Home ಜಿಲ್ಲೆ ತರಬೇತಿ ಭವಿಷ್ಯಕ್ಕೆ ಉಪಯುಕ್ತ:ಐರೆಡ್ಡಿ

ತರಬೇತಿ ಭವಿಷ್ಯಕ್ಕೆ ಉಪಯುಕ್ತ:ಐರೆಡ್ಡಿ

ಸೈದಾಪುರ:ಮಾ.೧೪: ಎಪಿಡಿ ಸಂಸ್ಥೆ ಹಲವು ವರ್ಷಗಳಿಂದ ವಿಕಲಚೇತನರ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುತ್ತಿದ್ದೂ ಈ ತರಬೇತಿ ನಿಮ್ಮ ಭವಿಷ್ಯಕ್ಕೆ ಉಪಯುಕ್ತವಾಗಿದೆ. ಇದರ ಸರಿಯಾದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಂಗಾಪ್ಪಗೌಡ ಐರೆಡ್ಡಿ ಅಭಿಪ್ರಾಯಪಟ್ಟರು.
ಪಟ್ಟಣದ ಗ್ರಾಮ ಪಂಚಾಯಿತಿಯಲ್ಲಿ ಎಪಿಡಿ ಸಂಸ್ಥೆ ವತಿಯಿಂದ ಹಮ್ಮಿಕೊಂಡ ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸಂಸ್ಥೆ ತನ್ನ ಯೋಜನೆಗಳನ್ನು ಪರಿಣಾಮಕಾರಿ ಅಸ್ಥಿತ್ವಕ್ಕೆ ತರುವ ಪ್ರಯತ್ನ ಮಾಡಬೇಕು. ಪ್ರತಿಯೊಬ್ಬರಿಗೂ ಸೌಲಭ್ಯಗಳು ತಲಪಬೇಕು ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿ ನಾಗರಾಜ ತರಬೇತಿ ನಡೆಸಿಕೊಟ್ಟರು. ವಿದ್ಯಾ ವರ್ಧಕ ಪ್ರೌಢ ಶಾಲಾ ಮುಖ್ಯಗುರು ಲಿಂಗಾರೆಡ್ಡಿ ನಾಯಕ, ಪ್ರಾಂಶುಪಾಲ ಕರಬಸಯ್ಯ ದಂಡಿಗಿಮಠ, ಬಿಲ್ ಕಲೆಕ್ಟರ ಗೀತಾ, ಶಿವಯೋಗಿ, ತಾಲೂಕಾ ಸಂಯೋಜಕ ರಮೇಶ ಕಟ್ಟಿಮನಿ, ರಮೇಶ ಚಲವಾದಿ, ಮಲ್ಲಿಕಾರ್ಜುನ, ರಮೇಶ ನಾಯಕ, ತಾಯಪ್ಪ, ಶರಣಪ್ಪ. ಮಲ್ಲಯ್ಯ, ಅಮೀನರೆಡ್ಡಿ, ದೇವಿಂದ್ರಪ್ಪ ಸೇರಿದಂತೆ ಇತರರಿದ್ದರು.