
ಸುರಪುರ:ಮಾ.೧೪: ತಾಲೂಕಿನ ಪೇಠ ಅಮ್ಮಾಪುರ ಗ್ರಾಮದಲ್ಲಿನ ಶ್ರೀ ರಾಮಲಿಂಗೇಶ್ವರ ಮಂಟೂರ ಶಾಖಾ ಮಠದ ೨೫ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಮಠದಲ್ಲಿ ಲಕ್ಷ ದೀಪೋತ್ಸವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಮಂಟೂರು ಮಠದ ಪೀಠಾಧಿಪತಿಗಳಾದ ಶ್ರೀ ಮಹಾಂತಲಿAಗ ಮಹಾಸ್ವಾಮಿಗಳು ನೆರವೇರಿಸಿದರು. ಶ್ರೀ ವೀರಯ್ಯ ಸ್ವಾಮಿಗಳು ವಡಿಗೇರಿ ಸಾನಿಧ್ಯ ವಹಿಸಿದ್ದರು ಹಾಗೂ ರಾಮಲಿಂಗೇಶ್ವರ ಮಠ ಪೇಠ ಅಮ್ಮಾಪುರದ ಶ್ರೀರಾಮ ಶರಣರು ಅಧ್ಯಕ್ಷತೆ ವಹಿಸಿದ್ದರು,ಮುಖ್ಯ ಅತಿಥಿಗಳಾಗಿ ಶ್ರೀ ಅಮರಯ್ಯಸ್ವಾಮಿ ಹಿರೇಮಠ ಜಾಲಿಬೆಂಚಿ,ಶ್ರೀ ಮಣಿಕಂಠ ಮುತ್ಯಾ, ಶ್ರೀ ಸಾಯಿಬಾಬ ಮಠ ನಡಾಳ, ಶ್ರೀ ಸಿದ್ದಪ್ಪ ಹಿರೇಮಠ ಅಂಬಾಮಠ ಹಾಗೂ ಶಿವುಕುಮಾರ್ ಮುತ್ಯಾ ಹಿರೇಮಠ ಹೊನ್ನಳ್ಳಿ ಭಾಗವಹಿಸಿದ್ದರು. ಕಾರ್ಯಕ್ರಮದ ಉದ್ಘಾಟಕರಾದ ಮಂಟೂರು ಪೀಠದಿಪತಿಗಳಾದ ಶ್ರೀ ಮಹಾಂತಲಿAಗ ಮಹಾಸ್ವಾಮಿಗಳು ಲಕ್ಷ ದೀಪೋತ್ಸವಕ್ಕೆ ಚಾಲನೆ ನೀಡಿದರು ಹಾಗೂ ೨೦೨೬ ರ ಶ್ರೀ ರಾಮಲಿಂಗೇಶ್ವರ ಮಠದ ದಿನಚರಿ (ಕ್ಯಾಲೆಂಡರ್) ಬಿಡುಗಡೆಗೊಳಿಸಿದರು. ಪ್ರಾಸ್ತವಿಕವಾಗಿ ರಾಮಲಿಂಗೇಶ್ವರ ಮಠದ ರಾಮ ಶರಣರು ಹಾಗೂ ಕಾರ್ಯಕ್ರಮವನ್ನು ಉದ್ದೇಶಿಸಿ ಅಮರಯ್ಯ ಸ್ವಾಮಿ ಹಿರೇಮಠ್ ಜಾಲಿಬೆಂಚಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಮಲ್ಲಣ್ಣ ಸಾಹುಕಾರ್ ಜಾಲಿಬೆಂಚಿ,ನಿAಗಣ್ಣ ಕುಳಗೇರಿ ,ಗುರು ಹವಲ್ದಾರ್ ಬೋನ್ಹಾಳ,ವಿಜಯ್ ರೆಡ್ಡಿ ಬೋನ್ಹಾಳ,ಖಾನುಲಪ್ಪ ಮೂಕನೂರ, ನಾಗಪ್ಪ ಗೋಗಿ, ಮಲ್ಲಿಕಾರ್ಜುನ್ ಅರಿಕೇರಿ, ನಾಗಪ್ಪ ಬಳಿ,ಮಾನಪ್ಪ ಬಾವಿ, ಮಹೇಶ ಸರ್ವಿ, ಸನ್ನಿ ಯಾದವ್, ನರಸಪ್ಪ ಯಾದವ್, ಹಣಮಂತರಾಯ ತನಿಕೆದಾರ್ ಸೇರಿದಂತೆ ಅನೇಕ ಭಕ್ತರು ಭಾಗವಹಿಸಿದ್ದರು. ಮಲ್ಲಿಕಾರ್ಜುನರೆಡ್ಡಿ ಅಮ್ಮಾಪುರ ನಿರೂಪಿಸಿದರು, ವೆಂಕಟೇಶ್ ರಾವೂರು ಸ್ವಾಗತಿಸಿದರು, ಮಲ್ಲು ಬಡಿಗೇರ್ ಅವರು ವಂದಿಸಿದರು.






















