಿಸಲಾಗಿದೆ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ ತಿಳಿಸಿದ್ದಾರೆ.

೨೦೨೬-೨೭ನೇ ಶೈಕ್ಷಣಿಕ ಸಾಲಿನಿಂದಲೇ ಈ ಸರ್ಕಾರಿ ಪಿಯು ಕಾಲೇಜು ಕಾರ್ಯಾರಂಭ ಮಾಡಲಿದ್ದು, ಇದರಿಂದ ದೊರನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳಿಗೆ ಮಹತ್ತರ ಅನುಕೂಲವಾಗಲಿದೆ. ಇದುವರೆಗೆ ಪಿಯು ಶಿಕ್ಷಣಕ್ಕಾಗಿ ದೂರದ ಪಟ್ಟಣಗಳಿಗೆ ತೆರಳಬೇಕಾದ ವಿದ್ಯಾರ್ಥಿಗಳ ಸಮಸ್ಯೆಗೆ ಪರಿಹಾರ ಸಿಗಲಿದೆ.

ಈ ಮಹತ್ವದ ನಿರ್ಧಾರಕ್ಕೆ ಸ್ಪಂದಿಸಿ ದೊರನಹಳ್ಳಿ ಪಟ್ಟಣಕ್ಕೆ ಪಿಯು ಕಾಲೇಜು ಮಂಜೂರು ಮಾಡಿದ ರಾಜ್ಯದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು, ಶಿಕ್ಷಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಯಾದಗಿರಿ ಮತಕ್ಷೇತ್ರದ ಜನತೆ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುವುದಾಗಿ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ ತಿಳಿಸಿದ್ದಾರೆ.